ETV Bharat / technology

ಅದ್ಭುತ ಫೀಚರ್​ ಪರಿಚಯಿಸಿದೆ ಜಿಯೋ: ಇನ್ಮುಂದೆ ಗ್ರಾಹಕರಿಗೆ ಟೆನ್ಶನ್​ ಬೇಡ - BLOCK SPAM CALLS AND SMS ON JIO

Block Spam Calls And SMS On Jio: ಜಿಯೋ ತನ್ನ ಗ್ರಾಹಕರಿಗೆ ಅದ್ಭುತ ಫೀಚರ್​ ಹೊತ್ತು ತಂದಿದೆ. ಇದರ ಸಹಾಯದಿಂದ ಒಂದೇ ಕ್ಲಿಕ್‌ನಲ್ಲಿ ಸ್ಪ್ಯಾಮ್ ಕರೆಗಳನ್ನು ನಿಲ್ಲಿಸಬಹುದು.

MYJIO APPLICATION  SPAM CALLS AND SMS  JIO NETWORK
ಜಿಯೋ (ETV Bharat)
author img

By ETV Bharat Tech Team

Published : Nov 25, 2024, 9:01 AM IST

Block Spam Calls And SMS On Jio: ಸ್ಪ್ಯಾಮ್ ಕರೆಗಳು, ಮೆಸೇಜ್​ಗಳು ದಿನದಿನಕ್ಕೆ ಹೆಚ್ಚುತ್ತಿವೆ. ಈ ಕರೆಗಳು ಮತ್ತು ಸಂದೇಶಗಳನ್ನು ಎಐ ಮತ್ತು ಮಷಿನ್​ ಲರ್ನಿಂಗ್​ ನಿಯಂತ್ರಿಸುತ್ತೆದೆ ಎಂದು ಎಂದಿಗೂ ಭಾವಿಸಬೇಡಿ. ಏಕೆಂದರೆ, ಸೈಬರ್​ ಅಪರಾಧಿಗಳೂ ಸಹ ರೋಬೋಕಾಲ್‌ನಂತಹ ತಂತ್ರಜ್ಞಾನಗಳನ್ನು ಬಳಸಿ ವಂಚಿಸುತ್ತಿದ್ದಾರೆ. ಇದಕ್ಕಾಗಿಯೇ ಜಿಯೋ ತನ್ನ ಗ್ರಾಹಕರಿಗೆ ಅದ್ಭುತ ಫೀಚರ್​ವೊಂದನ್ನು ಪ್ರಸ್ತುತಪಡಿಸುತ್ತಿದೆ. MyJio ಅಪ್ಲಿಕೇಶನ್ ಮೂಲಕ ಒಂದು ಕ್ಲಿಕ್‌ನಲ್ಲಿ ಸ್ಪ್ಯಾಮ್ ಕರೆಗಳು ಮತ್ತು ಮೆಸೇಜ್​ಗಳನ್ನು ಭಾಗಶಃ ನಿಲ್ಲಿಸಬಹುದಾಗಿದೆ.

ಕೆಲವು ಜಾಹೀರಾತು ಕರೆಗಳನ್ನು ಬರಲು ಅನುಮತಿಸಲು ಈ ಕರೆಗಳನ್ನು ಭಾಗಶಃ ನಿರ್ಬಂಧಿಸುವ ಆಯ್ಕೆಯೂ ಇದರಲ್ಲಿದೆ. ಇದಕ್ಕಾಗಿ ಕೆಲವು ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ. ಅದರ ನಂತರ ಸ್ಪ್ಯಾಮ್ ಕರೆಗಳಿಂದ ಮುಕ್ತಿ ಪಡೆಯುವಿರಿ. ದೇಶದಲ್ಲಿ ಸ್ಪ್ಯಾಮ್ ಕರೆಗಳು ಮತ್ತು ಎಸ್‌ಎಂಎಸ್‌ಗಳಿಂದ ಜನರು ಪ್ರತಿದಿನ ಮೋಸ ಹೋಗುತ್ತಿದ್ದಾರೆ. ಈ ದೃಷ್ಟಿಯಿಂದ ಟೆಲಿಕಾಂ ಕಂಪನಿಗಳು ಬಳಕೆದಾರರ ಸುರಕ್ಷತೆಗಾಗಿ ಹೊಸ ಫೀಚರ್​ಗಳನ್ನು ಒದಗಿಸುತ್ತಿವೆ.

ಜಿಯೋ ನೆಟ್‌ವರ್ಕ್‌ನಲ್ಲಿ ಸ್ಪ್ಯಾಮ್ ಕರೆಗಳು ಮತ್ತು ಮೆಸೇಜ್​ಗಳನ್ನು ನಿಲ್ಲಿಸಲು, ನೀವು ಡೂ ನಾಟ್​ ಡಿಸ್ಟರ್ಬ್​ (DND) ಸರ್ವಿಸ್​ ಅನ್ನು ಆ್ಯಕ್ಟಿವೇಟ್​ ಮಾಡಿಕೊಳ್ಳಬೇಕು. ಈ ಸಣ್ಣ ಸೆಟ್ಟಿಂಗ್‌ನೊಂದಿಗೆ, ನೀವು ಸ್ಪ್ಯಾಮ್ ಕರೆಗಳು ಮತ್ತು ಮೆಸೇಜ್​ಗಳು ಹಾಗೂ ಟೆಲಿಮಾರ್ಕೆಟಿಂಗ್ ಕರೆಗಳನ್ನು ನಿಯಂತ್ರಿಸಲು ಮತ್ತು ನಿರ್ಬಂಧಿಸಲು ಸಾಧ್ಯವಿದೆ. ಬಳಕೆದಾರರು ಡಿಎನ್​ಡಿ ಸರ್ವಿಸ್​ ಅನ್ನು ಕಸ್ಟಮೈಸ್​ ಸಹ ಮಾಡಬಹುದಾಗಿದೆ. ನೀವು ನಿರ್ಬಂಧಿಸಬೇಕಾದ ಕರೆಗಳು ಮತ್ತು ಮೆಸೇಜ್​ಗಳ ವರ್ಗವನ್ನು ಆಯ್ಕೆ ಮಾಡುವ ಮೂಲಕ ಮತ್ತು ಅವುಗಳನ್ನು ಫಿಲ್ಟರ್ ಮಾಡುವ ಮೂಲಕ ಡಿಎನ್​ಡಿ ಸೇವೆಯನ್ನು ಕಸ್ಟಮೈಸ್ ಮಾಡಬಹುದಾಗಿದೆ. ಬ್ಯಾಂಕಿಂಗ್, ರಿಯಲ್ ಎಸ್ಟೇಟ್, ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ ಇತ್ಯಾದಿ ಆಯ್ಕೆಗಳು ಇದರಲ್ಲಿವೆ.

ಅನುಸರಿಸಬೇಕಿರುವ ಪ್ರಕ್ರಿಯೆ:

  • ಸ್ಪ್ಯಾಮ್ ಕರೆಗಳನ್ನು ನಿಲ್ಲಿಸಲು ನೀವು ಮೊದಲು My Jio ಅಪ್ಲಿಕೇಶನ್ ತೆರೆಯಿರಿ.
  • 'More' ಮೇಲೆ ಕ್ಲಿಕ್ ಮಾಡಿ.
  • ಕೆಳಗಿನ ಡೋಂಟ್ ಡಿಸ್ಟರ್ಬ್ ಕ್ಲಿಕ್ ಮಾಡಿ.
  • ಇಲ್ಲಿ ಫುಲ್ಲಿ ಬ್ಲಾಕ್ಡ್​, ಪ್ರಮೋಶನಲ್​ ಕಮ್ಯುನಿಕೇಶನ್​ ಬ್ಲಾಕ್ಡ್​ ಮತ್ತು ಕಸ್ಟಮ್ ಆದ್ಯತೆಗಳಂತಹ ಆಯ್ಕೆಗಳನ್ನು ಕಾಣುತ್ತೀರಿ.
  • ಫುಲ್ಲಿ ಬ್ಲಾಕ್ಡ್ ಆಪ್ಷನ್​ ಆ್ಯಕ್ಟಿವೇಟ್​ ಮಾಡಿದಲ್ಲಿ, ಫೇಕ್​ ಅಥವಾ ಸ್ಪ್ಯಾಮ್​ ಕರೆಗಳು ಮತ್ತು ಮೆಸೇಜ್​ ನಿಯಂತ್ರಿಸಬಹುದಾಗಿದೆ.

ಇದನ್ನೂ ಓದಿ: ಅಂಧರ ಸ್ವಾವಲಂಬಿ ಬದುಕಿಗೆ KIMS​​ನಿಂದ ಎಐ ಚಾಲಿತ ಸ್ಮಾರ್ಟ್​ ಗ್ಲಾಸ್​; ಸ್ವತಂತ್ರ ಜೀವನಕ್ಕೆ ಬಹುಪಯೋಗಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.