ETV Bharat / bharat

ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: ಪ್ರತಿಪಕ್ಷಗಳ ಬತ್ತಳಿಕೆಯಲ್ಲಿವೆ ಹಲವು ಅಸ್ತ್ರಗಳು! - PARLIAMENT WINTER SESSION

ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ವಕ್ಫ್‌ ಮಸೂದೆ, ಮಣಿಪುರ ಹಿಂಸಾಚಾರ, ಅದಾನಿ ಗ್ರೂಪ್ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣ ಹಾಗು ಬೆಲೆ ಏರಿಕೆ ಸೇರಿದಂತೆ ಮತ್ತಿತರ ವಿಷಯಗಳನ್ನು ಪ್ರಸ್ತಾಪಿಸಲು ಪ್ರತಿಪಕ್ಷಗಳು ಅಣಿಯಾಗಿವೆ.

ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ
ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ (Sansad.in)
author img

By ETV Bharat Karnataka Team

Published : Nov 25, 2024, 9:34 AM IST

ನವದೆಹಲಿ: ಮಹಾರಾಷ್ಟ್ರ, ಜಾರ್ಖಂಡ್‌ ವಿಧಾನಸಭಾ ಚುನಾವಣೆ ಹಾಗು ವಿವಿಧ ರಾಜ್ಯಗಳ ಉಪ ಚುನಾವಣೆಯ ಕಾವು ತಣ್ಣಗಾಗಿದ್ದು, ಇಂದು ಸಂಸತ್ತಿನ ಚಳಿಗಾಲದ ಅಧಿವೇಶನ ಶುರುವಾಗುತ್ತಿದೆ. ಅಧಿವೇಶನದಲ್ಲಿ ವಿವಿಧ ಮಸೂದೆಗಳನ್ನು ಮಂಡಿಸಲು ಆಡಳಿತಾರೂಢ ಎನ್‌ಡಿಎ ಸಜ್ಜಾಗಿದೆ. ಈ ಪೈಕಿ ವಕ್ಫ್ ಕಾಯಿದೆ (ತಿದ್ದುಪಡಿ) ಮಸೂದೆ ಪ್ರಮುಖವಾಗಿದೆ. ಪ್ರಸ್ತುತ ಅಧಿವೇಶನ ಡಿಸೆಂಬರ್ 20ರವರೆಗೆ ಮುಂದುವರೆಯಲಿದೆ.

ಮುಸಲ್ಮಾನ್ ವಕ್ಫ್‌ (ರದ್ದು) ಮಸೂದೆ, ಭಾರತೀಯ ವಾಯುಯಾನ್ ಮಸೂದೆ, ವಿಕೋಪ ನಿರ್ವಹಣಾ (ತಿದ್ದುಪಡಿ) ಮಸೂದೆ, ಬ್ಯಾಂಕಿಂಗ್‌ (ತಿದ್ದುಪಡಿ) ಕಾಯಿದೆಗಳು, ರೈಲ್ವೇ (ತಿದ್ದುಪಡಿ) ಮಸೂದೆ ಸೇರಿದಂತೆ ಹಲವು ಮಸೂದೆಗಳನ್ನು ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಪಟ್ಟಿ ಮಾಡಿದೆ.

ಎಲ್ಲ ವಿಚಾರಗಳ ಕುರಿತು ಚರ್ಚೆಗೆ ಸಿದ್ಧ- ಕೇಂದ್ರ: ಈ ಕುರಿತು ನಿನ್ನ ಪ್ರತಿಕ್ರಿಯಿಸಿರುವ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕಿರಣ್ ರಿಜಿಜು, ಶಾಂತಿಯುತ ಅಧಿವೇಶವನಕ್ಕೆ ಕರೆ ನೀಡುತ್ತಾ, ಕೇಂದ್ರ ಸರ್ಕಾರ ಎಲ್ಲ ವಿಚಾರಗಳ ಕುರಿತು ಚರ್ಚೆಗೆ ಸಿದ್ಧವಿದೆ ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನ ಸರ್ವಪಕ್ಷ ಸಭೆ ನಡೆಯಿತು. ಈ ಸಭೆಯಲ್ಲಿ ಉಭಯ ಸದನಗಳ ಎಲ್ಲ ಪಕ್ಷಗಳ ಸಭಾ ನಾಯಕರು ಪಾಲ್ಗೊಂಡಿದ್ದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಅಧ್ಯಕ್ಷತೆ ವಹಿಸಿದ್ದರು.

ನಾಳೆ ಸಂವಿಧಾನ ದಿನ, ಕಲಾಪವಿಲ್ಲ: ನಾಳೆ ನವೆಂಬರ್ 26ರಂದು 'ಸಂವಿಧಾನ ದಿನ' ಆಗಿರುವುದರಿಂದ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಯಾವುದೇ ಕಲಾಪವಿರುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಚಳಿಗಾಲದ ಅಧಿವೇಶನಕ್ಕೂ ಮುನ್ನ, ಇಂದು ಇಂಡಿಯಾ ಮೈತ್ರಿಕೂಟದ ನಾಯಕರು ಸಂಸತ್‌ ಭವನದಲ್ಲಿ ಸಭೆ ಸೇರಿ ಪ್ರತಿಪಕ್ಷಗಳ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಬೆಳಗ್ಗೆ 10ಕ್ಕೆ ಸಭೆ ನಡೆಯಲಿದೆ.

ಅಧಿವೇಶನದಲ್ಲಿ ಕಾಂಗ್ರೆಸ್‌ ಸದಸ್ಯರು ಪ್ರಮುಖವಾಗಿ, ಮಣಿಪುರ ಹಿಂಸಾಚಾರ ಮತ್ತು ಅದಾನಿ ಗ್ರೂಪ್‌ ಮೇಲಿರುವ ಭ್ರಷ್ಟಾಚಾರ ಆರೋಪ ಪ್ರಕರಣಗಳನ್ನು ಪ್ರಸ್ತಾಪಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆ: ಮಹಾಯುತಿ ಗೆಲುವಿನ ಸುನಾಮಿಯಲ್ಲಿ ಕೊಚ್ಚಿ ಹೋದ ವಿಪಕ್ಷ ನಾಯಕ ಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.