ಕರ್ನಾಟಕ

karnataka

ETV Bharat / business

ಭಾರತದ ಷೇರು ಮಾರುಕಟ್ಟೆ ಬಂಡವಾಳೀಕರಣ ಶೇ 14ರಷ್ಟು ಏರಿಕೆ: ಇದು ವಿಶ್ವದಲ್ಲೇ ಅತ್ಯಧಿಕ - INDIAN EQUITY MARKETS SURGE - INDIAN EQUITY MARKETS SURGE

ಏಪ್ರಿಲ್-ಜೂನ್ ಅವಧಿಯಲ್ಲಿ ಭಾರತೀಯ ಷೇರು ಮಾರುಕಟ್ಟೆ ಬಂಡವಾಳೀಕರಣವು ಶೇಕಡಾ 13.8 ರಷ್ಟು ಹೆಚ್ಚಾಗಿದೆ.

ಭಾರತೀಯ ಷೇರು ಮಾರುಕಟ್ಟೆ ಬಂಡವಾಳೀಕರಣ ಶೇ 14ರಷ್ಟು ಏರಿಕೆ
ಭಾರತೀಯ ಷೇರು ಮಾರುಕಟ್ಟೆ ಬಂಡವಾಳೀಕರಣ ಶೇ 14ರಷ್ಟು ಏರಿಕೆ (IANS (ಸಾಂದರ್ಭಿಕ ಚಿತ್ರ))

By ETV Bharat Karnataka Team

Published : Jun 30, 2024, 3:46 PM IST

ಮುಂಬೈ : 2024-25ರ ಹಣಕಾಸು ವರ್ಷದ ಜೂನ್ ತ್ರೈಮಾಸಿಕದಲ್ಲಿ ಭಾರತೀಯ ಷೇರು ಸೂಚ್ಯಂಕಗಳು ಅತ್ಯುತ್ತಮ ಪ್ರದರ್ಶನ ನೀಡಿವೆ. ಏಪ್ರಿಲ್-ಜೂನ್ ಅವಧಿಯಲ್ಲಿ ಭಾರತೀಯ ಷೇರು ಮಾರುಕಟ್ಟೆ ಬಂಡವಾಳೀಕರಣವು ಶೇಕಡಾ 13.8 ರಷ್ಟು ಹೆಚ್ಚಾಗಿದೆ. ಇದು ವಿಶ್ವದ ಅಗ್ರ 10 ಷೇರು ಮಾರುಕಟ್ಟೆಗಳಲ್ಲಿ ಅತ್ಯಧಿಕವಾಗಿದೆ. ಪ್ರಸ್ತುತ, ಭಾರತೀಯ ಈಕ್ವಿಟಿ ಮಾರುಕಟ್ಟೆ 5 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳೀಕರಣದೊಂದಿಗೆ ವಿಶ್ವದ ಐದನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿದೆ.

ಏಪ್ರಿಲ್ ಮತ್ತು ಜೂನ್ ನಡುವೆ ವಿಶ್ವದ ಅತಿದೊಡ್ಡ ಷೇರು ಮಾರುಕಟ್ಟೆಯಾದ ಯುಎಸ್ ಮಾರುಕಟ್ಟೆಗಳ ಮೌಲ್ಯವು ಶೇಕಡಾ 2.75 ರಷ್ಟು ಏರಿಕೆಯಾಗಿ 56 ಟ್ರಿಲಿಯನ್ ಡಾಲರ್​ಗೆ ತಲುಪಿದೆ. ಇನ್ನು ವಿಶ್ವದ ಎರಡನೇ ಅತಿದೊಡ್ಡ ಷೇರು ಮಾರುಕಟ್ಟೆಯಾದ ಚೀನಾದ ಈಕ್ವಿಟಿ ಮಾರುಕಟ್ಟೆಯ ಮೌಲ್ಯವು ಏಪ್ರಿಲ್ ಮತ್ತು ಜೂನ್ ನಡುವೆ ಶೇಕಡಾ 5.59 ರಷ್ಟು ಕುಸಿದಿದೆ. ಚೀನಾದ ಷೇರು ಮಾರುಕಟ್ಟೆಯ ಬಂಡವಾಳೀಕರಣವು 8.6 ಟ್ರಿಲಿಯನ್ ಡಾಲರ್​ಗೆ ಇಳಿಕೆಯಾಗಿದೆ.

ಭಾರತದ ನಂತರದ ಸ್ಥಾನಗಳಲ್ಲಿರುವ, ತೈವಾನ್ ಮತ್ತು ಹಾಂಗ್ ಕಾಂಗ್ ಮಾರುಕಟ್ಟೆಗಳು ಏಪ್ರಿಲ್ ಮತ್ತು ಜೂನ್ ನಡುವೆ ಕ್ರಮವಾಗಿ ಶೇಕಡಾ 11 ಮತ್ತು ಶೇಕಡಾ 7.3 ರಷ್ಟು ಏರಿಕೆಯಾಗಿದೆ. ತೈವಾನ್ ಮತ್ತು ಹಾಂಗ್ ಕಾಂಗ್ ನ ಮಾರುಕಟ್ಟೆ ಮೌಲ್ಯವು ಕ್ರಮವಾಗಿ 2.49 ಟ್ರಿಲಿಯನ್ ಮತ್ತು 5.15 ಟ್ರಿಲಿಯನ್ ಗೆ ಏರಿಕೆಯಾಗಿದೆ. ಇದೇ ಸಮಯದಲ್ಲಿ, ಯುನೈಟೆಡ್ ಕಿಂಗ್ಡಮ್​ನ ಷೇರು ಮಾರುಕಟ್ಟೆಯ ಮೌಲ್ಯವು ಶೇಕಡಾ 3.3 ರಷ್ಟು ಏರಿಕೆಯಾಗಿ 3.2 ಟ್ರಿಲಿಯನ್ ಡಾಲರ್​ಗೆ ತಲುಪಿದೆ.

ಟಾಪ್ 10 ಮಾರುಕಟ್ಟೆಗಳಲ್ಲಿ ಸ್ಥಾನ ಪಡೆದಿರುವ ಸೌದಿ ಅರೇಬಿಯಾದ ಷೇರು ಮಾರುಕಟ್ಟೆ ಮೌಲ್ಯಮಾಪನವು ಶೇಕಡಾ 8.7 ರಷ್ಟು ಕುಸಿದು 2.67 ಟ್ರಿಲಿಯನ್ ಡಾಲರ್​ಗೆ ತಲುಪಿದೆ. ಇದರ ನಂತರ, ಫ್ರೆಂಚ್ ಷೇರು ಮಾರುಕಟ್ಟೆಯ ಮೌಲ್ಯವು ಶೇಕಡಾ 7.63 ರಷ್ಟು ಕುಸಿದು 3.18 ಟ್ರಿಲಿಯನ್ ಡಾಲರ್​ಗೆ ತಲುಪಿದೆ. ಹಾಗೆಯೇ ಜಪಾನ್ ಷೇರು ಮಾರುಕಟ್ಟೆಯ ಮೌಲ್ಯವು ಶೇಕಡಾ 6.24 ರಷ್ಟು ಕುಸಿದು 6.31 ಟ್ರಿಲಿಯನ್ ಡಾಲರ್​ಗೆ ತಲುಪಿದೆ.

ಭಾರತೀಯ ಷೇರು ಮಾರುಕಟ್ಟೆಯು 2023 ರಿಂದ ಏರಿಕೆಯ ಟ್ರೆಂಡ್​​ ಅನ್ನು ದಾಖಲಿಸಿದೆ. ಕಳೆದ ವರ್ಷ, ಭಾರತದ ಷೇರು ಮಾರುಕಟ್ಟೆಯ ಮೌಲ್ಯಮಾಪನವು ಶೇಕಡಾ 25 ಕ್ಕಿಂತ ಹೆಚ್ಚಾಗಿದೆ. ಜೂನ್​ನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಶೇಕಡಾ 7 ರಷ್ಟು ಏರಿಕೆ ಕಂಡಿವೆ.

ಇದನ್ನೂ ಓದಿ : ಟಾರಿಫ್ ಹೆಚ್ಚಳದಿಂದ ಟೆಲಿಕಾಂ ಉದ್ಯಮಕ್ಕೆ 20 ಸಾವಿರ ಕೋಟಿ ಹೆಚ್ಚುವರಿ ಲಾಭ ಸಾಧ್ಯತೆ - Mobile Tariff Hike

ABOUT THE AUTHOR

...view details