ಬೆಂಗಳೂರು:ರಾಮೋಜಿರಾವ್ ಸಮೂಹ ಸಂಸ್ಥೆಗಳ ಪ್ರತಿಷ್ಟಿತ ಕಂಪನಿಯಾದ ಮಾರ್ಗದರ್ಶಿ ಚಿಟ್ಫಂಡ್ನ 120ನೇ ಶಾಖೆಯು ಬೆಂಗಳೂರಿಗೆ ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರಿನಲ್ಲಿ ಉದ್ಘಾಟನೆಗೊಂಡಿದೆ. ಮಾರ್ಗದರ್ಶಿ ಚಿಟ್ಫಂಡ್ನ ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಕಿರಣ್ ಅವರು ಹೊಸೂರಿನಲ್ಲಿ ಬುಧವಾರ ಸಂಜೆ ನೂತನ ಶಾಖೆ ಉದ್ಘಾಟಿಸಿ ಶಾಖೆಯ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿದರು.
ಶಾಖೆಯ ಉದ್ಘಾಟನೆ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಶೈಲಜಾ ಕಿರಣ್, "ಹೊಸೂರಿನ ಜನತೆ ಬೆಂಗಳೂರಿನ ಮಾರ್ಗದರ್ಶಿ ಶಾಖೆಗಳ ಜೊತೆ ವ್ಯವಹರಿಸುತ್ತಿದ್ದರು. ಇಲ್ಲಿನವರಿಗೆ ಮತ್ತಷ್ಟು ಅನುಕೂಲವಾಗುವ ಉದ್ದೇಶದಿಂದ ಹೊಸೂರಿನಲ್ಲಿ ನೂತನ ಶಾಖೆಯನ್ನು ಪ್ರಾರಂಭಿಸಿದ್ದಕ್ಕೆ ಹರ್ಷವಾಗುತ್ತಿದೆ" ಎಂದು ತಿಳಿಸಿದರು.
ತಮಿಳುನಾಡಿನ 18ನೇ ಶಾಖೆ:"ಮಾರ್ಗದರ್ಶಿ ಚಿಟ್ ಫಂಡ್ ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸುಮಾರು 3 ಲಕ್ಷ ಗ್ರಾಹಕರನ್ನು ಹೊಂದಿದೆ. ಎಲ್ಲರಿಗೂ ಉತ್ತಮ ಸೇವೆಯನ್ನು ಒದಗಿಸಲಾಗುತ್ತಿದೆ. ಶಿಸ್ತುಬದ್ಧ ಮತ್ತು ಪಾರದರ್ಶಕ ಸೇವೆಗೆ ಮಾರ್ಗದರ್ಶಿ ಚಿಟ್ ಫಂಡ್ ಹೆಸರಾಗಿದೆ. ದಿನದಿಂದ ದಿನಕ್ಕೆ ಮಾರ್ಗದರ್ಶಿ ಚಿಟ್ ಫಂಡ್ ಬೆಳೆಯುತ್ತಿದೆ. ತಮಿಳುನಾಡಿನಲ್ಲಿ ಆರಂಭಿಸಿದ 18ನೇ ಶಾಖೆ ಇದಾಗಿದೆ. ಬರುವ ದಿನಗಳಲ್ಲಿ ಮತ್ತಷ್ಟು ಶಾಖೆಗಳನ್ನು ಆರಂಭಿಸಿ ಹೆಚ್ಚಿನ ಗ್ರಾಹಕರನ್ನು ಹೊಂದುವ ಉದ್ದೇಶವಿದೆ" ಎಂದು ಹೇಳಿದರು.
"ಹೊಸೂರನ್ನು ಬ್ರಿಟಿಷರು ಭಾರತದ ಇಂಗ್ಲೆಂಡ್ ಎಂದು ಎಂದು ಕರೆದಿದ್ದರು. ಹೊಸೂರಿನಲ್ಲಿ ಹಲವಾರು ಪ್ರತಿಷ್ಟಿತ ಕೈಗಾರಿಕೆಗಳಿವೆ. ಟಾಟಾ, ಅಶೋಕ್ ಲೈಲೆಂಡ್ನ ಉದ್ದಿಮೆಗಳು ಇಲ್ಲಿವೆ. ಇದರ ಜೊತೆಗೆ ಹಲವಾರು ಆಟೋಮೊಬೈಲ್, ಕೃಷಿ, ಮಾಹಿತಿ ತಂತ್ರಜ್ಞಾನ, ಗಾರ್ಮೆಂಟ್ಸ್ ಕ್ಷೇತ್ರದ ಕೈಗಾರಿಕೆಗಳೂ ಸಹ ಇವೆ. ಹೊಸೂರು ಕೈಗಾರಿಕೆ ಹಬ್ ಆಗಿದೆ" ಎಂದು ಅಭಿಪ್ರಾಯಪಟ್ಟರು.