ಮುಂಬೈ:ಭಾರತೀಯ ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ 50 ಬುಧವಾರದಂದು ಇಳಿಕೆಯೊಂದಿಗೆ ಕೊನೆಗೊಂಡವು. ಇಂದು ಬಿಎಸ್ಇ ಸೆನ್ಸೆಕ್ಸ್ 138.74 ಪಾಯಿಂಟ್ಸ್ ಅಥವಾ ಶೇಕಡಾ 0.17 ರಷ್ಟು ಕುಸಿದು 80,081.98 ರಲ್ಲಿ ಕೊನೆಗೊಂಡಿದೆ. ಇನ್ನು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 36.60 ಪಾಯಿಂಟ್ಸ್ ನಷ್ಟದೊಂದಿಗೆ 24,435.50 ರಲ್ಲಿ ಕೊನೆಗೊಂಡಿತು.
ಬಿಎಸ್ಇ ಸೆನ್ಸೆಕ್ಸ್ನ 30 ಷೇರುಗಳ ಪೈಕಿ 22 ನಷ್ಟದೊಂದಿಗೆ ಕೊನೆಗೊಂಡವು. ಮಹೀಂದ್ರಾ & ಮಹೀಂದ್ರಾ, ಸನ್ ಫಾರ್ಮಾ, ಲಾರ್ಸೆನ್ & ಟೂಬ್ರೊ ಮತ್ತು ಅದಾನಿ ಪೋರ್ಟ್ಸ್ ಶೇಕಡಾ 3.04 ರಷ್ಟು ನಷ್ಟದೊಂದಿಗೆ ಕೊನೆಗೊಂಡವು. ಇದಕ್ಕೆ ವ್ಯತಿರಿಕ್ತವಾಗಿ ಬಜಾಜ್ ಫೈನಾನ್ಸ್, ಟೆಕ್ ಮಹೀಂದ್ರಾ, ಟಿಸಿಎಸ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಶೇಕಡಾ 4.95 ರವರೆಗೆ ಲಾಭದಲ್ಲಿ ಕೊನೆಗೊಂಡವು.
ಅಂಬರ್ ಎಂಟರ್ ಪ್ರೈಸಸ್, ಕೋಫೋರ್ಜ್, ದೀಪಕ್ ಫರ್ಟಿಲೈಸರ್ಸ್, ಫಸ್ಟ್ ಸೋರ್ಸ್ ಸೊಲ್ಯೂಷನ್ಸ್, ಇಂಡಿಗೊ ಪೇಂಟ್ಸ್, ಮ್ಯಾಕ್ಸ್ ಫೈನಾನ್ಷಿಯಲ್, ಎಂಸಿಎಕ್ಸ್ ಇಂಡಿಯಾ, ಪರ್ಸಿಸ್ಟೆಂಟ್ ಸಿಸ್ಟಮ್ಸ್, ಸುವೆನ್ ಫಾರ್ಮಾ, ಟ್ಯೂಬ್ ಇನ್ವೆಸ್ಟ್ ಮೆಂಟ್ ಸೇರಿದಂತೆ 120 ಕ್ಕೂ ಹೆಚ್ಚು ಷೇರುಗಳು ಬಿಎಸ್ಇಯಲ್ಲಿ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದವು.
ವಿಶಾಲ ಸೂಚ್ಯಂಕಗಳ ಪೈಕಿ ನಿಫ್ಟಿ ಸ್ಮಾಲ್ ಕ್ಯಾಪ್ 100 ಮತ್ತು ನಿಫ್ಟಿ ಮಿಡ್ ಕ್ಯಾಪ್ 100 ಬುಧವಾರ ಕ್ರಮವಾಗಿ ಶೇಕಡಾ 1.25 ಮತ್ತು ಶೇಕಡಾ 0.64 ರಷ್ಟು ಲಾಭದೊಂದಿಗೆ ಸ್ಥಿರಗೊಂಡವು. ದುರ್ಬಲ ಮಾರುಕಟ್ಟೆಯಲ್ಲಿ ಐಟಿ ಷೇರುಗಳು ಉತ್ತಮವಾಗಿ ಲಾಭ ಗಳಿಸಿದವು. ನಿಫ್ಟಿ ಐಟಿ ಸೂಚ್ಯಂಕವು ಶೇಕಡಾ 2.38 ರಷ್ಟು ಹೆಚ್ಚಾಗಿದೆ.
ಇತರ ವಲಯ ಸೂಚ್ಯಂಕಗಳಲ್ಲಿ ಹಣಕಾಸು ಸೇವೆಗಳು, ಎಫ್ಎಂಸಿಜಿ, ಮಾಧ್ಯಮ, ಗ್ರಾಹಕ ಬೆಲೆಬಾಳುವ ವಸ್ತುಗಳು ಮತ್ತು ಪಿಎಸ್ಯು ಬ್ಯಾಂಕ್ ಲಾಭದಲ್ಲಿದ್ದರೆ, ಆಟೋ, ಫಾರ್ಮಾ, ಹೆಲ್ತ್ ಕೇರ್ ಮತ್ತು ಒಎಂಸಿಗಳು ಬುಧವಾರ ನಷ್ಟ ಅನುಭವಿಸಿದವು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಳಿತವಾಗುತ್ತಲೇ ಇದೆ. ಕಚ್ಚಾ ತೈಲ ಬೆಲೆ 75 ಡಾಲರ್ ದಾಟಿದೆ. ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್ಗೆ 75.93 ಡಾಲರ್ಗೆ ವಹಿವಾಟು ನಡೆಸುತ್ತಿದ್ದರೆ, ಡಬ್ಲ್ಯುಟಿಐ ಕಚ್ಚಾ ತೈಲವು ಬ್ಯಾರೆಲ್ಗೆ 71.60 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ. ಭಾರತದ ಬಗ್ಗೆ ನೋಡುವುದಾದರೆ, ಸರ್ಕಾರಿ ತೈಲ ಕಂಪನಿಗಳು ಇಂದು (ಅಕ್ಟೋಬರ್ 23, 2024) ಎಲ್ಲಾ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಇದನ್ನೂ ಓದಿ : ಭಾರತದ ಅಭಿವೃದ್ಧಿ ಅಬಾಧಿತ, ಶೇ 7.2ರ ದರದಲ್ಲಿ ಜಿಡಿಪಿ ಬೆಳವಣಿಗೆ: ಆರ್ಬಿಐ