ನವದೆಹಲಿ: ಈಗಿಗಲಂತೂ ಬ್ಯಾಂಕಿಂಗ್ ನಮ್ಮ ಜೀವನದ ಬಹುಮುಖ್ಯ ಭಾಗವಾಗಿದೆ. UPI ಮತ್ತು ಇಂಟರ್ನೆಟ್ ಬ್ಯಾಂಕಿಂಗ್‌ನಂತಹ ಸೌಲಭ್ಯಗಳ ಮೂಲಕ ನಾವು ಪ್ರತಿದಿನ ಹಣದ ವಹಿವಾಟು ನಡೆಸುತ್ತಲೇ ಇದ್ದೇವೆ ಹಾಗೂ ನಡೆಸಲೇಬೇಕಾದ ಸ್ಥಿತಿಯಲ್ಲಿ ನಾವಿದ್ದೇವೆ. ಇದಕ್ಕಾಗಿ ನಮಗೆ ಬ್ಯಾಂಕ್ ಖಾತೆ ಬೇಕು. ಹೀಗಿರುವಾಗ ಎರಡ್ಮೂರು ಬ್ಯಾಂಕ್ ಖಾತೆ ಹೊಂದಿರುವ ಕೆಲವರಿದ್ದಾರೆ. ಆದಾಗ್ಯೂ, ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳು ನಿಮಗೆ ದೊಡ್ಡ ನಷ್ಟವನ್ನುಂಟು ಮಾಡಬಹುದು.
ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಲೇಬೇಕು:ವಾಸ್ತವವಾಗಿ, ಪ್ರತಿ ಖಾತೆ ನಿರ್ವಹಿಸಲು, ಅದರಲ್ಲಿ ನಿಗದಿತ ಮೊತ್ತವನ್ನು (ಕನಿಷ್ಠ ಬ್ಯಾಲೆನ್ಸ್) ಇರಿಸಬೇಕಾಗುತ್ತದೆ. ಅಲ್ಲದೇ, ಖಾತೆಯನ್ನು ನಿರ್ವಹಿಸಲು, ಜನರು ತಮ್ಮ ಎಲ್ಲ ಖಾತೆಗಳಲ್ಲಿ ಹಣವನ್ನು ಇಡಬೇಕಾಗುತ್ತದೆ. ಈ ಕಾರಣದಿಂದಾಗಿ, ನೀವು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿದ್ದರೆ, ದೊಡ್ಡ ಮೊತ್ತವು ಬ್ಯಾಂಕ್‌ಗಳಲ್ಲಿ ಸಿಲುಕಿಕೊಳ್ಳುತ್ತದೆ.
ಬ್ಯಾಂಕ್ ಖಾತೆಯಲ್ಲಿ ಇರಿಸಲಾಗಿರುವ ಈ ಮೊತ್ತದ ಮೇಲೆ ನೀವು ಗರಿಷ್ಠ ವಾರ್ಷಿಕವಾಗಿ ಶೇ 4 ರಿಂದ 5 ರಷ್ಟು ಬಡ್ಡಿಯನ್ನು ಪಡೆದುಕೊಳ್ಳಬಹುದು. ಅದೇ ಸಮಯದಲ್ಲಿ, ಉಳಿತಾಯ ಖಾತೆಯಲ್ಲಿ ಹಣವನ್ನು ಇರಿಸುವ ಬದಲು, ನೀವು ಅದನ್ನು ಇತರ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ, ವಾರ್ಷಿಕವಾಗಿ ಇದಕ್ಕಿಂತಲೂ ಹೆಚ್ಚಿನ ಬಡ್ಡಿ ಪಡೆದುಕೊಳ್ಳಬಹುದು.
ನಿರ್ವಹಣಾ ಶುಲ್ಕ, ಸೇವಾ ಶುಲ್ಕ:ಒಂದಕ್ಕಿಂತ ಹೆಚ್ಚು ಖಾತೆಗಳಿದ್ದರೆ ನಿರ್ವಹಣಾ ಶುಲ್ಕ ಮತ್ತು ಸೇವಾ ಶುಲ್ಕವನ್ನು ಪ್ರತ್ಯೇಕವಾಗಿ ಭರಿಸಬೇಕಾಗುತ್ತದೆ. ಇದಲ್ಲದೇ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಂತಹ ಇತರ ಬ್ಯಾಂಕಿಂಗ್ ಸೌಲಭ್ಯಗಳಿಗಾಗಿ ಬ್ಯಾಂಕ್ ನಿಮಗೆ ಶುಲ್ಕವನ್ನು ವಿಧಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಇಲ್ಲಿಯೂ ನೀವು ನಷ್ಟ ಅನುಭವಿಸಬೇಕಾಗುತ್ತದೆ.
ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ: ನೀವು ಒಂದಕ್ಕಿಂತ ಹೆಚ್ಚು ನಿಷ್ಕ್ರಿಯ ಖಾತೆಗಳನ್ನು ಹೊಂದಿದ್ದರೆ, ಅದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನಿಮ್ಮ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದ ಕಾರಣ, ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ನೀವು ಬ್ಯಾಂಕಿನಿಂದ ಸಾಲ ಪಡೆಯುವಲ್ಲಿ ತೊಂದರೆ ಎದುರಿಸಬೇಕಾಗುತ್ತದೆ.