ಕರ್ನಾಟಕ

karnataka

ETV Bharat / business

ಹೌಸಿಂಗ್​ ಫೈನಾನ್ಸ್​ ಕಂಪನಿಗಳ ನಿಯಮ ಬಿಗಿಗೊಳಿಸಿದ ಆರ್​ಬಿಐ: 2025ರಿಂದ ಹೊಸ ಮಾರ್ಗಸೂಚಿ ಅನ್ವಯ - Housing Finance Companies - HOUSING FINANCE COMPANIES

ಗೃಹ ನಿರ್ಮಾಣಕ್ಕೆ ಸಾಲ ಸೌಲಭ್ಯ ನೀಡುವ ಹೌಸಿಂಗ್ ಫೈನಾನ್ಸ್ ಕಂಪನಿಗಳಿಗೆ ಆರ್​ಬಿಐ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

By ETV Bharat Karnataka Team

Published : Aug 12, 2024, 7:56 PM IST

ಮುಂಬೈ: ಗೃಹ ನಿರ್ಮಾಣಕ್ಕೆ ಸಾಲ ಸೌಲಭ್ಯ ನೀಡುವ ಹೌಸಿಂಗ್ ಫೈನಾನ್ಸ್ ಕಂಪನಿಗಳಿಗೆ (ಎಚ್ಎಫ್​ಸಿ) ಆರ್​ಬಿಐ ಸೋಮವಾರ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿದೆ. ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ (ಎನ್​ಬಿಎಫ್​ಸಿ) ಅನ್ವಯವಾಗುವ ಕಠಿಣ ನಿಯಮಗಳನ್ನೇ ಹಂತ ಹಂತವಾಗಿ ಎಚ್​ಎಫ್‌ಸಿಗಳಿಗೆ ಅನ್ವಯಿಸುವ ನಿಟ್ಟಿನಲ್ಲಿ ಆರ್​ಬಿಐ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಪರಿಷ್ಕೃತ ನಿಯಮಗಳು ಜನವರಿ 1, 2025ರಿಂದ ಅನ್ವಯವಾಗುತ್ತವೆ ಮತ್ತು ಎಚ್ಎಫ್​ಸಿ ಮತ್ತು ಎನ್​​ಬಿಎಫ್​​ಸಿಗಳ ನಿಯಮಗಳನ್ನು ಮತ್ತಷ್ಟು ಏಕರೂಪಗೊಳಿಸುತ್ತವೆ ಎಂದು ಆರ್​ಬಿಐ ತಿಳಿಸಿದೆ.

ಪ್ರಸ್ತುತ, ಎಚ್​ಎಫ್​ಸಿಗಳು ಸಾರ್ವಜನಿಕರಿಂದ ಠೇವಣಿಗಳನ್ನು ಸಂಗ್ರಹಿಸುವುದು ಎನ್​ಬಿಎಫ್​ಸಿಗಳಿಗೆ ಹೋಲಿಸಿದರೆ ಹೆಚ್ಚು ಸಡಿಲವಾದ ವಿವೇಚನಾಯುಕ್ತ ಮಾನದಂಡಗಳಿಗೆ ಒಳಪಟ್ಟಿದೆ ಎಂದು ಆರ್​ಬಿಐ ಹೇಳಿದೆ. ಆದರೆ ಠೇವಣಿ ಸ್ವೀಕಾರಕ್ಕೆ ಸಂಬಂಧಿಸಿದ ನಿಯಮಗಳು ಎಲ್ಲಾ ವರ್ಗದ ಎನ್​​ಬಿಎಫ್​ಸಿಗಳಲ್ಲಿ ಒಂದೇ ರೀತಿಯಾಗಿರುವುದರಿಂದ ಅದೇ ನಿಯಮಾವಳಿಗಳನ್ನು ಎಚ್​ಎಫ್​ಸಿಗಳಿಗೆ ಅನ್ವಯಿಸಲು ನಿರ್ಧರಿಸಲಾಗಿದೆ.

ಹೊಸ ನಿಯಮಗಳ ಪ್ರಕಾರ, ಎಚ್ಎಫ್​​ಸಿಗಳು ತಮ್ಮಲ್ಲಿ ಕಾಯ್ದಿಟ್ಟುಕೊಳ್ಳಬೇಕಾದ ಕನಿಷ್ಠ ಶೇಕಡಾವಾರು ಹಣಕಾಸು ಸ್ವತ್ತುಗಳ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಎಚ್ಎಫ್​ಸಿಗಳು ಹೊಂದಿರಬೇಕಾದ ಸಾರ್ವಜನಿಕ ಠೇವಣಿಗಳ ಶೇಕಡಾ 1ರಷ್ಟು ನಿರ್ಬಂಧವಿಲ್ಲದ ಅನುಮೋದಿತ ಸೆಕ್ಯುರಿಟಿಗಳ (Unencumbered Approved Securities) ಮಿತಿಯನ್ನು ಶೇಕಡಾ 6.5ರಿಂದ ಶೇಕಡಾ 8 ಕ್ಕೆ ಹೆಚ್ಚಿಸಲಾಗಿದೆ. ಹಾಗೆಯೇ, ಒಟ್ಟು ನಗದು ಸ್ವತ್ತುಗಳು ಮತ್ತು ನಿರ್ಬಂಧವಿಲ್ಲದ ಅನುಮೋದಿತ ಸೆಕ್ಯುರಿಟಿಗಳ ಮಿತಿಯನ್ನು ಸಾರ್ವಜನಿಕ ಠೇವಣಿಗಳ ಶೇಕಡಾ 13ರಿಂದ 14ಕ್ಕೆ ಹೆಚ್ಚಿಸಲಾಗಿದೆ.

ಹೊಸ ನಿಯಮಗಳ ಪ್ರಕಾರ, ಮಾಸ್ಟರ್ ಡೈರೆಕ್ಷನ್ - ಬ್ಯಾಂಕೇತರ ಹಣಕಾಸು ಕಂಪನಿ - ಹೌಸಿಂಗ್ ಫೈನಾನ್ಸ್ ಕಂಪನಿ (ರಿಸರ್ವ್ ಬ್ಯಾಂಕ್) ನಿರ್ದೇಶನಗಳು, 2021ರ ಪ್ಯಾರಾ 42.1ರ ಪ್ರಕಾರ ಎಚ್ಎಫ್​​ಸಿಗಳು ಯಾವುದೇ ಸಮಯದಲ್ಲಿ ಸ್ವೀಕರಿಸುವ ಸಾರ್ವಜನಿಕ ಠೇವಣಿಗಳಿಗೆ ಸಂಪೂರ್ಣ ಆಸ್ತಿ ರಕ್ಷಣೆ ಲಭ್ಯವಿದೆ. ಇನ್ನು ಮುಂದೆ, ಸಾರ್ವಜನಿಕ ಠೇವಣಿಗಳ ಕಾರಣದಿಂದಾಗಿ ಮೇಲಿನ ಆಸ್ತಿ ಕವರ್ ಹೊಣೆಗಾರಿಕೆಗಿಂತ ಕಡಿಮೆಯಾದರೆ ನ್ಯಾಷನಲ್ ಹೌಸಿಂಗ್ ಬ್ಯಾಂಕ್ (ಎನ್ಎಚ್​ಬಿ) ಗೆ ಆ ಬಗ್ಗೆ ಮಾಹಿತಿ ನೀಡುವುದು ಸಂಬಂಧಪಟ್ಟ ಎಚ್ಎಫ್​ಸಿಯ ಕರ್ತವ್ಯವಾಗಿರುತ್ತದೆ.

ಪರಿಷ್ಕೃತ ನಿಯಮಗಳ ಪ್ರಕಾರ, ಸಾರ್ವಜನಿಕ ಠೇವಣಿಗಳನ್ನು ಸ್ವೀಕರಿಸಲು ಅರ್ಹರಾಗಲು, ಠೇವಣಿ ತೆಗೆದುಕೊಳ್ಳುವ ಎಚ್ಎಪ್​ಸಿಗಳು ಮಾಸ್ಟರ್ ಡೈರೆಕ್ಷನ್ - ಬ್ಯಾಂಕೇತರ ಹಣಕಾಸು ಕಂಪನಿ - ಹೌಸಿಂಗ್ ಫೈನಾನ್ಸ್ ಕಂಪನಿ (ರಿಸರ್ವ್ ಬ್ಯಾಂಕ್) ನಿರ್ದೇಶನಗಳು, 2021ರ ಪ್ಯಾರಾ 25ರಲ್ಲಿ ನಿರ್ದಿಷ್ಟಪಡಿಸಿದಂತೆ ವರ್ಷಕ್ಕೆ ಒಮ್ಮೆಯಾದರೂ ಕನಿಷ್ಠ ಹೂಡಿಕೆ ದರ್ಜೆಯ ಕ್ರೆಡಿಟ್ ರೇಟಿಂಗ್ ಅನ್ನು ಪಡೆಯಬೇಕಾಗುತ್ತದೆ.

ಒಂದೊಮ್ಮೆ ಕ್ರೆಡಿಟ್ ರೇಟಿಂಗ್ ಕನಿಷ್ಠ ಹೂಡಿಕೆ ದರ್ಜೆಗಿಂತ ಕಡಿಮೆಯಿದ್ದರೆ, ಅಂತಹ ಎಚ್ಎಫ್​ಸಿಗಳು ಹೂಡಿಕೆ ದರ್ಜೆಯ ಕ್ರೆಡಿಟ್ ರೇಟಿಂಗ್ ಪಡೆಯುವವರೆಗೆ ಅಸ್ತಿತ್ವದಲ್ಲಿರುವ ಠೇವಣಿಗಳನ್ನು ನವೀಕರಿಸುವಂತಿಲ್ಲ ಅಥವಾ ಹೊಸ ಠೇವಣಿಗಳನ್ನು ಸ್ವೀಕರಿಸುವಂತಿಲ್ಲ. ಕನಿಷ್ಠ ಹೂಡಿಕೆ ದರ್ಜೆಯ ಕ್ರೆಡಿಟ್ ರೇಟಿಂಗ್ ಅನ್ನು ಅನುಸರಿಸುವ, ಠೇವಣಿ ತೆಗೆದುಕೊಳ್ಳುವ ಎಚ್ಎಫ್​ಸಿಗಳು ಹೊಂದಿರುವ ಸಾರ್ವಜನಿಕ ಠೇವಣಿಗಳ ಪ್ರಮಾಣದ ಮಿತಿಯನ್ನು ನಿವ್ವಳ ಮಾಲೀಕತ್ವದ ನಿಧಿಯ 3 ಪಟ್ಟಿನಿಂದ 1.5 ಪಟ್ಟಿಗೆ ಇಳಿಸಲಾಗುವುದು.

ಇದನ್ನೂ ಓದಿ: ಭಾರತೀಯ ಶಾಕಾಹಾರಿ ಊಟಕ್ಕೆ ಬೇಡಿಕೆ: ಪಾಕಿಸ್ತಾನದ ಕರಾಚಿಯಲ್ಲಿ ಹೊಸ ಟ್ರೆಂಡ್​ - Indian Food in Karachi

ABOUT THE AUTHOR

...view details