ಕರ್ನಾಟಕ

karnataka

ETV Bharat / business

ಐಟಿ ರಿಟರ್ನ್ಸ್​​ ಸಲ್ಲಿಸುವ ಗಡುವು ಸಮೀಪಿಸುತ್ತಿದೆ, ಈ ಸಂಗತಿಗಳು ನಿಮ್ಮ ನೆನಪಿನಲ್ಲಿರಲಿ! - IT Returns - IT RETURNS

ನಿಮ್ಮ ಆದಾಯ ನಿಗದಿತ ಮಿತಿಯನ್ನು ಮೀರಿದಾಗ ಸಂಬಂಧಪಟ್ಟ ಸ್ಲ್ಯಾಬ್‌ಗಳಲ್ಲಿ ತೆರಿಗೆ ಪಾವತಿಸಬೇಕಾಗುತ್ತದೆ. ನಿಯಮಗಳ ಪ್ರಕಾರ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕು. ಆಗ ಮಾತ್ರ ಆದಾಯ ಕಾನೂನುಬದ್ಧ ಎಂದು ಗುರುತಿಸಲಾಗುತ್ತದೆ.

IT RETURN FILING  IT RETURN STATUS  INCOME TAX DEPARTMENT  INCOME TAX RETURN
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Jun 28, 2024, 5:38 PM IST

2023-24ರ (ಮೌಲ್ಯಮಾಪನ ವರ್ಷ 2024-25) ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಸಮಯ ಸಮೀಪಿಸುತ್ತಿದೆ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಾಗ ತಿಳಿದಿರಬೇಕಾದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.

ಆದಾಯ ಗಳಿಸಿದಾಗ ಮೂಲದಲ್ಲಿ ತೆರಿಗೆ ಕಡಿತಗೊಳಿಸಲಾಗುತ್ತದೆ. ಅದುವೇ ಟಿಡಿಎಸ್‌ (TDS). ನಾವು ಮಾಡುವ ಎಲ್ಲ ಖರೀದಿಗಳ ಮೇಲೂ ಮೂಲದಲ್ಲಿ ತೆರಿಗೆ ಸಂಗ್ರಹಿಸಲಾಗುತ್ತದೆ ಅದುವೇ ಟಿಸಿಎಸ್‌(TCS).

ಈ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆ ಕಾಲಕಾಲಕ್ಕೆ ರಿಟರ್ನ್ಸ್ ಸಲ್ಲಿಸುವ ಪ್ರಕ್ರಿಯೆಯನ್ನು ಸರಳಗೊಳಿಸುತ್ತಿದೆ. ಇದನ್ನು ಅರ್ಥಮಾಡಿಕೊಂಡರೆ ಸಾಕು.

ಜುಲೈ 31ರೊಳಗೆ ಐಟಿಆರ್‌ ಸಲ್ಲಿಸಿ: ಆದಾಯ ತೆರಿಗೆ ರಿಟರ್ನ್ಸ್(ಐಟಿಆರ್‌) ಸಲ್ಲಿಸುವ ತೆರಿಗೆದಾರರು ಗಮನಿಸಬೇಕಾದ ಮೊದಲ ವಿಷಯವೇ ಅಂತಿಮ ಗಡುವು. ಸಾಮಾನ್ಯವಾಗಿ ಇದು ಜುಲೈ 31 ಆಗಿರುತ್ತದೆ. ಕೆಲವು ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಸರ್ಕಾರ ಈ ಗಡುವನ್ನು ವಿಸ್ತರಿಸುತ್ತದೆ. ಆಡಿಟ್ ವ್ಯಾಪ್ತಿಗೆ ಒಳಪಡದ ಎಲ್ಲಾ ವ್ಯಕ್ತಿಗಳು ನಿಗದಿತ ಸಮಯದ ಮಿತಿಯೊಳಗೆ ರಿಟರ್ನ್ಸ್ ಸಲ್ಲಿಸಬೇಕು. 2023-24ರ ಹಣಕಾಸು ವರ್ಷದ ಆದಾಯವನ್ನು ಸಾಧ್ಯವಾದಷ್ಟು ಬೇಗ ಸಲ್ಲಿಸಲು ಪ್ರಯತ್ನಿಸಿ. ಇದು ಕೊನೆಯ ಕ್ಷಣದ ಚಿಂತೆಗಳನ್ನು ನಿವಾರಿಸುತ್ತದೆ.

ತೆರಿಗೆ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಿ:ತೆರಿಗೆದಾರರಿಗೆ ತಾವು ಯಾವ ತೆರಿಗೆ ಪದ್ಧತಿಯನ್ನು ಆರಿಸಿಕೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇರಬೇಕು. ಹಳೆಯ ತೆರಿಗೆ ಪದ್ಧತಿಯಲ್ಲಿ ವಿನಾಯಿತಿಗಳನ್ನು ಪಡೆಯಬಹುದು. ಹೊಸ ತೆರಿಗೆ ವ್ಯವಸ್ಥೆಯಲ್ಲಿ ಆದಾಯವನ್ನು ಅವಲಂಬಿಸಿ ಕೆಲವು ಸ್ಲ್ಯಾಬ್‌ಗಳಲ್ಲಿ ತೆರಿಗೆ ಪಾವತಿಸಬೇಕಾಗುತ್ತದೆ. ಇಲ್ಲಿ ಯಾವುದೇ ವಿನಾಯಿತಿಗಳಿಗೆ ಅವಕಾಶವಿಲ್ಲ. ಎರಡೂ ವಿಧಾನಗಳು ಕೆಲವು ಸಾಧಕ-ಬಾಧಕಗಳನ್ನು ಹೊಂದಿವೆ. ಆದ್ದರಿಂದ, ರಿಟರ್ನ್ಸ್ ಸಲ್ಲಿಸುವಾಗ ಒಮ್ಮೆ Income Tax ಪೋರ್ಟಲ್‌ನಲ್ಲಿರುವ ಕ್ಯಾಲ್ಕುಲೇಟರ್ ಬಳಸಿ. ಆದಾಯ ಮತ್ತು ವಿನಾಯಿತಿಗಳನ್ನು ಅವಲಂಬಿಸಿ, ಕೆಲವೊಮ್ಮೆ ಹಳೆಯ ತೆರಿಗೆ ವ್ಯವಸ್ಥೆ ಪ್ರಯೋಜನಕಾರಿಯಾಗುತ್ತದೆ. ಇಲ್ಲವೇ ಹೊಸ ತೆರಿಗೆ ಪದ್ಧತಿಯೇ ಪ್ರಯೋಜನವಾಗಬಹುದು. ಎಚ್ಚರಿಕೆಯಿಂದ ವಿಶ್ಲೇಷಿಸಿದ ನಂತರ ಸೂಕ್ತ ತೆರಿಗೆ ನೀತಿ ಆಯ್ಕೆ ಮಾಡಿ.

ನೀವು ಯಾವ ಕಾಲಂನಲ್ಲಿದ್ದೀರಿ?: ITR ಸಲ್ಲಿಸುವ ಮೊದಲು ನೀವು ಯಾವ ಕಾಲಂನಲ್ಲಿ ಇದ್ದೀರಿ ಎಂದು ತಿಳಿದುಕೊಳ್ಳಿ. ಅನುಮತಿಸಲಾದ ವಿನಾಯಿತಿಗಳನ್ನು ಹೊರತುಪಡಿಸಿ ಆದಾಯ ತೆರಿಗೆಯ ಆದಾಯವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಕೆಲವೊಮ್ಮೆ, ವೇತನದಿಂದ ಬರುವ ಆದಾಯ, ಬಡ್ಡಿ ಮತ್ತು ಲಾಭಾಂಶವನ್ನೂ ಸೇರಿಸಿದರೆ ಕಾಲಮ್ ಬದಲಾಗಬಹುದು. ನಂತರ ತೆರಿಗೆ ಪಾವತಿಸಬೇಕು. ಆದ್ದರಿಂದ ನಿಮ್ಮ ಆದಾಯವನ್ನು ಸಂಪೂರ್ಣವಾಗಿ ಲೆಕ್ಕಾಚಾರ ಮಾಡಿದ ನಂತರ ರಿಟರ್ನ್ಸ್ ಪ್ರಕ್ರಿಯೆಯನ್ನು ಪ್ರಾರಂಭಿಸಿ. ಫಾರ್ಮ್ 16ರ ಜೊತೆಗೆ ವಾರ್ಷಿಕ ಮಾಹಿತಿ ವರದಿ (AIS) ಅನ್ನು ಪರಿಶೀಲಿಸಿ. ಆಗ ಮಾತ್ರ ಯಾವುದೇ ತಪ್ಪುಗಳಿಲ್ಲದೆ ರಿಟರ್ನ್ಸ್​ ಸಲ್ಲಿಸಬಹುದು.

ಸರಿಯಾದ ದಾಖಲೆಗಳನ್ನು ನಮೂದಿಸಿ: ವ್ಯಕ್ತಿಗಳ ಆದಾಯ ಮತ್ತು ಆದಾಯದ ಮೂಲಗಳನ್ನು ಅವಲಂಬಿಸಿ ಸರಿಯಾದ ITR ಫಾರ್ಮ್ ಆಯ್ಕೆ ಮಾಡುವುದು ಅವಶ್ಯಕ. ಆದಾಯ ತೆರಿಗೆ ಇಲಾಖೆ ಈಗಾಗಲೇ ಈ ದಾಖಲೆಗಳನ್ನು ಲಭ್ಯಗೊಳಿಸಿದೆ. ಸಂಬಳದ ಮೂಲಕ 50 ಲಕ್ಷ ರೂ.ವರೆಗೆ ಆದಾಯ, ಒಂದೇ ಮನೆಯಿಂದ ಆದಾಯ, ಬಡ್ಡಿ, ಲಾಭಾಂಶ ಇತ್ಯಾದಿಗಳನ್ನು ಹೊಂದಿರುವವರು ITR-1 ಅನ್ನು ಸಲ್ಲಿಸಬೇಕು. ಇವುಗಳ ಹೊರತಾಗಿ, ಬಂಡವಾಳ ಲಾಭಗಳು, ವಿದೇಶಿ ಆಸ್ತಿಗಳಿಂದ ಆದಾಯ, ಹಿಂದೂ ಅವಿಭಜಿತ ಕುಟುಂಬಗಳು ಐಟಿಆರ್ -2 ಮತ್ತು ಐಟಿಆರ್ -3 ರಲ್ಲಿ ಸೂಕ್ತವಾದ ದಾಖಲೆಯನ್ನು ಆಯ್ಕೆ ಮಾಡಬೇಕಾಗುತ್ತದೆ. ವ್ಯಾಪಾರ ಅಥವಾ ವೃತ್ತಿಪರ ಆದಾಯ ಹೊಂದಿರುವ ವ್ಯಕ್ತಿಗಳು, HUFಗಳು ಆದಾಯಕ್ಕಾಗಿ ITR-4 ಆರಿಸಿಕೊಳ್ಳಬೇಕು. ಯಾವ ದಾಖಲೆಗಳನ್ನು ಆಯ್ಕೆ ಮಾಡಬೇಕೆಂಬ ಬಗ್ಗೆ ಸಂದೇಹವಿದ್ದರೆ ತಜ್ಞರನ್ನು ಸಂಪರ್ಕಿಸುವುದು ಉತ್ತಮ. ಇಲ್ಲವೇ ತೆರಿಗೆ ಇಲಾಖೆ ಸಹಾಯ ಕೇಂದ್ರಗಳನ್ನು ಸಂಪರ್ಕಿಸಬಹುದು.

ಬ್ಯಾಂಕ್ ವಿವರಗಳು: ಐಟಿಆರ್ ಸಲ್ಲಿಸುವ ಮೊದಲು ಬ್ಯಾಂಕ್ ಖಾತೆಯನ್ನು ಪರಿಶೀಲಿಸಬೇಕು. ಹೆಸರು, ವಿಳಾಸ, ಪ್ಯಾನ್, ಆಧಾರ್ ಇತ್ಯಾದಿ ವಿವರಗಳು ಸರಿಯಾಗಿವೆಯೇ ಎಂದು ನೋಡಿ. ಒಂದಕ್ಕಿಂತ ಹೆಚ್ಚು ಖಾತೆಗಳಿದ್ದರೆ, ತೆರಿಗೆ ಮರುಪಾವತಿ ಲಭ್ಯವಿರುವಾಗ ಯಾವ ಖಾತೆಗೆ ಜಮಾ ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು.

ದಾಖಲೆಗಳ ಕುರಿತು ಜಾಗ್ರತೆ ಇರಲಿ:ಆದಾಯ ತೆರಿಗೆ ವಿನಾಯಿತಿ ಪಡೆಯಲು ಮಾಡಿದ ಹೂಡಿಕೆಯ ವಿವರಗಳ ದಾಖಲೆಯ ಬಗ್ಗೆ ಜಾಗೃತಿ ವಹಿಸಬೇಕು. ನಿಮ್ಮ ಕಚೆರಿಯಲ್ಲಿ ಕೊಟ್ಟಿರುವ ದಾಖಲೆಗಳು ನಿಮ್ಮೊಂದಿಗೆ ಇರಬೇಕು. ಈ ದಾಖಲೆಗಳು ಮತ್ತು ಫಾರ್ಮ್-16 ಪತ್ರವನ್ನು ಭದ್ರವಾಗಿ ಒಂದು ಸ್ಥಳದಲ್ಲಿ ಇಟ್ಟಿರಿ. ಇವುಗಳನ್ನು ಡಿಜಿಟಲ್ ರೂಪದಲ್ಲಿ ಸಂರಕ್ಷಿಸುವುದು ಉತ್ತಮ.

ಒಟ್ಟಿಗೆ ಲೆಕ್ಕ ಹಾಕಿ:ಕಳೆದ ಆರ್ಥಿಕ ವರ್ಷದಲ್ಲಿ ಕೆಲವರು ಉದ್ಯೋಗ ಬದಲಾಯಿಸಿರಬಹುದು. ಅಂತಹ ಸಂದರ್ಭಗಳಲ್ಲಿ ಫಾರ್ಮ್-16 ಅನ್ನು ಎರಡೂ ಕಚೇರಿಗಳಿಂದ ತೆಗೆದುಕೊಳ್ಳಬೇಕು. ಇವೆರಡನ್ನೂ ಒಟ್ಟು ಆದಾಯವಾಗಿ ತೋರಿಸಬೇಕು. ಇಲ್ಲದಿದ್ದರೆ, ಕಂಪನಿಯಿಂದ ಆದಾಯವನ್ನು ದಾಖಲಿಸಿದರೆ, ತೊಂದರೆ ಉಂಟಾಗುತ್ತದೆ. ಇತರ ಮೂಲಗಳಿಂದ ಆದಾಯವನ್ನು ಗಳಿಸುವುದು ನಿಮಗೆ ನೆನಪಿಲ್ಲದಿದ್ದರೂ, ಅದು ವಾರ್ಷಿಕ ಮಾಹಿತಿ ಹೇಳಿಕೆಯಲ್ಲಿ (AIS) ಕಾಣಿಸಿಕೊಳ್ಳುತ್ತದೆ. ಆದ್ದರಿಂದ, ಎಲ್ಲವನ್ನೂ ಪರಿಶೀಲಿಸುವುದು ಕಡ್ಡಾಯ. ತೆರಿಗೆ ರಿಟರ್ನ್ಸ್ ಸಲ್ಲಿಸುವುದು ಸುಲಭ. ಸ್ವಂತವಾಗಿ ಫೈಲಿಂಗ್ ಮಾಡಲು ಸಾಧ್ಯವಾಗದಿದ್ದಾಗ ತೆರಿಗೆ ವೃತ್ತಿಪರರನ್ನು ಸಂಪರ್ಕಿಸುವುದು ಉತ್ತಮ. ತಪ್ಪಾದ ರಿಟರ್ನ್‌ಗಳ ಫೈಲಿಂಗ್ ಮಾಡಿದ್ರೆ ಅವುಗಳನ್ನು ಅಮಾನ್ಯಗೊಳಿಸಲಾಗುತ್ತದೆ. ಕೆಲವೊಮ್ಮೆ ನೀವು ಇದಕ್ಕಾಗಿ ಶುಲ್ಕ ಪಾವತಿಸಬೇಕಾಗುತ್ತದೆ ಎಂಬುದನ್ನು ಮರೆಯಬೇಡಿ.

ಹಿಂದಿನ ವರ್ಷ​: ಈ ಬಾರಿ ತುಂಬುತ್ತಿರುವ ಆದಾಯ ತೆರಿಗೆ ರಿಟರ್ನ್ಸ್ ಹಿಂದಿನ ಹಣಕಾಸು ವರ್ಷದ್ದು ಅಂದರೆ 2023-24ಕ್ಕೆ. ಆದರೆ, ನಾವು 2024-25ರ ಮೌಲ್ಯಮಾಪನ ವರ್ಷದಲ್ಲಿ ಸಲ್ಲಿಸುತ್ತಿದ್ದೇವೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. 2023-24ರ ಮೌಲ್ಯಮಾಪನ ವರ್ಷವನ್ನು ತಪ್ಪಾಗಿ ಆಯ್ಕೆ ಮಾಡಿದರೆ, ರಿಟರ್ನ್ಸ್ ಸಲ್ಲಿಸುವುದರಿಂದ ಯಾವುದೇ ಪ್ರಯೋಜನವಿಲ್ಲ.

ಇದನ್ನೂ ಓದಿ:ಜುಲೈ 3 ರಿಂದ ಏರ್​ಟೆಲ್​ ಟಾರಿಫ್​ ಹೆಚ್ಚಳ: ಯಾವ ಪ್ಲಾನ್​ಗೆ ಎಷ್ಟು ಏರಿಕೆ?: ಇಲ್ಲಿದೆ ಡಿಟೇಲ್ಸ್​​ - Airtel Tariff Hike

ABOUT THE AUTHOR

...view details