ETV Bharat / state

ಮೈಕ್ರೋ ಫೈನಾನ್ಸ್​ ಕಿರುಕುಳ ಆರೋಪ; ಹಾವೇರಿ ಜಿಲ್ಲೆಯಲ್ಲಿ ಮತ್ತೋರ್ವ ವ್ಯಕ್ತಿ ಆತ್ಮಹತ್ಯೆ - MICRO FINANCE CASE

ಮೈಕ್ರೋ ಫೈನಾನ್ಸ್​​ ಕಿರುಕುಳ ಆರೋಪಕ್ಕೆ ಹಾವೇರಿ ಜಿಲ್ಲೆಯಲ್ಲಿ ಮತ್ತೋರ್ವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

A man died
ವ್ಯಕ್ತಿ ಆತ್ಮಹತ್ಯೆ (ETV Bharat)
author img

By ETV Bharat Karnataka Team

Published : Feb 3, 2025, 7:56 PM IST

ಹಾವೇರಿ: ಜಿಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೈಕ್ರೋ ಫೈನಾನ್ಸ್ ಕಿರುಕುಳ ಆರೋಪ ಕೇಳಿಬಂದಿದೆ. ರಾಣೇಬೆನ್ನೂರು ನಗರದ ಅಡವಿ ಆಂಜನೇಯ ಬಡಾವಣೆಯ 42 ವರ್ಷದ ಮಾಲತೇಶ್ ಅರಸಿಕೇರಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

ಮೈಕ್ರೋ ಫೈನಾನ್ಸ್​​ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ಮಾಲತೇಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ. ಮಾಲತೇಶ್ ಅಡವಿ ಆಂಜನೇಯ ಬಡಾವಣೆಯಲ್ಲಿ ಹೇರ್ ಕಟಿಂಗ್ ಸಲೂನ್​ ನಡೆಸುತ್ತಿದ್ದರು. ಮಾಲತೇಶ್ - ಗೀತಾ ದಂಪತಿ ನಾಲ್ಕು ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದರು. ಸಾಲ ಕಟ್ಟಲು ಹಣ ತರೋಕೆ ಅಂತ ಮಾಲತೇಶ್ ಪತ್ನಿ ತವರು ಮನೆಗೆ ಹೋಗಿದ್ದ ವೇಳೆ ಮಾಲತೇಶ್ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

ಮೃತ ಮಾಲತೇಶ್ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಅದರಲ್ಲಿ ಎರಡನೇ ಮಗನಿಗೆ ಕೇವಲ 6 ತಿಂಗಳು. ಕಂದಮ್ಮನನ್ನು ಬಿಟ್ಟು ಮಾಲತೇಶ್ ಸಾವಿನ ಹಾದಿ ಹಿಡಿದಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಾಲತೇಶ್ ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಮನೆಯಲ್ಲಿ ಮೃತನ ಸಂಬಂಧಿಕರ ಅಕ್ರಂದನ ಮುಗಿಲುಮುಟ್ಟಿತ್ತು.

ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ : 32/2025 ಕಲಂ: 308 ಬಿಎನ್​ಎಸ್​ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

(ನಿಮ್ಮಲ್ಲಿ ಆತ್ಮಹತ್ಯೆಯ ಆಲೋಚನೆಗಳಿದ್ದರೆ ಅಥವಾ ನೀವು ತೀವ್ರ ಚಿಂತೆ, ಭಯಕ್ಕೆ ಒಳಗಾಗಿದ್ದರೆ, ಅಥವಾ ನಿಮಗೆ ಭಾವನಾತ್ಮಕ ಬೆಂಬಲ ಬೇಕಾದರೆ, ಸ್ನೇಹ ಫೌಂಡೇಶನ್ - 04424640050 (24x7 ಲಭ್ಯವಿದೆ) ಅಥವಾ ಐಕಾಲ್, ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಸಹಾಯವಾಣಿ - 9152987821 ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8 ರಿಂದ ರಾತ್ರಿ 11ರ ವರೆಗೆ ಲಭ್ಯವಿರುತ್ತದೆ.)

ಇದನ್ನೂ ಓದಿ: ಸ್ನೇಹಿತನಿಗೆ ಕೊಡಿಸಿದ್ದ ಸಾಲ ತೀರಿಸಲಾಗದೆ ಮನನೊಂದು ವ್ಯಕ್ತಿ ಆತ್ಮಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.