ಕರ್ನಾಟಕ

karnataka

ETV Bharat / business

ಏರುತ್ತಲೇ ಇದೆ ಬಂಗಾರದ ಬೆಲೆ: ರಾಜ್ಯದಲ್ಲಿಂದು ಚಿನ್ನ- ಬೆಳ್ಳಿ ದರ ಎಷ್ಟಿದೆ ಗೊತ್ತಾ?; ಇಲ್ಲಿದೆ ವಿವರ - GOLD PRICE TODAY

ಚಿನ್ನದ ದರ ದಿನದಿಂದ ದಿನಕ್ಕೆ ಗಗನಮುಖಿ ಆಗುತ್ತಿದೆ. ದೇಶದ ಕೆಲವಡೆ 10 ಗ್ರಾಂನ 24 ಕ್ಯಾರೆಟ್​ ಚಿನ್ನದ ಬೆಲೆ 80 ಸಾವಿರ ಆಸುಪಾಸಿಗೆ ತಲುಪಿದೆ. ಬೆಂಗಳೂರಿನಲ್ಲೂ ಬಂಗಾರದ ಬೆಲೆ ಹೆಚ್ಚಳವಾಗುತ್ತಲೇ ಸಾಗಿದೆ.

gold rate today october 19th 2024 stock market rupee value cryptocurrency  prices
ಇಂದು ರಾಜ್ಯದಲ್ಲಿ ಚಿನ್ನ- ಬೆಳ್ಳಿ ಬೆಲೆ ಎಷ್ಟಿದೆ; ಇಲ್ಲಿದೆ ವಿವರ (Getty images)

By ETV Bharat Karnataka Team

Published : Oct 19, 2024, 9:33 AM IST

ಬೆಂಗಳೂರು/ಹೈದರಾಬಾದ್​:ದೇಶದಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಲಕ್ಷ ರೂ ತಲುಪುವ ಕಾಲ ದೂರವೇನಿಲ್ಲ ಅನಿಸುತ್ತಿದೆ. ಇನ್ನು ಕೆಜಿ ಬೆಳ್ಳಿ ಹತ್ತಿರ ಹತ್ತಿರ ಲಕ್ಷ ರೂಗೆ ಬಂದು ನಿಂತಿದೆ. ದೇಶದ ವಿವಿಧೆಡೆ ಶುಕ್ರವಾರ 10 ಗ್ರಾಂ ಚಿನ್ನದ ಬೆಲೆ ರೂ.79,850ರಷ್ಟಿದ್ದರೆ, ಶನಿವಾರ ರೂ.100ರಷ್ಟು ಏರಿಕೆಯಾಗಿ ರೂ.79,950ಕ್ಕೆ ತಲುಪಿದೆ. ಶುಕ್ರವಾರ ಪ್ರತಿ ಕೆ.ಜಿ ಬೆಳ್ಳಿ ಬೆಲೆ ರೂ.94,660 ರಷ್ಟಿದ್ದರೆ, ಶನಿವಾರ ರೂ.3000 ಏರಿಕೆಯಾಗಿ ರೂ.97,660ಕ್ಕೆ ತಲುಪಿದೆ.

ಹಾಗಾದರೆ ಬೆಂಗಳೂರಲ್ಲಿ ಎಷ್ಟಿದೆ ಇಂದಿನ ಚಿನ್ನದ ದರ: ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಒಂದು ಗ್ರಾಂ) ರೂ. 7,241 ಆಗಿದೆ. 10 ಗ್ರಾಂ ಬಂಗಾರಕ್ಕೆ ಇವತ್ತು ಹತ್ತು ರೂಪಾಯಿ ಏರಿಕೆ ಆಗಿದ್ದು, 72410 ರೂ ಗೆ ಮಾರಾಟವಾಗುತ್ತಿದೆ. ಇದೇ 24 ಕ್ಯಾರೆಟ್​ ಬಂಗಾರಕ್ಕೆ 78,990 ರೂ ದರ ಇದೆ. ನಿನ್ನೆ ಈ ದರ 78,980 ರೂ ಇತ್ತು.

ಗಮನಿಸಿ: ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾಗುತ್ತವೆ. ಗಮನಿಸಬಹುದು.

ಸ್ಪಾಟ್ ಗೋಲ್ಡ್ ಬೆಲೆ : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಹೆಚ್ಚಾಗಿದೆ. ಶುಕ್ರವಾರ ಒಂದು ಔನ್ಸ್ ಚಿನ್ನದ ಬೆಲೆ 2710 ಡಾಲರ್ ಆಗಿದ್ದರೆ ಶನಿವಾರದ ವೇಳೆಗೆ 21 ಡಾಲರ್ ಏರಿಕೆಯಾಗಿ 2721 ಡಾಲರ್ ತಲುಪಿದೆ. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 33 ಡಾಲರ್ ಆಗಿದೆ.

ಕ್ರಿಪ್ಟೋಕರೆನ್ಸಿ ಬೆಲೆಗಳು ಹೇಗಿವೆ?;ಕ್ರಿಪ್ಟೋಕರೆನ್ಸಿ ವಹಿವಾಟು ಭಾರೀ ಲಾಭದೊಂದಿಗೆ ಮುಂದುವರಿಯುತ್ತಿದೆ. ಪ್ರಮುಖ ಕ್ರಿಪ್ಟೋ ಕರೆನ್ಸಿಗಳ ಪ್ರಸ್ತುತ ಮೌಲ್ಯಗಳು ಹೀಗಿವೆ

ಕ್ರಿಪ್ಟೋ ಕರೆನ್ಸಿ ಪ್ರಸ್ತುತ ಬೆಲೆ
ಬಿಟ್‌ಕಾಯಿನ್ 43,55,564 ರೂ.
ಎಥೆರಿಯಮ್ 1,63,638 ರೂ.
ಟೆಥರ್ 76.61 ರೂ.
ಬೈನಾನ್ಸ್ ನಾಣ್ಯ 39,516 ರೂ.
ಸೋಲೋನಾ 8,500 ರೂ.

ರೂಪಾಯಿ ಮೌಲ್ಯ: ಪ್ರಸ್ತುತ, ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿಯ ವಿನಿಮಯ ದರವು ರೂ.84 ಆಗಿದೆ.

ಇದನ್ನು ಓದಿ:ದಸರಾ ಎಫೆಕ್ಟ್! ₹78,000 ತಲುಪಿದ ಚಿನ್ನ, ₹93,000 ದಾಟಿದ ಬೆಳ್ಳಿ ಬೆಲೆ!

ABOUT THE AUTHOR

...view details