ETV Bharat / business

ಅದಾನಿ ವಿರುದ್ಧ ಅಮೆರಿಕದಲ್ಲಿ ಕೇಸ್​: ಮತ್ತೆ ದೊಡ್ಡ ಕುಸಿತ ಕಂಡ ಸೆನ್ಸೆಕ್ಸ್​, 23,349 ಅಂಕಗಳಿಗೆ ಇಳಿದ ನಿಫ್ಟಿ - STOCK MARKET

ಗುರುವಾರದ ವಹಿವಾಟಿನಲ್ಲಿ ಭಾರತದ ಷೇರು ಮಾರುಕಟ್ಟೆ ಇಳಿಕೆಯೊಂದಿಗೆ ಕೊನೆಗೊಂಡಿದೆ.

ಸೆನ್ಸೆಕ್ಸ್​ 420 ಅಂಕ ಕುಸಿತ, 23,349ಗೆ ಇಳಿದ ನಿಫ್ಟಿ
ಸೆನ್ಸೆಕ್ಸ್​ 420 ಅಂಕ ಕುಸಿತ, 23,349ಗೆ ಇಳಿದ ನಿಫ್ಟಿ (IANS)
author img

By ETV Bharat Karnataka Team

Published : Nov 21, 2024, 6:12 PM IST

ಮುಂಬೈ: ಭಾರತದ ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳು ಗುರುವಾರದ ವಹಿವಾಟಿನಲ್ಲಿ ಇಳಿಕೆಯೊಂದಿಗೆ ಕೊನೆಗೊಂಡವು. ಬಿಎಸ್ಇ ಸೆನ್ಸೆಕ್ಸ್ 421.80 ಪಾಯಿಂಟ್ಸ್ ಅಥವಾ ಶೇಕಡಾ 0.54 ರಷ್ಟು ಕುಸಿದು 77,156.80 ರಲ್ಲಿ ಕೊನೆಗೊಂಡಿದೆ. ಅದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 168.80 ಅಂಕಗಳ ನಷ್ಟದೊಂದಿಗೆ 23,349.90 ರಲ್ಲಿ ಕೊನೆಗೊಂಡಿದೆ.

ಅದಾನಿ ಕಂಪನಿಯ ಬಹುತೇಕ ಷೇರುಗಳಲ್ಲಿ ಭಾರಿ ಕುಸಿತ: ಗೌತಮ್ ಅದಾನಿ ಮತ್ತು ಇತರ ಕಾರ್ಯನಿರ್ವಾಹಕರ ವಿರುದ್ಧ ಯುಎಸ್ ಪ್ರಾಸಿಕ್ಯೂಟರ್​ಗಳು ಭಾರತೀಯ ಅಧಿಕಾರಿಗಳಿಗೆ 250 ಮಿಲಿಯನ್ ಡಾಲರ್ ಲಂಚ ನೀಡಿದ ಆರೋಪ ಹೊರಿಸಿದ್ದಾರೆ ಎಂಬ ಸುದ್ದಿಯ ನಂತರ ಅದಾನಿ ಗ್ರೂಪ್ ಷೇರುಗಳು ಶೇಕಡಾ 23 ಕ್ಕಿಂತ ಹೆಚ್ಚು ಕುಸಿದವು.

ಅದಾನಿ ಎಂಟರ್ ಪ್ರೈಸಸ್, ಅದಾನಿ ಪೋರ್ಟ್ಸ್, ಎಸ್​ಬಿಐ ಲೈಫ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಎನ್​ಟಿಪಿಸಿ ಸೇರಿದಂತೆ ನಿಫ್ಟಿ ಫಿಫ್ಟಿಯ 50 ಘಟಕ ಷೇರುಗಳ ಪೈಕಿ 37 ಷೇರುಗಳು ಶೇಕಡಾ 23.44 ರಷ್ಟು ನಷ್ಟದೊಂದಿಗೆ ಕೊನೆಗೊಂಡವು. ಮತ್ತೊಂದೆಡೆ ಪವರ್ ಗ್ರಿಡ್, ಅಲ್ಟ್ರಾಟೆಕ್ ಸಿಮೆಂಟ್, ಹಿಂಡಾಲ್ಕೊ, ಅಪೊಲೊ ಹಾಸ್ಪಿಟಲ್ಸ್ ಮತ್ತು ಗ್ರಾಸಿಮ್ ನಿಫ್ಟಿ ಲಾಭದೊಂದಿಗೆ ಕೊನೆಗೊಂಡವು.

ವಿಶಾಲ ಮಾರುಕಟ್ಟೆಗಳಲ್ಲಿ ನಿಫ್ಟಿ ಸ್ಮಾಲ್ ಕ್ಯಾಪ್ 100 ಮತ್ತು ನಿಫ್ಟಿ ಮಿಡ್ ಕ್ಯಾಪ್ 100 ಸೂಚ್ಯಂಕಗಳು ಕ್ರಮವಾಗಿ ಶೇಕಡಾ 0.30 ಮತ್ತು ಶೇಕಡಾ 0.46 ರಷ್ಟು ಕುಸಿದವು. ಏತನ್ಮಧ್ಯೆ, ಮಾರುಕಟ್ಟೆಯ ಚಂಚಲತೆಯನ್ನು ಅಳೆಯುವ ಇಂಡಿಯಾ ವಿಎಕ್ಸ್ ಶೇಕಡಾ 2.09 ರಷ್ಟು ಏರಿಕೆಯಾಗಿ 15.99 ಪಾಯಿಂಟ್​ಗಳಿಗೆ ತಲುಪಿದೆ.

ಐಟಿ, ರಿಯಾಲ್ಟಿ ಮತ್ತು ಖಾಸಗಿ ಬ್ಯಾಂಕ್​ ಷೇರು ಹೊರತು ಪಡಿಸಿ ಎಲ್ಲದರಲ್ಲೂ ನಷ್ಟ: ನಿಫ್ಟಿ ಐಟಿ, ರಿಯಾಲ್ಟಿ ಮತ್ತು ಖಾಸಗಿ ಬ್ಯಾಂಕ್ ಹೊರತುಪಡಿಸಿ ಎಲ್ಲಾ ವಲಯ ಸೂಚ್ಯಂಕಗಳು ಇಳಿಕೆಯೊಂದಿಗೆ ಕೊನೆಗೊಂಡವು. ನಿಫ್ಟಿ ಪಿಎಸ್​ಯು ಬ್ಯಾಂಕ್, ಮೀಡಿಯಾ ಮತ್ತು ಮೆಟಲ್ ತಲಾ ಶೇಕಡಾ 2 ಕ್ಕಿಂತ ಹೆಚ್ಚು ಕುಸಿದವು.

ದೇಶೀಯ ಈಕ್ವಿಟಿ ಮಾರುಕಟ್ಟೆಗಳಲ್ಲಿನ ಭಾರಿ ಮಾರಾಟ ಮತ್ತು ಅಸ್ಥಿರ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ನಡುವೆ ಕಚ್ಚಾ ತೈಲ ಬೆಲೆಗಳ ಏರಿಕೆಯಿಂದಾಗಿ ರೂಪಾಯಿ ಗುರುವಾರ ಯುಎಸ್ ಡಾಲರ್ ವಿರುದ್ಧ 8 ಪೈಸೆ ಕುಸಿದು ಸಾರ್ವಕಾಲಿಕ ಕನಿಷ್ಠ 84.50 ರಲ್ಲಿ (ತಾತ್ಕಾಲಿಕ) ಸ್ಥಿರವಾಯಿತು. ಮಂಗಳವಾರ, ಯುಎಸ್ ಡಾಲರ್ ವಿರುದ್ಧ ರೂಪಾಯಿ 84.42 ರಲ್ಲಿ ಕೊನೆಗೊಂಡಿತ್ತು. ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಯ ಕಾರಣ ವಿದೇಶಿ ವಿನಿಮಯ ಮಾರುಕಟ್ಟೆಯನ್ನು ಬುಧವಾರ ಮುಚ್ಚಲಾಗಿತ್ತು.

ಇದನ್ನೂ ಓದಿ : ವಿಶಾಖಪಟ್ಟಣಂ ಉಕ್ಕು ಕಾರ್ಖಾನೆ ಖಾಸಗೀಕರಣ ಮಾಡಲ್ಲ: ಆಂಧ್ರ ಪ್ರದೇಶ ಸರ್ಕಾರದ ಸ್ಪಷ್ಟನೆ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.