ನೀವು ಕಾರು ಪ್ರೇಮಿಗಳೇ? ಕಾರು ಖರೀದಿಸಬೇಕು ಎಂಬ ಬಯಕ ಇದೆ. ಆದರೆ, ಅಷ್ಟೊಂದು ದುಡ್ಡು ಇಲ್ಲವೇ, ಅಂತಹವರಿಗೆ ಶುಭ ಸುದ್ದಿಯೊಂದು ಇದೆ. ಚಿಂತಿಸಬೇಡಿ, ಪ್ರಮುಖ ಆಟೋಮೊಬೈಲ್ ಕಂಪನಿ ಕಿಯಾ ಭಾರತದಲ್ಲಿ ಕಾರ್ ಲೀಸಿಂಗ್ ಸೇವೆ ಪ್ರಾರಂಭಿಸಿದೆ. ಆದ್ದರಿಂದ, ನೀವು ಕಡಿಮೆ ಬಾಡಿಗೆ ಪಾವತಿಸುವ ಮೂಲಕ ನಿಮ್ಮ ಆಯ್ಕೆಯ ಕಿಯಾ ಕಾರನ್ನು ಬಾಡಿಗೆಗೂ ಪಡೆಯಬಹುದು.
ನೀವು ಭಾರತದಲ್ಲಿ ಹೊಸ ಕಾರನ್ನು ಖರೀದಿಸಿದರೆ, ಖಂಡಿತವಾಗಿಯೂ ಅದಕ್ಕೆ ವಿಮೆ ಮಾಡಬೇಕಾಗುತ್ತದೆ. ಜತೆಗೆ ನಿರ್ವಹಣಾ ವೆಚ್ಚವನ್ನೂ ಭರಿಸಬೇಕಾಗುತ್ತದೆ. ನಿಮ್ಮ ಬಳಿ ಹಳೆ ಕಾರು ಇದ್ದರೆ, ಅದನ್ನು ಮಾರಾಟ ಮಾಡುವಾಗ ನಿಮಗೆ ಕಡಿಮೆ ಹಣ ಸಿಗುತ್ತದೆ. ಹೀಗಾಗಿ ನೀವು ಹೊಸ ಕಾರು ಖರೀದಿ ಮಾಡಬೇಕಾದರೆ ಹೆಚ್ಚುವರಿ ಹಣ ಬೇಕಾಗುತ್ತದೆ. ಹೀಗಾಗಿ ಹೊಸ ಮಾದರಿಗಳಿಗೆ ಅಪ್‌ಗ್ರೇಡ್ ಆಗಲು ಕಷ್ಟವಾಗುತ್ತದೆ. ಅಂತಹ ಸಮಸ್ಯೆಗಳಿಲ್ಲದೇ ಕಾರನ್ನು ಬಾಡಿಗೆಗೆ ಪಡೆಯುವ ಸೌಲಭ್ಯ ಈಗ ಲಭ್ಯವಿದೆ.
6 ನಗರಗಳಲ್ಲಿ ಬಾಡಿಗೆ ಸೌಲಭ್ಯ: ಕಿಯಾ ಕಂಪನಿ ಓರಿಕ್ಸ್ ಆಟೋ ಇನ್ಫ್ರಾಸ್ಟ್ರಕ್ಚರ್ ಸರ್ವಿಸಸ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಇವರಿಬ್ಬರು ಸೇರಿ ಬೆಂಗಳೂರು, ಹೈದರಾಬಾದ್, ಚೆನ್ನೈ, ಮುಂಬೈ, ಪುಣೆ ಮತ್ತು ದೆಹಲಿಯಲ್ಲಿ ಕಿಯಾ ಲೀಸ್ ಸೇವೆಗಳನ್ನು ಆರಂಭಿಸಿದೆ. ಈ ವಿಷಯವನ್ನು ಕಿಯಾ ಇಂಡಿಯಾದ ಮುಖ್ಯ ಮಾರಾಟ ಅಧಿಕಾರಿ ಮ್ಯುಂಗ್-ಸಿಕ್ ಸನ್ ಹೇಳಿದ್ದಾರೆ.
ಈ ವಾಹನಗಳು ಮಾತ್ರ ಲೀಸ್ಗೆ ಲಭ್ಯ: ಕಿಯಾ ಕಾರುಗಳನ್ನು 24 - 60 ತಿಂಗಳ ಅವಧಿಗೆ ಬಾಡಿಗೆಗೆ ಪಡೆಯಬಹುದು. ಭಾರಿ ಮಹತ್ವದ ವಿಷಯ ಎಂದರೆ ಯಾವುದೇ ಮುಂಗಡ ಪಾವತಿ ಮಾಡುವ ಅಗತ್ಯವಿಲ್ಲ. ಕಿಯಾ ಸೋನೆಟ್‌ಗೆ ತಿಂಗಳಿಗೆ 21,900; ಸೆಲ್ಟೋಸ್ ಬೆಲೆ 28,900 ಮತ್ತು ಕ್ಯಾರೆನ್ಸ್ 28,800 ರೂ. ಬಾಡಿಗೆ ದರ ನಿಗದಿ ಮಾಡಲಾಗಿದೆ.
ಕಾರ್ ಚಂದಾದಾರಿಕೆಯನ್ನು ಪಡೆಯುವುದು ಹೇಗೆ?: ನಮ್ಮಲ್ಲಿ ಹೆಚ್ಚಿನವರು ಕಾರುಗಳನ್ನು ಬಹಳಷ್ಟು ಇಷ್ಟ ಪಡುತ್ತಾರೆ. ಆದರೆ ಅವರು ಕಾರು ಖರೀದಿಸಲು ಸಾಧ್ಯವಿಲ್ಲ. ಪ್ರಸಿದ್ಧ ಆಟೋಮೊಬೈಲ್ ಕಂಪನಿಗಳು ಅಂತಹವರಿಗೆ ಚಂದಾದಾರಿಕೆ ಯೋಜನೆಗಳನ್ನು ನೀಡುತ್ತಿದೆ. ಇವುಗಳ ಮೂಲಕ ನಿಮ್ಮ ಆಯ್ಕೆಯ ಕಾರನ್ನು ನಿರ್ದಿಷ್ಟ ಅವಧಿಯವರೆಗೆ ಬಳಸಬಹುದು. ಇದಕ್ಕಾಗಿ ನೀವು ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಇದು ತುಂಬಾ ಪ್ರಯೋಜನಕಾರಿ ಎಂಬಂತೆ ತೋರುತ್ತದೆ. ಹಾಗಾಗಿ ನೀವು ಕಾರು ಪ್ರಿಯರಾಗಿದ್ದರೆ, ಈ ಅವಕಾಶವನ್ನು ಬಳಸಿಕೊಂಡು ಹೊಸ ಕಾರಿನಲ್ಲಿ ಆರಾಮವಾಗಿ ಓಡಾಡಬಹುದು. ವಾಸ್ತವವಾಗಿ, ಈ ಕಾರ್ ಚಂದಾದಾರಿಕೆಯು ವಿದೇಶದಲ್ಲಿ ಬಹಳ ಜನಪ್ರಿಯವಾಗಿದೆ.
ಠೇವಣಿ ಎಷ್ಟು ಇಡಬೇಕು?: ಎಲ್ಲ ಪ್ರಮುಖ ಆಟೋಮೊಬೈಲ್ ಕಂಪನಿಗಳು ಕಾರ್ ಚಂದಾದಾರಿಕೆ ಯೋಜನೆಗಳನ್ನು ನೀಡುತ್ತವೆ. ನೀವು ಆಯ್ಕೆಮಾಡುವ ಮಾದರಿಯನ್ನು ಅವಲಂಬಿಸಿ ಈ ಠೇವಣಿಯ ಮೊತ್ತವು ಬದಲಾಗುತ್ತದೆ. ಆದರೆ ಕಾರಿಗೆ ಚಂದಾದಾರರಾಗುವ ಮೊದಲು, ನೀವು ಸ್ವಲ್ಪ ಮೊತ್ತವನ್ನು ಠೇವಣಿ ಮಾಡಬೇಕಾಗುತ್ತದೆ. ಅಥವಾ ಮುಂಗಡ ಹಣ ಪಾವತಿಸಬೇಕಾಗುತ್ತದೆ. ನಂತರ ನೀವು ಬಯಸಿದಷ್ಟು ಕಾಲ ಮಾಸಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆ ವಿಧಾನ ಸುಲಭ ಹಾಗೂ ಸರಳವಾಗಿದೆ.
ಕಾರ್ ಚಂದಾದಾರಿಕೆ ಪ್ರಯೋಜನಗಳೇನು?: ನಿಮ್ಮ ಆಯ್ಕೆಯ ಕಾರಿಗೆ ನೀವು ಚಂದಾದಾರರಾಗಬಹುದು. ನೀವು ಬಯಸಿದಾಗ ಕಾರನ್ನು ವಾಪಸ್ ನೀಡಬಹುದಾಗಿದೆ. ನಿಮ್ಮ ಪ್ರಸ್ತುತ ಮಾದರಿಯನ್ನು ಕೈಬಿಟ್ಟು ಹೊಸ ಮಾದರಿಗೆ ಅಪ್‌ಗ್ರೇಡ್ ಮಾಡಿಕೊಳ್ಳಬಹುದು.
ನೀವು ಪಾವತಿಸುವ ಮಾಸಿಕ ಸದಸ್ಯತ್ವ ಶುಲ್ಕದಲ್ಲಿ ಕಾರು ನಿರ್ವಹಣೆ, ವಿಮೆ ಮತ್ತು ತೆರಿಗೆಗಳನ್ನು ಒಳಗೊಂಡಿರುತ್ತದೆ. ಹಾಗಾಗಿ ಹೆಚ್ಚುವರಿ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಇದು ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಬಹಳ ಜನಪ್ರಿಯವಾಗಿದೆ. ಈ ಕಾರ್ ಚಂದಾದಾರಿಕೆ ಯೋಜನೆ ಕ್ರಮೇಣ ಭಾರತದಲ್ಲೂ ಜನಪ್ರಿಯವಾಗುತ್ತಿದೆ.
ಇದನ್ನು ಓದಿ:ಪವಿತ್ರ ಜಯರಾಮ್ ಸಾವಿನ ಬೆನ್ನಲ್ಲೇ ಸ್ನೇಹಿತ ಚಂದು ಆತ್ಮಹತ್ಯೆ: ಪತ್ನಿ ಶಿಲ್ಪ ಪ್ರತಿಕ್ರಿಯೆ - Serial actor chandu suicide
ಟೊಯೋಟಾದಿಂದ 3 ವರ್ಷದ ತರಬೇತಿಗೆ ಅರ್ಜಿ ಆಹ್ವಾನ; ಆಸಕ್ತರು ಅರ್ಜಿ ಸಲ್ಲಿಸಬಹುದು - Training from Toyota