ಕರ್ನಾಟಕ

karnataka

ETV Bharat / business

1 ವರ್ಷದಲ್ಲಿ 2,153 ಕೋಟಿ ದೇಣಿಗೆ: ದಾನ ಧರ್ಮದಲ್ಲಿ ಅಗ್ರಸ್ಥಾನಕ್ಕೇರಿದ ನಾಡಾರ್​ : ಟಾಪ್​ 6ರಲ್ಲಿ ನಂದನ್​ ನಿಲೇಕಣಿ - SHIV NADAR DONATIONS

HCL ಟೆಕ್ನಾಲಜೀಸ್‌ನ ಸಂಸ್ಥಾಪಕ ಶಿವ ನಾಡಾರ್ ಒಂದು ವರ್ಷದಲ್ಲಿ ಲೋಕೋಪಕಾರಿ ಕಾರ್ಯಕ್ರಮಗಳಿಗಾಗಿ 2,153 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಅವರು ಎಡೆಲ್‌ಗಿವ್ ಹುರುನ್ ಇಂಡಿಯಾ ಲೋಕೋಪಕಾರಿ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ.

hcls-shiv-nadar-trumps-richest-indians-in-generosity-secured-top-spot-
1 ವರ್ಷದಲ್ಲಿ 2,153 ಕೋಟಿ ದೇಣಿಗೆ: ದಾನ ಧರ್ಮದಲ್ಲಿ ಅಗ್ರಸ್ಥಾನಕ್ಕೇರಿದ ನಾಡಾರ್​ : ಟಾಪ್​ 10ರಲ್ಲಿ ನಂದನ್​ ನಿಲೇಕಣಿ (Getty Images)

By ETV Bharat Karnataka Team

Published : Nov 7, 2024, 10:03 PM IST

ಹೈದರಾಬಾದ್​: ಪ್ರಸಿದ್ಧ ಉದ್ಯಮಿ ಮತ್ತು HCL ಟೆಕ್ನಾಲಜೀಸ್ ಸಂಸ್ಥಾಪಕ ಶಿವ ನಾಡಾರ್ ಮತ್ತೊಮ್ಮೆ ತಮ್ಮ ದೊಡ್ಡ ಹೃದಯವನ್ನು ತೋರಿಸಿದ್ದಾರೆ. ಈ ವರ್ಷದಲ್ಲಿ ದತ್ತಿ ಚಟುವಟಿಕೆಗಳಿಗೆ 2,153 ಕೋಟಿ ರೂಗಳನ್ನು ಖರ್ಚು ಮಾಡಿದ್ದಾರೆ. ಇದರೊಂದಿಗೆ ಎಡೆಲ್‌ಗಿವ್ ಹುರುನ್ ಇಂಡಿಯಾದ ಚಾರಿಟಿ ಪಟ್ಟಿಯಲ್ಲಿ ಮತ್ತೊಮ್ಮೆ ಅವರು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಗೌತಮ್ ಅದಾನಿ (11.6 ಲಕ್ಷ ಕೋಟಿ ರೂ.) ಮತ್ತು ಮುಖೇಶ್ ಅಂಬಾನಿ (10.14 ಲಕ್ಷ ಕೋಟಿ ರೂ.) ನಂತರ ಶಿವ ನಾಡಾರ್ 3.14 ಲಕ್ಷ ಕೋಟಿ ರೂಪಾಯಿಗಳೊಂದಿಗೆ ಭಾರತದ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಶಿವ ನಾಡಾರ್ ಜೊತೆಗೆ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಬಜಾಜ್ ಕುಟುಂಬ ಮೂರನೇ ಸ್ಥಾನದಲ್ಲಿದೆ.

ಕಳೆದ ವರ್ಷ ಶಿವ ನಾಡಾರ್ 2042 ಕೋಟಿ ರೂ. ದೇಣಿಗೆ ನೀಡಿದ್ದರು. ಈ ವರ್ಷ ದೇಣಿಗೆ ಶೇ 5ರಷ್ಟು ಹೆಚ್ಚಳವಾಗಿದೆ. ಎರಡನೇ ಸ್ಥಾನದಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ 407 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಇದು ಕಳೆದ ವರ್ಷಕ್ಕಿಂತ ಶೇ 8ರಷ್ಟು ಹೆಚ್ಚು ಎಂದು ವರದಿ ಹೇಳಿದೆ. ಇನ್ನು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಬಜಾಜ್ ಕುಟುಂಬವು 352 ಕೋಟಿ ರೂಗಳನ್ನು ದೇಣಿಗೆ ನೀಡುವ ಮೂಲಕ ತಮ್ಮ ಉದಾರತೆಯನ್ನು ತೋರಿಸಿದೆ. ಇದು ಕಳೆದ ವರ್ಷಕ್ಕಿಂತ ಶೇ.33ರಷ್ಟು ಹೆಚ್ಚು. ನಾಲ್ಕನೇ ಸ್ಥಾನದಲ್ಲಿರುವ ಕುಮಾರ ಮಂಗಳಂ ಬಿರ್ಲಾ ಕುಟುಂಬ ಸಮಾಜ ಸೇವೆಗೆ 334 ಕೋಟಿ ರೂ. ನೀಡಿದೆ. ಕಳೆದ ವರ್ಷಕ್ಕಿಂತ ಶೇ.17ರಷ್ಟು ಹೆಚ್ಚು ಖರ್ಚು ಮಾಡಿದೆ. ಐದನೇ ಸ್ಥಾನದಲ್ಲಿರುವ ಗೌತಮ್ ಅದಾನಿ ಅವರು ಸಮಾಜ ಸೇವೆಗಾಗಿ 330 ಕೋಟಿ ರೂ. ಇದು ಕಳೆದ ವರ್ಷಕ್ಕಿಂತ ಶೇ 16ರಷ್ಟು ಹೆಚ್ಚು ಎಂದು ವರದಿಯಲ್ಲಿ ಹೇಳಿದೆ.

ಇತ್ತೀಚಿನ ಹುರುನ್ ಇಂಡಿಯಾ ಚಾರಿಟಿ ಪಟ್ಟಿಯಲ್ಲಿ ಕರ್ನಾಟಕದ ನಂದನ್​ ನಿಲೇಕಣಿ 6ನೇ ಸ್ಥಾನದಲ್ಲಿದ್ದಾರೆ. ಅವರ ಪತ್ನಿ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದ್ದಾರೆ. ಇನ್ನು ಕೃಷ್ಣ ಚಿವುಕುಲ 7ನೇ ಸ್ಥಾನ ಮತ್ತು ಸುಶ್ಮಿತಾ-ಸುಬ್ರೊಟೊ ಬಾಗ್ಚಿ 9ನೇ ಸ್ಥಾನದಲ್ಲಿದ್ದು, ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಏತನ್ಮಧ್ಯೆ, ಹುರುನ್ ಇಂಡಿಯಾದ ಲೋಕೋಪಕಾರಿ ಪಟ್ಟಿಯಲ್ಲಿ ಅಗ್ರ 10 ದಾನಿಗಳು ಒಟ್ಟು 4,625 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ವರದಿ ಹೇಳುತ್ತದೆ. ಅವರಲ್ಲಿ ಆರು ಮಂದಿ ಶಿಕ್ಷಣಕ್ಕಾಗಿ ದೊಡ್ಡ ಮೊತ್ತವನ್ನು ಖರ್ಚು ಮಾಡಿದ್ದಾರೆ ಎಂದು ಅದು ಹೇಳಿದೆ.

ವರದಿ ಪ್ರಕಾರ ಈ ಪಟ್ಟಿಯಲ್ಲಿ 203 ಮಂದಿ 5 ಕೋಟಿಗೂ ಹೆಚ್ಚು ದೇಣಿಗೆ ನೀಡಿದ್ದಾರೆ. ಆದರೆ ಈ 203 ದಾನಿಗಳ ಸರಾಸರಿ ದೇಣಿಗೆ ಮೌಲ್ಯ 71 ಕೋಟಿಯಿಂದ ರೂ.43 ಕೋಟಿಗೆ ಇಳಿಕೆ ಕಂಡಿದೆ. ಹುರುನ್ 2023 ಪಟ್ಟಿಯ ಪ್ರಕಾರ, 119 ದಾನಿಗಳು ರೂ.71 ಕೋಟಿಗಳಷ್ಟು ಹಣವನ್ನು ನೀಡಿದ್ದಾರೆ.

ಇವರೇ ನೋಡಿ ಈ ಅಗ್ರ 10 ದಾನಿಗಳು

ದಾನಿಗಳ ವಿವರ ದಾನ ಮಾಡಿದ ಮೊತ್ತ
1. ಶಿವ ನಾಡಾರ್​ ರೂ.2153 ಕೋಟಿ
2. ಮುಕೇಶ್​ ಅಂಬಾನಿ ರೂ.407 ಕೋಟಿ
3. ಬಜಾಜ್​ ಕುಟುಂಬ ರೂ.352 ಕೋಟಿ
4. ಕುಮಾರ ಮಂಗಳಂ ಬಿರ್ಲಾ ರೂ.334 ಕೋಟಿ
5. ಗೌತಮ ಅದಾನಿ ರೂ.330 ಕೋಟಿ
6. ನಂದನ್ ನಿಲೇಕಣಿ ರೂ.307 ಕೋಟಿ
7. ಕೃಷ್ಣ ಚಿವುಕುಲ ರೂ. 228 ಕೋಟಿ
8. ಅನಿಲ್​ ಅಗರ್ವಾಲ್​ ರೂ.181 ಕೋಟಿ
9. ಸುಶ್ಮಿತಾ, ಸುಬ್ರತೋ ಬಾಗ್ಚಿ ರೂ.179 ಕೋಟಿ
10. ರೋಹಿಣಿ ನಿಲೇಕಣಿ ರೂ.154 ಕೋಟಿ

ಇದನ್ನು ಓದಿ:4 ತಿಂಗಳ ಖರೀದಿಯ ನಂತರ ಎಫ್​ಪಿಐಗಳಿಂದ 94 ಸಾವಿರ ಕೋಟಿ ಮೌಲ್ಯದ ಷೇರು ಮಾರಾಟ

ABOUT THE AUTHOR

...view details