ಮುಂಬೈ (ಮಹಾರಾಷ್ಟ್ರ):ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಭಾರತದ ಆರ್ಥಿಕತೆಯು ಉತ್ತಮವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಗುರುವಾರ ಹೇಳಿದ್ದಾರೆ. ಮಾಧ್ಯಮ ಸಂವಾದದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸಗಟು ಮತ್ತು ಚಿಲ್ಲರೆ ಹಣದುಬ್ಬರ ಹೆಚ್ಚಾಗಿದೆ. ಆದರೆ, ಅದು ಮಧ್ಯಮ ಹಂತದಲ್ಲಿದೆ. ಹೀಗಾಗಿ, ದೇಶದ ಆರ್ಥಿಕ ವ್ಯವಸ್ಥೆಯು ಉತ್ತಮ ಗತಿಯಲ್ಲಿ ಸಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಇತ್ತೀಚಿನ ದಿನಗಳಲ್ಲಿ ದೇಶೀಯ ಆರ್ಥಿಕತೆಯು ಸ್ಥಿತಿಸ್ಥಾಪಕತ್ವ ಪ್ರದರ್ಶಿಸುವ ಮೂಲಕ ದೀರ್ಘಾವಧಿಯ ಬಾಳಿಕೆಯನ್ನು ಉತ್ತಮಪಡಿಸಿದೆ. ಜಾಗತಿಕ ಆರ್ಥಿಕತೆಯಲ್ಲಿ ಇದೀಗ ಹೆಚ್ಚುತ್ತಿರುವ ಬಾಂಡ್ ಖರೀದಿ, ಸರಕುಗಳ ಬೆಲೆಗಳಲ್ಲಿ ವ್ಯತ್ಯಾಸ ಉಂಟಾಗುತ್ತಿದೆ. ಮೈಕ್ರೋ ಎಕಾನಮಿಕ್ ಸಂಸ್ಥೆಗಳು, ಸ್ಥಿರ ಹಣಕಾಸು ವ್ಯವಸ್ಥೆ ಮತ್ತು ಚೇತರಿಸಿಕೊಳ್ಳುವ ಬಾಹ್ಯ ವಲಯದಂತಹ ಬಫರ್‌ಗಳಿಂದ ನಡೆಸಲ್ಪಡುತ್ತದೆ ಎಂದು ಹೇಳಿದರು.
ರೂಪಾಯಿ ಹೊಸ ಕನಿಷ್ಠ ಮಟ್ಟಕ್ಕೆ ತಲುಪಿದ್ದರೂ, ಭಾರತದ ಬಾಹ್ಯ ವಲಯವು ಇತ್ತೀಚಿನ ಅವಧಿಯಲ್ಲಿ ಶಕ್ತಿ ಮತ್ತು ಸ್ಥಿರತೆಯನ್ನು ಪ್ರದರ್ಶಿಸಿದೆ. ಚಾಲ್ತಿ ಖಾತೆ ಕೊರತೆಯು ನಿರ್ವಹಿಸಬಹುದಾದ ಮಟ್ಟದಲ್ಲಿ ಉಳಿದಿದೆ. ಸರಕು ರಫ್ತುಗಳು ಬೆಳೆಯಲು ಪ್ರಾರಂಭಿಸಿವೆ. ಸೇವಾ ರಫ್ತು ಬೆಳವಣಿಗೆಯು ಹೆಚ್ಚಾಗಿದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದರು.