ನವದೆಹಲಿ: ಇಂದು ಷೇರುವಹಿವಾಟಿನಲ್ಲಿ ಭಾರಿ ಅಸ್ಥಿರತೆ ಕಂಡು ಬಂದಿದೆ. ಪರಿಣಾಮ ಸೆನ್ಸೆಕ್ಸ್ 941 ಪಾಯಿಂಟ್‌ಗಳ ಭಾರಿ ಕುಸಿತ ಕಂಡಿದೆ. ಹಿಂದಿನ ಮುಕ್ತಾಯಕ್ಕಿಂತ ಗಣನೀಯವಾಗಿ ಕಡಿಮೆಯಾಗಿದೆ. ವಿದೇಶಿ ಬಂಡವಾಳ ಹೂಡಿಕೆದಾರರ ನಿರಂತರ ಮಾರಾಟದಿಂದಾಗಿ ಈ ಕುಸಿತ ಕಂಡು ಬಂದಿದೆ.
ಶೇ 1.18ರಷ್ಟು ಅಂಶಗಳ ಕುಸಿತ ಕಂಡಿರುವ ಷೇರುಪೇಟೆ 78,782.24 ಪಾಯಿಂಟ್‌ಗಳಲ್ಲಿ ಕೊನೆಗೊಂಡರೆ, ನಿಫ್ಟಿ ಬರೋಬ್ಬರಿ 309.00 ಪಾಯಿಂಟ್‌ಗಳು ಅಥವಾ 1.27 ಪಾಯಿಂಟ್‌ಗಳ ಇಳಿಕೆಯೊಂದಿಗೆ 23,995.35 ಅಂಶಗಳಲ್ಲಿ ದಿನದ ವ್ಯವಹಾರ ಮುಗಿಸಿದೆ.
ನಿಫ್ಟಿ ರಿಯಾಲ್ಟಿ ಶೇಕಡಾ 2.93 ರಷ್ಟು ಕುಸಿತ:ವಲಯವಾರು ಸೂಚ್ಯಂಕಗಳನ್ನು ನೋಡುವುದಾದರೆ, ನಿಫ್ಟಿ ರಿಯಾಲ್ಟಿ ಶೇಕಡಾ 2.93 ರಷ್ಟು ಕುಸಿತ ಕಾಣುವ ಮೂಲಕ ಅತ್ಯಂತ ಹೆಚ್ಚು ನಷ್ಟವನ್ನು ಅನುಭವಿಸಿದ ವಲಯವಾಗಿ ಮಾರ್ಪಟ್ಟಿತು. ಒಂದು ಹಂತದಲ್ಲಿ ಸೆನ್ಸೆಕ್ಸ್ ಸುಮಾರು 1,500 ಪಾಯಿಂಟ್‌ಗಳಷ್ಟು ಕುಸಿತ ಕಂಡು ಭಾರಿ ಮೊತ್ತದ ನಷ್ಟಕ್ಕೆ ಕಾರಣವಾಗಿತ್ತು. ಆದರೆ ನಂತರ ಸುಮಾರು 600 ಅಂಕಗಳಷ್ಟು ಏರಿಕೆ ದಾಖಲಿಸಿ, ಅಂತಿಮವಾಗಿ 941 ಅಂಕಗಳ ನಷ್ಟದೊಂದಿಗೆ ವ್ಯವಹಾರ ಕೊನೆಗೊಳಿಸಿದೆ.
94,017 ಕೋಟಿ ರೂ ಮೌಲ್ಯದ ಷೇರುಗಳ ಮಾರಾಟ:ವಿದೇಶಿ ಬಂಡವಾಳ ಹೂಡಿಕೆದಾರರು ಅಕ್ಟೋಬರ್‌ನಲ್ಲಿ ಒಟ್ಟಾರೆ 94,017 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈ ಮೂಲಕ ಕೋವಿಡ್ ಇಳಿಕೆಯ ನಂತರದ ಅತ್ಯಂತ ದೊಡ್ಡ ಮೊತ್ತದ ಷೇರು ಮಾರಾಟ ಇದಾಗಿದೆ ಎಂದು ಷೇರು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ. ನಾಲ್ಕು ತಿಂಗಳ ಕಾಲ ಖರೀದಿದಾರರಾಗಿದ್ದ FIIಗಳು ಅಕ್ಟೋಬರ್‌ನಲ್ಲಿ ಭಾರಿ ಪ್ರಮಾಣದಲ್ಲಿ ಷೇರುಗಳ ಮಾರಾಟ ಮಾಡುವ ಮೂಲಕ ಒಟ್ಟಾರೆ ಶೇ 7- 10 ಪ್ರತಿಶತದಷ್ಟು ಮಾರುಕಟ್ಟೆ ಇಳಿಕೆಗೆ ಕಾರಣರಾಗಿದ್ದಾರೆ ಎಂದು ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ ಡೇಟಾ ತೋರಿಸಿದೆ.