ETV Bharat / business

ವಿಶಾಖಪಟ್ಟಣಂ ಉಕ್ಕು ಕಾರ್ಖಾನೆ ಖಾಸಗೀಕರಣ ಮಾಡಲ್ಲ: ಆಂಧ್ರ ಪ್ರದೇಶ ಸರ್ಕಾರದ ಸ್ಪಷ್ಟನೆ - VIZAG STEEL PLANT

ವಿಶಾಖಪಟ್ಟಣಂ ಉಕ್ಕು ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡುವುದಿಲ್ಲ ಎಂದು ಆಂಧ್ರ ಪ್ರದೇಶ ಸರ್ಕಾರ ಹೇಳಿದೆ.

ವಿಶಾಖಪಟ್ಟಣಂ ಉಕ್ಕು ಕಾರ್ಖಾನೆ
ವಿಶಾಖಪಟ್ಟಣಂ ಉಕ್ಕು ಕಾರ್ಖಾನೆ (IANS)
author img

By ETV Bharat Karnataka Team

Published : Nov 21, 2024, 5:01 PM IST

ಅಮರಾವತಿ, ಆಂಧ್ರಪ್ರದೇಶ: ವಿಶಾಖಪಟ್ಟಣಂ ಉಕ್ಕು ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಆಂಧ್ರಪ್ರದೇಶದ ಎನ್​​ಡಿಎ ಸರ್ಕಾರ ಗುರುವಾರ ರಾಜ್ಯ ವಿಧಾನ ಪರಿಷತ್ತಿನಲ್ಲಿ ಸ್ಪಷ್ಟಪಡಿಸಿದೆ. ವಿಶಾಖಪಟ್ಟಣಂ ಉಕ್ಕು ಕಾರ್ಖಾನೆಯ (ವಿಎಸ್​ಪಿ) ಕಾರ್ಪೊರೇಟ್ ಘಟಕವಾದ ರಾಷ್ಟ್ರೀಯ ಇಸ್ಪಾತ್ ನಿಗಮ್ ಲಿಮಿಟೆಡ್ (ಆರ್​ಐಎನ್ಎಲ್) ಅನ್ನು ಖಾಸಗೀಕರಣಗೊಳಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಇತರ ಸಚಿವರು ಸದನದಲ್ಲೀ ಹೇಳಿದರು.

ವಿಎಸ್​ಪಿಯನ್ನು ಖಾಸಗೀಕರಣಗೊಳಿಸಲಾಗುತ್ತಿದೆ ಎಂಬ ಪ್ರತಿಪಕ್ಷ ವೈಎಸ್ಆರ್ ಕಾಂಗ್ರೆಸ್ ಪಕ್ಷದ (ವೈಎಸ್ಆರ್​ಸಿಪಿ) ಆರೋಪಗಳನ್ನು ಇದೇ ಸಂದರ್ಭದಲ್ಲಿ ಸಚಿವರು ತಳ್ಳಿಹಾಕಿದರು.

ಪ್ರತಿಪಕ್ಷ ನಾಯಕರಿಗೆ ಸಚಿವರ ಪ್ರಶ್ನೆ: ವಿಎಸ್​ಪಿಯ ಖಾಸಗೀಕರಣವನ್ನು ರಾಜ್ಯದ ಎನ್​ಡಿಎ ಸರ್ಕಾರ ವಿರೋಧಿಸುತ್ತದೆ ಎಂದು ಪವನ್ ಕಲ್ಯಾಣ್, ಕೈಗಾರಿಕಾ ಸಚಿವ ಟಿ.ಜಿ. ಭರತ್ ಮತ್ತು ಕೃಷಿ ಸಚಿವ ಕೆ. ಅಚ್ಚನ್ನಾಯ್ಡು ಹೇಳಿದರು. ವಿಎಸ್​ಪಿ ಖಾಸಗೀಕರಣಗೊಳಿಸುವುದನ್ನು ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೇ ಸ್ಪಷ್ಟವಾಗಿ ನಿರಾಕರಿಸಿದ್ದು, ಈ ವಿಷಯದಲ್ಲಿ ಇದಕ್ಕಿಂತ ದೊಡ್ಡ ಸ್ಪಷ್ಟೀಕರಣ ಇನ್ನೇನು ಬೇಕು ಸಚಿವ ಭರತ್ ಪ್ರತಿಪಕ್ಷ ನಾಯಕರಿಗೆ ಪ್ರಶ್ನಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಸಭೆಯಲ್ಲಿ ಉಕ್ಕು ಕಾರ್ಖಾನೆಯನ್ನು ಖಾಸಗೀಕರಣಗೊಳಿಸದಂತೆ ವಿನಂತಿಸಲಾಗಿದೆ ಎಂದು ಪವನ್ ಕಲ್ಯಾಣ್ ಸದನಕ್ಕೆ ತಿಳಿಸಿದರು. ವಿಎಸ್​ಪಿಯ ಉದ್ದೇಶಿತ ಖಾಸಗೀಕರಣದ ಬಗ್ಗೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆಯಿತು.

ವೈಎಸ್ಆರ್​ಸಿಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಖಾಸಗೀಕರಣಕ್ಕೆ ಉಪಕ್ರಮ ತೆಗೆದುಕೊಳ್ಳಲಾಗಿದೆ ಎಂದು ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಅದರ ಮಿತ್ರ ಪಕ್ಷಗಳಾದ ಜನಸೇನಾ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಸದಸ್ಯರು ತಿರುಗೇಟು ನೀಡಿದರು.

ವಿಎಸ್​ಪಿಯನ್ನು ಖಾಸಗೀಕರಣಗೊಳಿಸದಂತೆ ನಿರ್ಣಯ: ವಿಎಸ್​ಪಿಯನ್ನು ಖಾಸಗೀಕರಣಗೊಳಿಸದಂತೆ ಕೇಂದ್ರವನ್ನು ಒತ್ತಾಯಿಸಲು ಸದನದಲ್ಲಿ ನಿರ್ಣಯ ಅಂಗೀಕರಿಸಬೇಕು ಎಂದು ವಿರೋಧ ಪಕ್ಷದ ನಾಯಕ ಬೋಟ್ಚಾ ಸತ್ಯನಾರಾಯಣ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಚ್ಚಣ್ಣನಾಯ್ಡು, ಖಾಸಗೀಕರಣದ ಪ್ರಶ್ನೆಯೇ ಇಲ್ಲದಿರುವಾಗ ನಿರ್ಣಯ ಏಕೆ ಅಂಗೀಕರಿಸಬೇಕು ಎಂದು ಪ್ರಶ್ನಿಸಿದರು. ಆಂಧ್ರಪ್ರದೇಶದ ಜನರ ಭಾವನೆಗಳನ್ನು ಎತ್ತಿಹಿಡಿದಿದ್ದಕ್ಕಾಗಿ ಮತ್ತು ವಿಎಸ್​ಪಿಯನ್ನು ರಕ್ಷಿಸಿದ್ದಕ್ಕಾಗಿ ಸಚಿವ ಲೋಕೇಶ್ ಕೇಂದ್ರ ಸಚಿವರಿಗೆ ಧನ್ಯವಾದ ಅರ್ಪಿಸಿದರು.

ಜುಲೈ 11 ರಂದು ವಿಎಸ್​ಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಖಾಸಗೀಕರಣವನ್ನು ತಳ್ಳಿಹಾಕಿದ್ದರು. ಸ್ಥಾವರವನ್ನು ಪುನರುಜ್ಜೀವನಗೊಳಿಸುವ ಚಿಂತನೆಗಳಿವೆಯಾದರೂ ಅಂತಿಮ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಳ್ಳುತ್ತಾರೆ ಎಂದು ಅವರು ಹೇಳಿದ್ದರು.

ಇದನ್ನೂ ಓದಿ : ಬೆಳೆ ನಾಶಪಡಿಸಿದ್ದನ್ನು ವಿರೋಧಿಸಿದ ​ಬುಡಕಟ್ಟು ಯುವತಿಯ ಬಾಯಿಗೆ ಮಲ ತಿನ್ನಿಸಿ ದುಷ್ಕೃತ್ಯ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.