ಮುಂಬೈ: ಮಂಗಳವಾರದ ವಹಿವಾಟಿನಲ್ಲಿ ಭಾರತದ ಷೇರು ಮಾರುಕಟ್ಟೆಗಳು ಇಳಿಕೆಯೊಂದಿಗೆ ಕೊನೆಗೊಂಡಿವೆ. 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 1235.08 ಪಾಯಿಂಟ್ಸ್ ಅಥವಾ ಶೇಕಡಾ 1.60 ರಷ್ಟು ಕುಸಿದು 75,838.36 ರಲ್ಲಿ ಕೊನೆಗೊಂಡಿದೆ. ಸೂಚ್ಯಂಕವು ಇಂದು 75,641.87-77,337.36 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು.
ತೀವ್ರ ಒತ್ತಡ ಎದುರಿಸಿದ ಎನ್ಎಸ್ಇ ನಿಫ್ಟಿ 50 ಕೂಡ 320.10 ಪಾಯಿಂಟ್ಸ್ ಅಥವಾ ಶೇಕಡಾ 1.37 ರಷ್ಟು ನಷ್ಟದೊಂದಿಗೆ 23,024.65 ರಲ್ಲಿ ಕೊನೆಗೊಂಡಿತು. ನಿಫ್ಟಿ50 ದಿನದ ಗರಿಷ್ಠ 23,426.30 ಮತ್ತು ಕನಿಷ್ಠ 22,976.85 ರ ಮಧ್ಯೆ ವಹಿವಾಟು ನಡೆಸಿತು.
ನಿಫ್ಟಿ ಪ್ರಮುಖ 50 ಷೇರುಗಳಲ್ಲಿ 42ರಲ್ಲಿ ಕುಸಿತ: ನಿಫ್ಟಿ50 ಯ 50 ಘಟಕ ಷೇರುಗಳ ಪೈಕಿ 42 ಷೇರುಗಳು ಇಳಿಕೆಯೊಂದಿಗೆ ಕೊನೆಗೊಂಡವು. ನಿಫ್ಟಿಯಲ್ಲಿ ಟ್ರೆಂಟ್, ಅದಾನಿ ಪೋರ್ಟ್ಸ್, ಎನ್ಟಿಪಿಸಿ, ಐಸಿಐಸಿಐ ಬ್ಯಾಂಕ್, ಎಂ & ಎಂ, ಎಸ್ಬಿಐ, ಅದಾನಿ ಎಂಟರ್ ಪ್ರೈಸಸ್ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ನಷ್ಟ ಕಂಡ ಪ್ರಮುಖ ಷೇರುಗಳಾಗಿವೆ.
ಭಾರಿ ನಷ್ಟದ ವಹಿವಾಟಿನಲ್ಲಿ ಈ ಷೇರುಗಳಿಗೆ ಲಾಭ; ಅಪೊಲೊ ಆಸ್ಪತ್ರೆ, ಟಾಟಾ ಕನ್ಸೂಮರ್, ಬಿಪಿಸಿಎಲ್ ಮತ್ತು ಅದಾನಿ ಜೆಎಸ್ಡಬ್ಲ್ಯೂ ಸ್ಟೀಲ್ ಷೇರುಗಳು ಲಾಭ ಗಳಿಸಿದವು.
ವಿಶಾಲ ಮಾರುಕಟ್ಟೆಗಳಲ್ಲಿ ನಿಫ್ಟಿ ಮಿಡ್ ಕ್ಯಾಪ್100 ಶೇಕಡಾ 2.31 ರಷ್ಟು ಕುಸಿದು 53,834.95 ರಲ್ಲಿ ಕೊನೆಗೊಂಡರೆ, ನಿಫ್ಟಿ ಸ್ಮಾಲ್ ಕ್ಯಾಪ್ 100 ಶೇಕಡಾ 2.28 ರಷ್ಟು ಕುಸಿತದೊಂದಿಗೆ 17,456.50 ರಲ್ಲಿ ಕೊನೆಗೊಂಡಿತು. ನಿಫ್ಟಿ ಫೈನಾನ್ಷಿಯಲ್ ಸರ್ವೀಸಸ್ ಮತ್ತು ನಿಫ್ಟಿ ಪಿಎಸ್ಯು ಬ್ಯಾಂಕ್ ಕ್ರಮವಾಗಿ ಶೇಕಡಾ 1.65 ಮತ್ತು ಶೇಕಡಾ 1.73 ರಷ್ಟು ಕುಸಿದರೆ, ನಿಫ್ಟಿ ರಿಯಾಲ್ಟಿ ಮತ್ತು ನಿಫ್ಟಿ ಕನ್ಸ್ಯೂಮರ್ ಡ್ಯೂರೇಬಲ್ಸ್ ಶೇಕಡಾ 4.12 ಮತ್ತು 4.06 ರಷ್ಟು ಇಳಿಕೆ ಕಂಡವು.
ನಿಫ್ಟಿ ಐಟಿ ಸೂಚ್ಯಂಕವು ಶೇಕಡಾ 1.17 ರಷ್ಟು ಕುಸಿದಿದ್ದು, ಫಾರ್ಮಾ -1.35 ಶೇಕಡಾ, ಮಾಧ್ಯಮ -1.49 ಶೇಕಡಾ ಮತ್ತು ಲೋಹ -0.94 ಶೇಕಡಾ ಗಮನಾರ್ಹವಾಗಿ ಕುಸಿದವು.
ರೂಪಾಯಿ 14 ಪೈಸೆ ಕುಸಿತ: ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಭಾರಿ ಮಾರಾಟ ಮತ್ತು ಯುಎಸ್ ಡಾಲರ್ ಸೂಚ್ಯಂಕದಲ್ಲಿ ಚೇತರಿಕೆಯ ಹಿನ್ನೆಲೆಯಲ್ಲಿ ರೂಪಾಯಿ ಮಂಗಳವಾರ ಯುಎಸ್ ಡಾಲರ್ ವಿರುದ್ಧ 14 ಪೈಸೆ ಕುಸಿದು 86.59 ರಲ್ಲಿ (ತಾತ್ಕಾಲಿಕ) ಸ್ಥಿರವಾಯಿತು.
ಇಂಟರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ಡಾಲರ್ ಎದುರು ರೂಪಾಯಿ 86.28 ರ ಸಕಾರಾತ್ಮಕ ಟಿಪ್ಪಣಿಯಲ್ಲಿ ಪ್ರಾರಂಭವಾಯಿತು. ದಿನದ ಅವಧಿಯಲ್ಲಿ, ರೂಪಾಯಿ ಇಂಟ್ರಾಡೇ ಗರಿಷ್ಠ 86.28 ಮತ್ತು ಕನಿಷ್ಠ 86.59 ರ ಮಧ್ಯೆ ವಹಿವಾಟು ನಡೆಸಿತು. ರೂಪಾಯಿ ಅಂತಿಮವಾಗಿ 86.59 ರಲ್ಲಿ (ತಾತ್ಕಾಲಿಕ) ಕೊನೆಗೊಂಡಿತು. ಇದು ಯುಎಸ್ ಡಾಲರ್ ವಿರುದ್ಧ ಹಿಂದಿನ ಮುಕ್ತಾಯದ 86.45 ಕ್ಕಿಂತ 14 ಪೈಸೆ ಕುಸಿತವಾಗಿದೆ.