ETV Bharat / business

ಮುಂದಿನ ವರ್ಷ 200 ಕೋಟಿ ವೆಚ್ಚದಲ್ಲಿ 100 ಹೊಸ ಸ್ಕ್ರೀನ್ ಸೇರ್ಪಡೆ: ಪಿವಿಆರ್ ಐನಾಕ್ಸ್​

ಮುಂದಿನ ವರ್ಷ 100 ಹೊಸ ಸ್ಕ್ರೀನ್​ಗಳನ್ನು ಆರಂಭಿಸಲು ಪಿವಿಆರ್ ಯೋಜಿಸಿದೆ.

ಮುಂದಿನ ವರ್ಷ 200 ಕೋಟಿ ವೆಚ್ಚದಲ್ಲಿ 100 ಹೊಸ ಸ್ಕ್ರೀನ್ ಸೇರ್ಪಡೆ: ಪಿವಿಆರ್ ಐನಾಕ್ಸ್​
ಮುಂದಿನ ವರ್ಷ 200 ಕೋಟಿ ವೆಚ್ಚದಲ್ಲಿ 100 ಹೊಸ ಸ್ಕ್ರೀನ್ ಸೇರ್ಪಡೆ: ಪಿವಿಆರ್ ಐನಾಕ್ಸ್​ (IANS)
author img

By PTI

Published : 6 hours ago

ನವದೆಹಲಿ: ದೇಶದ ಪ್ರಖ್ಯಾತ ಸಿನಿಮಾ ಪ್ರದರ್ಶಕ ಕಂಪನಿ ಪಿವಿಆರ್ ಐನಾಕ್ಸ್ ಲಿಮಿಟೆಡ್ 200 ಕೋಟಿ ರೂಪಾಯಿ ವೆಚ್ಚದಲ್ಲಿ ಮುಂದಿನ ವರ್ಷ ಸುಮಾರು 100 ಹೊಸ ಸ್ಕ್ರೀನ್​ಗಳನ್ನು ಸೇರ್ಪಡೆ ಮಾಡಲು ಯೋಜಿಸಿದೆ ಎಂದು ಅದರ ಕಾರ್ಯನಿರ್ವಾಹಕ ನಿರ್ದೇಶಕ ಸಂಜೀವ್ ಕುಮಾರ್ ಬಿಜ್ಲಿ ಶುಕ್ರವಾರ ತಿಳಿಸಿದ್ದಾರೆ. ಚಲನಚಿತ್ರಗಳ ಹುಡುಕಾಟ ಮತ್ತು ಬುಕಿಂಗ್ ಸೌಲಭ್ಯಕ್ಕಾಗಿ ಎಐ ಚಾಲಿತ ವಾಟ್ ಸಾಪ್ ಚಾಟ್ ಬಾಟ್, ಮೂವಿ ಜಾಕಿ (ಎಂಜೆ) ಅನ್ನು ಪ್ರಾರಂಭಿಸಿದ ಕಂಪನಿಯು ಪ್ರತಿವರ್ಷ 100 ಸ್ಕ್ರೀನ್​ಗಳನ್ನು ಸೇರ್ಪಡೆ ಮಾಡಲು ಯೋಜಿಸಿದೆ.

45 - 50 ಸ್ಕ್ರೀನ್​ಗಳನ್ನು ಸ್ಥಗಿತಗೊಳಿಸಿದ್ದೇವೆ: "ಈ ವರ್ಷ ಇಲ್ಲಿಯವರೆಗೆ ನಾವು ಸುಮಾರು 70 ಸ್ಕ್ರೀನ್​ಗಳನ್ನು ಸೇರಿಸಿದ್ದೇವೆ ಮತ್ತು ಸುಮಾರು 45 - 50 ಸ್ಕ್ರೀನ್​ಗಳನ್ನು ಸ್ಥಗಿತಗೊಳಿಸಿದ್ದೇವೆ. ನಾವು ಈ ವರ್ಷ ಇನ್ನೂ 40 ಸ್ಕ್ರೀನ್​ಗಳನ್ನು ಸೇರಿಸಲಿದ್ದೇವೆ ಮತ್ತು 10-15 ಸ್ಕ್ರೀನ್​ಗಳನ್ನು ಸ್ಥಗಿತಗೊಳಿಸಲಿದ್ದೇವೆ" ಎಂದು ಬಿಜ್ಲಿ ಪಿಟಿಐಗೆ ತಿಳಿಸಿದರು. ಈ ವರ್ಷ ಸುಮಾರು 75 ಚಿತ್ರಮಂದಿರಗಳನ್ನು ಮುಚ್ಚುವ ಮತ್ತು ಸುಮಾರು 120 ಚಿತ್ರಮಂದಿರಗಳನ್ನು ಸೇರಿಸುವ ಆಲೋಚನೆ ಇತ್ತು. ಸದ್ಯ ನಾವು ಅದೇ ಮಾರ್ಗದಲ್ಲಿ ಸಾಗುತ್ತಿದ್ದೇವೆ ಎಂದು ಅವರು ಹೇಳಿದರು.

ಅಸೆಟ್ ಲೈಟ್ ಮಾದರಿ ಅಳವಡಿಕೆಗೆ ಪ್ರಯತ್ನ:"ನಾವು ಈಗ ಅಸೆಟ್ ಲೈಟ್ ಮಾದರಿಯನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಡೆವಲಪರ್​ಗಳು ದೊಡ್ಡ ಪ್ರಮಾಣದ ಹೂಡಿಕೆ ಮಾಡಲಿದ್ದಾರೆ" ಎಂದು ಅವರು ಹೇಳಿದರು. ಪ್ರಸ್ತುತ, ಪಿವಿಆರ್ ಐನಾಕ್ಸ್ ಭಾರತದಾದ್ಯಂತ 111 ನಗರಗಳಲ್ಲಿ 355 ಚಿತ್ರಮಂದಿರಗಳಲ್ಲಿ 1,744 ಸ್ಕ್ರೀನ್​ಗಳನ್ನು ಹೊಂದಿದೆ.

ಬಾಕ್ಸ್ ಆಫೀಸ್ ಅಲ್ಲದ ಮೂಲಗಳಿಂದ ಆದಾಯ ಸಂಗ್ರಹದ ಗುರಿ: ಬಾಕ್ಸ್ ಆಫೀಸ್ ಆದಾಯದ ಹೊರತಾಗಿ ಕಂಪನಿಯು ಆಹಾರ ಮತ್ತು ಪಾನೀಯ ಮಾರಾಟ, ಜಾಹೀರಾತು, ಅನುಕೂಲಕರ ಶುಲ್ಕಗಳು ಮತ್ತು ಚಲನಚಿತ್ರ ನಿರ್ಮಾಣ / ವಿತರಣೆಯಿಂದ ಬರುವ ಆದಾಯದಂತಹ ಬಾಕ್ಸ್ ಆಫೀಸ್ ಅಲ್ಲದ ಮೂಲಗಳಿಂದ ಆದಾಯವನ್ನು ಗಳಿಸುತ್ತದೆ. ಕಂಪನಿಯು ತನ್ನ ಅಂಗಸಂಸ್ಥೆ ಪಿವಿಆರ್ ಪಿಕ್ಚರ್ಸ್ ಮೂಲಕ ಚಲನಚಿತ್ರ ವಿತರಣೆ ಮತ್ತು ನಿರ್ಮಾಣ ವ್ಯವಹಾರವನ್ನು ನಿರ್ವಹಿತ್ತಿದೆ.

ಇದು ಭಾರತೀಯ ಮತ್ತು ಅಂತರರಾಷ್ಟ್ರೀಯ ಚಲನಚಿತ್ರಗಳನ್ನು ಸ್ವಾಧೀನಪಡಿಸಿಕೊಳ್ಳುತ್ತದೆ ಮತ್ತು ವಿತರಿಸುತ್ತದೆ. ಪ್ರಿಯಾ ಎಕ್ಸಿಬಿಟರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ವಿಲೇಜ್ ರೋಡ್ ಶೋ ಲಿಮಿಟೆಡ್ ನಡುವಿನ ಜಂಟಿ ಉದ್ಯಮ ಒಪ್ಪಂದಕ್ಕೆ ಅನುಸಾರವಾಗಿ ಪಿವಿಆರ್ ಲಿಮಿಟೆಡ್ ಅನ್ನು ಏಪ್ರಿಲ್ 26, 1995 ರಂದು ಪ್ರಿಯಾ ವಿಲೇಜ್ ರೋಡ್ ಶೋ ಲಿಮಿಟೆಡ್ ಆಗಿ ಸಂಯೋಜಿಸಲಾಯಿತು.

ಕಂಪನಿಯು ಜೂನ್ 1997 ರಲ್ಲಿ ನವದೆಹಲಿಯ ಸಾಕೇತ್ ನಲ್ಲಿ ಭಾರತದ ಮೊದಲ ಮಲ್ಟಿಪ್ಲೆಕ್ಸ್ ಸಿನೆಮಾ ಪಿವಿಆರ್ ಅನುಪಮ್ ಅನ್ನು ಸ್ಥಾಪಿಸಿತು ಮತ್ತು ಗಣಕೀಕೃತ ಟಿಕೆಟ್ ಗಳನ್ನು ಮಾರಾಟ ಮಾಡುವ ಮೂಲಕ ಬಾಕ್ಸ್ ಆಫೀಸ್ ಕಾರ್ಯಾಚರಣೆಗಳನ್ನು ಗಣಕೀಕೃತಗೊಳಿಸಿತು.

ಇದನ್ನೂ ಓದಿ : ಭತ್ತದ ಬೆಲೆಯಲ್ಲಿ ಹಾವು ಏಣಿ ಆಟ; ಕಂಗಾಲಾದ ಅನ್ನದಾತ, ಇ-ಟೆಂಡರ್ ಮೂಲಕ ಖರೀದಿಗೆ ಒತ್ತಾಯ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.