ನವದೆಹಲಿ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಡಿ ಬರುವ ಚಲನಚಿತ್ರೋತ್ಸವಗಳ ನಿರ್ದೇಶನಾಲಯ ವಾರ್ಷಿಕವಾಗಿ ಕೊಡಮಾಡುವ 'ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ'ಗಳನ್ನು ಇಂದು ಘೋಷಿಸಿತು. 2022ನೇ ಸಾಲಿನ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಇವಾಗಿವೆ.
ವಿಜೇತರ ಪಟ್ಟಿ ಇಂತಿದೆ:
- ಅತ್ಯುತ್ತಮ ನಟ: ರಿಷಬ್ ಶೆಟ್ಟಿ (ಕಾಂತಾರ ಸಿನಿಮಾ)
- ಅತ್ಯುತ್ತಮ ಸಂಪೂರ್ಣ ಮನರಂಜನಾ ಸಿನಿಮಾ: ಕಾಂತಾರ
- ಅತ್ಯುತ್ತಮ ಆ್ಯಕ್ಷನ್ ಡೈರೆಕ್ಷನ್: ಕೆಜಿಎಫ್ 2
- ಚೊಚ್ಚಲ ಚಿತ್ರದಲ್ಲಿ ಅತ್ಯುತ್ತಮ ನಿರ್ದೇಶಕ: ಮಧ್ಯಂತರ (ಕನ್ನಡ)
- ಅತ್ಯುತ್ತಮ ಸಂಕಲನ: ಮಧ್ಯಂತರ (ಕನ್ನಡ)
- ಅತ್ಯುತ್ತಮ ಸ್ಕ್ರಿಪ್ಟ್ ಮತ್ತು ಅತ್ಯುತ್ತಮ ಛಾಯಾಗ್ರಹಣ: ಮೊನೊ ನೋ ಅವೇರ್ (ನಾನ್-ಫೀಚರ್ ಫಿಲ್ಮ್)
- ಅತ್ಯುತ್ತಮ ಸಂಗೀತ ಪ್ರಶಸ್ತಿ: ಸಂಯೋಜಕರಾದ ವಿಶಾಲ್-ಶೇಖರ್
- ಅತ್ಯುತ್ತಮ ಅನಿಮೇಷನ್ ಚಿತ್ರ: ಎ ಕೋಕೊನಟ್ ಟ್ರೀ
- ಅತ್ಯುತ್ತಮ ಚಿತ್ರ: ಗುಲ್ಮೊಹರ್
- ಅತ್ಯುತ್ತಮ ನಾನ್ ಫೀಚರ್ ಸಿನಿಮಾ: ಆಯೆನಾ (ಹಿಂದಿ/ಉರ್ದು)
- ಅತ್ಯುತ್ತಮ ಜೀವನಚರಿತ್ರೆ/ಐತಿಹಾಸಿಕ ಪುನರ್ನಿರ್ಮಾಣ ಚಿತ್ರ: ಅನಾಖಿ ಏಕ್ ಮೊಹೆಂಜೊ ದಾರೊ (ಮರಾಠಿ)
- ಅತ್ಯುತ್ತಮ ಕಲೆ/ಸಂಸ್ಕೃತಿ ಚಿತ್ರ: ರಂಗ ವಿಭೋಗ (ಕನ್ನಡ) ಮತ್ತು ವರ್ಸ (ಮರಾಠಿ)
- ಅತ್ಯುತ್ತಮ ಸಾಕ್ಷ್ಯಚಿತ್ರ: ಮರ್ಮರ್ಸ್ ಆಫ್ ದಿ ಜಂಗಲ್ (ಮರಾಠಿ)
- ಸಾಮಾಜಿಕ ಮತ್ತು ಪರಿಸರ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ನಾನ್-ಫೀಚರ್ ಚಿತ್ರ: ಆನ್ ದಿ ಬ್ರಿಂಕ್ ಸೀಸನ್ 2 - ಘರಿಯಾಲ್ (ಇಂಗ್ಲಿಷ್)
- ಅತ್ಯುತ್ತಮ ಅನಿಮೇಷನ್ ಚಿತ್ರ: ಎ ಕೋಕೊನಟ್ ಟ್ರೀ (ಸೈಲೆಂಟ್)
- ಅತ್ಯುತ್ತಮ ಕಿರುಚಿತ್ರ (30 ನಿಮಿಷಗಳವರೆಗೆ): ಕ್ಸುನೋಟಾ (XUNYOTA) (ಅಸ್ಸಾಮಿ)
- ಅತ್ಯುತ್ತಮ ನಿರ್ದೇಶನ: ಫ್ರಮ್ ದಿ ಶ್ಯಾಡೋಸ್ (ಬೆಂಗಾಳಿ/ಹಿಂದಿ/ಇಂಗ್ಲಿಷ್)
- ಅತ್ಯುತ್ತಮ ಛಾಯಾಗ್ರಹಣ: ಮೋನೋ ನೋ ಅವೇರ್ (ಹಿಂದಿ/ಇಂಗ್ಲಿಷ್)
- ಅತ್ಯುತ್ತಮ ಧ್ವನಿ ವಿನ್ಯಾಸ: ಯಾನ್ (ಹಿಂದಿ/ಮಲ್ವಿ)
- ಅತ್ಯುತ್ತಮ ಸಂಗೀತ ನಿರ್ದೇಶನ: ಫುರ್ಸತ್ (ಹಿಂದಿ)
- ಅತ್ಯುತ್ತಮ ನಿರೂಪಣೆ/ವಾಯ್ಸ್ ಓವರ್: ಮರ್ಮರ್ಸ್ ಆಫ್ ದಿ ಜಂಗಲ್ (ಮರಾಠಿ)
- ಅತ್ಯುತ್ತಮ ಸ್ಕ್ರಿಪ್ಟ್: ಮೋನೋ ನೋ ಅವೇರ್ (ಹಿಂದಿ ಮತ್ತು ಇಂಗ್ಲಿಷ್)
- ವಿಶೇಷ ಉಲ್ಲೇಖ: ಬೀರುಬಲ (ಅಸ್ಸಾಮಿ) ಮತ್ತು ಹರ್ಗಿಲಾ - ದಿ ಗ್ರೇಟರ್ ಅಡ್ಜಟಂಟ್ ಸ್ಟಾರ್ಕ್ (ಅಸ್ಸಾಮಿ)
- ಅತ್ಯುತ್ತಮ ಚಲನಚಿತ್ರ: ಆಟಂ (ಮಲಯಾಳಂ)
- ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಿತ್ರ: ಫೌಜಾ (ಹರ್ಯಾನ್ವಿ)
- ರಾಷ್ಟ್ರೀಯ, ಸಾಮಾಜಿಕ ಮತ್ತು ಪರಿಸರ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ಚಲನಚಿತ್ರ: ಕಚ್ ಎಕ್ಸ್‌ಪ್ರೆಸ್ (ಗುಜರಾತಿ)
- ಎ.ವಿ.ಜಿ.ಸಿನಲ್ಲಿ ಅತ್ಯುತ್ತಮ ಚಲನಚಿತ್ರ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್ ಗೇಮಿಂಗ್ ಮತ್ತು ಕಾಮಿಕ್): ಬ್ರಹ್ಮಾಸ್ತ್ರ- ಭಾಗ 1: ಶಿವ (ಹಿಂದಿ)
- ಅತ್ಯುತ್ತಮ ನಿರ್ದೇಶನ: ಉಂಚೈ (ಹಿಂದಿ)
- ಅತ್ಯುತ್ತಮ ನಟಿ : ತಿರುಚಿತ್ರಂಬಲಂ ನಟಿ (ತಮಿಳು) ಮತ್ತು ಕಚ್ ಎಕ್ಸ್‌ಪ್ರೆಸ್ ನಟಿ (ಗುಜರಾತಿ)
- ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ: ಫೌಜಾ (ಹರ್ಯಾನ್ವಿ)
- ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ: ಉಂಚೈ ನಟಿ (ಹಿಂದಿ)
- ಅತ್ಯುತ್ತಮ ಬಾಲ ಕಲಾವಿದ: ಮಲಿಕಪ್ಪುರಂ (ಮಲಯಾಳಂ)
- ಅತ್ಯುತ್ತಮ ಹಿನ್ನೆಲೆ ಗಾಯಕ: ಅರಿಜಿತ್ ಸಿಂಗ್ - ಬ್ರಹ್ಮಾಸ್ತ್ರ-ಭಾಗ 1: ಶಿವ (ಹಿಂದಿ)
- ಅತ್ಯುತ್ತಮ ಹಿನ್ನೆಲೆ ಗಾಯಕಿ: ಸೌದಿ ವೆಲ್ಲಕ್ಕ CC.225/2009 ಚಿತ್ರ (ಮಲಯಾಳಂ)
- ಅತ್ಯುತ್ತಮ ಛಾಯಾಗ್ರಹಣ: ಪೊನ್ನಿಯಿನ್ ಸೆಲ್ವನ್-ಭಾಗ I (ತಮಿಳು)
- ಅತ್ಯುತ್ತಮ ಚಿತ್ರಕಥೆ: ಆಟಂ (ಮಲಯಾಳಂ) ಮತ್ತು ಗುಲ್ಮೊಹರ್ (ಹಿಂದಿ)
- ಅತ್ಯುತ್ತಮ ಧ್ವನಿ ವಿನ್ಯಾಸ: ಪೊನ್ನಿಯಿನ್ ಸೆಲ್ವನ್-ಭಾಗ I (ತಮಿಳು)
- ಅತ್ಯುತ್ತಮ ಸಂಕಲನ: ಆಟಂ (ಮಲಯಾಳಂ)
- ಅತ್ಯುತ್ತಮ ನಿರ್ಮಾಣ ವಿನ್ಯಾಸ: ಅಪರಾಜಿತೊ (ಬಂಗಾಳಿ)
- ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನರ್: ಕಚ್ ಎಕ್ಸ್‌ಪ್ರೆಸ್ (ಗುಜರಾತಿ)
- ಅತ್ಯುತ್ತಮ ಮೇಕಪ್: ಅಪರಾಜಿತೊ (ಬಂಗಾಳಿ)
- ಅತ್ಯುತ್ತಮ ಸಂಗೀತ ನಿರ್ದೇಶನ: ಬ್ರಹ್ಮಾಸ್ತ್ರ- ಭಾಗ 1: ಶಿವ (ಹಿಂದಿ) ಮತ್ತು ಪೊನ್ನಿಯಿನ್ ಸೆಲ್ವನ್-ಭಾಗ I (ತಮಿಳು)
- ಅತ್ಯುತ್ತಮ ಸಾಹಿತ್ಯ: ಫೌಜಾ (ಹರ್ಯಾನ್ವಿ)
- ಅತ್ಯುತ್ತಮ ನೃತ್ಯ ಸಂಯೋಜನೆ: ತಿರುಚಿತ್ರಂಬಲಂ (ತಮಿಳು)