ನವದೆಹಲಿ: 2047ರ ವಿಕಸಿತ ಭಾರತದ ಗುರಿಯನ್ನು ಭಾರತ ತಲುಪಬೇಕಾದರೆ, ಮುಂದಿನ ಎರಡು ದಶಕಗಳ ಕಾಲ ಭಾರತದ ಬ್ಯಾಂಕಿಂಗ್ ವಲಯಕ್ಕೆ 4 ಟ್ರಿಲಿಯನ್ ಅಮೆರಿಕನ್ ಡಾಲರ್ ಬಂಡವಾಳದ ಅವಶ್ಯಕತೆ ಇದೆ ಎಂದು ಎಚ್ಎಸ್ಬಿಸಿ ಮ್ಯೂಚುವಲ್ ಫಂಡ್ ವರದಿ ತಿಳಿಸಿದೆ.
ಭಾರತವೂ ತನ್ನ ಮಹತ್ವಾಕಾಂಕ್ಷೆಯ ಗುರಿ ಸಾಧಿಸಲು ಹಣಕಾಸು ಮತ್ತು ಬ್ಯಾಂಕಿಂಗ್ ಆಸ್ತಿಗಳು ಜಿಡಿಪಿಗಿಂತ ಹೆಚ್ಚು ವೇಗದಲ್ಲಿ ಬೆಳೆಯಬೇಕು. ದೇಶದ ಜಿಡಿಪಿಯು 2023ರಲ್ಲಿ 3.4 ಟ್ರಿಲಿಯನ್ ಆಗಿದ್ದು, 2047ರಲ್ಲಿ 30 ಟ್ರಿಲಿಯನ್ ಅಮೆರಿಕನ್ ಡಾಲರ್ ತಲುಪಬೇಕಾದರೆ 9 ಪಟ್ಟು ವಿಸ್ತರಿಸುವ ನಿರೀಕ್ಷೆ ಇದೆ.
ಭಾರತೀಯ ಆರ್ಥಿಕ ಬೆಳವಣಿಗೆಯನ್ನು ಮತ್ತಷ್ಟು ವಿಸ್ತರಣೆ ಮಾಡಲು ಹಾಗೂ ಪ್ರಸ್ತುತ ಒಟ್ಟಾರೆ ಭಾರತೀಯ ಆಸ್ತಿಯ ಮೌಲ್ಯ 2023ರ ಅನ್ವಯ 6.4 ಟ್ರಿಲಿಯನ್ ಅಮೆರಿಕನ್ ಡಾಲರ್ನಷ್ಟಿದೆ. ಇದು 2047ರ ಹೊತ್ತಿಗೆ 120 ಟ್ರಿಲಿಯನ್ ಅಮೆರಿಕನ್ ಡಾಲರ್ಗೆ ತಲುಪಬೇಕಾದರೆ, ಈಗಿನ 19 ಪಟ್ಟು ಬೆಳವಣಿಗೆ ಹೊಂದಬೇಕಿದೆ. ಅದೇ ರೀತಿ ಬ್ಯಾಕಿಂಗ್ ಆಸ್ತಿಗಳು ಸದ್ಯ 3.1 ಟ್ರಿಲಿಯನ್ ಇದ್ದು, ಇದು 14.5 ಪಟ್ಟು ಹೆಚ್ಚಾಗಬೇಕಿದೆ, 45 ಟ್ರಿಲಿಯನ್ ಬೆಳವಣಿಗೆ ನಿರೀಕ್ಷಿಸಲಾಗಿದೆ. ಭಾರತವು ವಿಕಸಿತ ಭಾರತದ ಜಿಡಿಪಿ ಗುರಿ ತಲುಪಲು ಬ್ಯಾಂಕಿಂಗ್ ವಲಯವೂ ಮುಂದಿನ ಎರಡು ದಶಕದಲ್ಲಿ 4 ಟ್ರಿಲಿಯನ್ ಬಂಡಾವಳವನ್ನು ಹೊಂದಬೇಕಿದೆ ಎಂದು ಅದು ತನ್ನ ವರದಿಯಲ್ಲಿ ತಿಳಿಸಿದೆ.
ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುವಲ್ಲಿ ಅಭಿವೃದ್ಧಿ ಹೊಂದಿದ ಹಣಕಾಸು ವಲಯವು ಸಾಲ, ಹೂಡಿಕೆಗಳು ಮತ್ತು ಇತರ ಹಣಕಾಸು ಸೇವೆಗಳನ್ನು ಒದಗಿಸುವುದು ಪ್ರಮುಖವಾಗಿದೆ. ಪ್ರಸ್ತುತ ಅಮೆರಿಕವು 135 ಟ್ರಿಲಿಯನ್ ಡಾಲರ್ ಆರ್ಥಿಕ ಸಂಪತ್ತನ್ನು ಹೊಂದಿದ್ದರೆ, ಚೀನಾ 78 ಟ್ರಿಲಿಯನ್ ಡಾಲರ್ ಹಾಗೂ ಜರ್ಮನಿ 21 ಟ್ರಿಲಿಯನ್ ಡಾಲರ್ ಸಂಪತ್ತನ್ನು ಹೊಂದಿವೆ. ಭಾರತದ ಆರ್ಥಿಕ ವಲಯವೂ ಇಂದು ಸಣ್ಣದಾಗಿ ಕಾಣುತ್ತಿದೆ. ಆರ್ಥಿಕತೆಯ ಗುರಿಯೊಂದಿಗೆ ಇದನ್ನು ಸುಸ್ಥಿರವಾಗಿ ವೇಗದ ಬೆಳವಣಿಗೆ ಕಾಣಬೇಕಿದೆ. ಆಗ ಮಾತ್ರ ಪ್ರಧಾನಿ ಹೇಳಿದ ಹಾಗೂ ಅವರು ಹಾಕಿಕೊಂಡು ಗುರಿ ಮುಟ್ಟಲು ಸಾಧ್ಯ.
ಈ ವಲಯದಲ್ಲಿ ಬೇಕಿದೆ ಭಾರಿ ಬಂಡವಾಳ: ಪ್ರಮುಖವಾಗಿ ಬ್ಯಾಂಕಿಂಗ್ ವಲಯದಲ್ಲಿ ಹೆಚ್ಚಿನ ಬಂಡವಾಳ ಬೇಕಿದೆ. ಮುಂದಿನ 20 ವರ್ಷದಲ್ಲಿ 4 ಟ್ರಿಲಿಯನ್ ಡಾಲರ್ ನಷ್ಟು ಬೇಕಿದೆ. ಈ ಬಂಡವಾಳವೂ ಅನೇಕ ಬದಲಾವಣೆ ಹಾಗೂ ಪರಿಣಾಮಗಳನ್ನು ಸೃಷ್ಟಿಸಲು ಪ್ರಮುಖವಾಗಿ ಬೇಕಾಗುತ್ತದೆ. ಇದು ಉದ್ಯಮ ಹೂಡಿಕೆ, ಕೈಗಾರಿಕಾ ಬೆಳವಣಿಗೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯನ್ನು ಸಾಧಿಸಲು ನೆರವಾಗುತ್ತದೆ. ಬಲವಾದ ಬ್ಯಾಂಕಿಂಗ್ ವ್ಯವಸ್ಥೆಯು ಭಾರತದ ಆರ್ಥಿಕತೆಯ ಜಾಗತಿಕ ಆತ್ಮವಿಶ್ವಾಸವನ್ನು ಹೆಚ್ಚಿಸಿ, ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ನೆರವಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
2030ರ ಹೊತ್ತಿಗೆ ಭಾರತದ ಜಿಡಿಪಿ ದುಪ್ಪಟ್ಟಾಗಲಿದೆ. ಆದಾಗ್ಯೂ ಸುಸ್ಥಿರ ಉನ್ನತ ಬೆಳವಣಿಗೆ ಉಳಿಸಿಕೊಳ್ಳುವುದು ನಿಜವಾದ ಸವಾಲಾಗಿದೆ. ಮುಂದಿನ ಎರಡು ದಶಕಗಳ ಕಾಲ ಹೆಚ್ಚಿನ ಬೆಳವಣಿಗೆಯನ್ನು ಉಳಿಸಿಕೊಳ್ಳುವುದು ನಿಜವಾದ ಸವಾಲಾಗಿದೆ. ಭಾರತವು ತನ್ನ ಹಣಕಾಸಿನ ವಲಯವನ್ನು ಅಗತ್ಯವಿರುವ ವೇಗದಲ್ಲಿ ಯಶಸ್ವಿಯಾಗಿ ವಿಸ್ತರಿಸಿದರೆ, 30 ಟ್ರಿಲಿಯನ್ ಜಿಡಿಪಿ ಬೆಳವಣಿಗೆ ತಲುಪುವುದು ಮಾತ್ರವಲ್ಲ. 2047ರ ಹೊತ್ತಿಗೆ ಜಾಗತಿಕ ಆರ್ಥಿಕತೆ ಪ್ರಮುಖ ಪಾತ್ರವನ್ನು ಹೊಂದಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಈ ರಾಜ್ಯವೇ ಈಗ ಮಸಾಲೆಗಳ ಕಣಜ: ಉತ್ಪಾದನೆ ಹೆಚ್ಚಿದ್ದರೂ ಸಿಗುತ್ತಿಲ್ಲ ರೈತರಿಗೆ ಸೂಕ್ತ ಬೆಲೆ: ಬೇಕಿದೆ ಮನ್ನಣೆ
ಇದನ್ನೂ ಓದಿ: ಮುಂದುವರಿದ FIIಗಳ ಮಾರಾಟ ಪ್ರಕ್ರಿಯೆ: ಭಾರತೀಯ ಷೇರುಮಾರುಕಟ್ಟೆಯಲ್ಲಿ ಸತತ ಕುಸಿತ: ಆತಂಕದಲ್ಲಿ ಹೂಡಿಕೆದಾರರು!