ಕರ್ನಾಟಕ

karnataka

ETV Bharat / business

ನೀವು ಬೇಗನೆ ಕೋಟ್ಯಧಿಪತಿ ಆಗಲು ಬಯಸುವಿರಾ?: 15x15x15 ನಿಯಮ ಅನುಸರಿಸಿ! - 15x15x15 Investing Rule - 15X15X15 INVESTING RULE

15x15x15 Investing Rule: ನೀವು ಕೋಟ್ಯಧಿಪತಿ ಆಗುವ ಕನಸು ಹೊಂದಿದ್ದೀರಾ? ಆ ಕನಸನ್ನು ನನಸು ಮಾಡುವ ದಾರಿ ನಿಮ್ಮ ಕೈಯಲ್ಲಿದೆ. 15x15x15 ನಿಯಮವನ್ನು ಅನುಸರಿಸುವ ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ, ನಿಮ್ಮ ಕನಸನ್ನು ನೀವು ನನಸಾಗಿಸಬಹುದು. ಈ ನಿಯಮ ಏನು? ಹೂಡಿಕೆ ಮಾಡುವುದು ಹೇಗೆ? ಎಂಬುದನ್ನು ಅರಿತುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

Mutual Funds  Stock market  15x15x15 Investing Rule
ನೀವು ಬೇಗನೆ ಕೋಟ್ಯಧಿಪತಿ ಆಗಲು ಬಯಸುವಿರಾ? 15x15x15 ನಿಯಮ ಅನುಸರಿಸಿ (ETV Bharat)

By ETV Bharat Karnataka Team

Published : Jun 10, 2024, 8:51 AM IST

15x15x15 Investing Rule: ಈ ಹಣದಿಂದ ಮುನ್ನಡೆಯುತ್ತಿರುವ ಜಗತ್ತಿನಲ್ಲಿ, ಅನೇಕ ಜನರು ಬೃಹತ್ ಸಂಪತ್ತನ್ನು ಗಳಿಸಲು ಕನಸು ಕಾಣುತ್ತಾರೆ. ದೀರ್ಘಾವಧಿ ಸಂಪತ್ತು ಸೃಷ್ಟಿಗೆ ಮ್ಯೂಚುವಲ್ ಫಂಡ್‌ಗಳು ಉತ್ತಮ ಆಯ್ಕೆಯಾಗಿವೆ. ಆದರೆ, ಇದರಲ್ಲೂ ಕೆಲವು ತಂತ್ರಗಳಿವೆ. ಕೆಲವೊಂದು ನಿಯಮಗಳನ್ನು ಪಾಲಿಸಿದರೆ, ನಿರೀಕ್ಷೆಗಿಂತ ಕಡಿಮೆ ಸಮಯದಲ್ಲಿ ಕೋಟ್ಯಧಿಪತಿ ಆಗಬಹುದು. ಈ ''15x15x15'' ನಿಯಮವು ಇವುಗಳಲ್ಲಿ ಒಂದಾಗಿದೆ. ಈ ನಿಯಮದಿಂದ ನೀವು 15 ವರ್ಷಗಳಲ್ಲಿ ಕೋಟ್ಯಧಿಪತಿ ಆಗಬಹುದು! ಅದು ಹೇಗೆ ಎಂಬುದನ್ನು ತಿಳಿಯೋಣ.

15x15x15 ನಿಯಮ ಏನು ಹೇಳುತ್ತೆ?:ಮ್ಯೂಚುವಲ್ ಫಂಡ್‌ನಲ್ಲಿ 15x15x15 ನಿಯಮ ಏನು ಹೇಳುತ್ತೆ? ಇದರ ಪ್ರಕಾರ ತಿಂಗಳಿಗೆ ₹15,000 ರೂಪಾಯಿಯಂತೆ ಶೇ.15 ವಾರ್ಷಿಕ ಆದಾಯ ನೀಡುವ ಮ್ಯೂಚುವಲ್ ಫಂಡ್​ನಲ್ಲಿ 15 ವರ್ಷಗಳ ಕಾಲ ಹೂಡಿಕೆ ಮಾಡಿದರೆ ಕೋಟ್ಯಧಿಪತಿ ಆಗುವ ಅವಕಾಶವಿದೆ. ಇದನ್ನು ಹೆಚ್ಚು ವಿವರವಾಗಿ ಹೇಳುವುದಾದರೆ, ನೀವು ತಿಂಗಳಿಗೆ 15 ಸಾವಿರ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಈ ಹೂಡಿಕೆ ಮಾಡುವ ಕಾರ್ಯವನ್ನು 15 ವರ್ಷಗಳ ಕಾಲ ಮುಂದುವರಿಸಬೇಕು. ಅಂದರೆ ಒಟ್ಟು ಹೂಡಿಕೆಯ ಮೊತ್ತ ಒಟ್ಟು 27 ಲಕ್ಷ ಆಗುತ್ತದೆ. ಇದರಲ್ಲಿ ನಿಮಗೆ ವಾರ್ಷಿಕ ಶೇ.15ರಷ್ಟು ಆದಾಯ ಬಂದರೆ ಸಾಕು, ನೀವು ಕೋಟಿ ರೂಪಾಯಿ ಆದಾಯದ ದಾಟುತ್ತೀರಿ.

  • ಗಳಿಸಲು ಬಯಸಿದ ಸಂಪತ್ತು: ₹1 ಕೋಟಿ
  • ನೀವು 15 ವರ್ಷಗಳಲ್ಲಿ ಹೂಡಿಕೆ ಮಾಡುವ ಮೊತ್ತ : ₹27,00,000
  • ಆದಾಯ (15 ಪ್ರತಿಶತ ವಾರ್ಷಿಕ ಅಂದಾಜು): ₹74,52,946
  • ಒಟ್ಟು ಬೆಳೆಯುವ ಮೊತ್ತ: ₹1,01,52,946

15x15x15 ನಿಯಮವು ಕೆಲಸ ಮಾಡುತ್ತದೆಯೇ?:15x15x15 ನಿಯಮವು ಸಂಪೂರ್ಣವಾಗಿ ಕೆಲಸ ಮಾಡುತ್ತದೆ ಎಂದು ಹೇಳಲಾಗುವುದಿಲ್ಲ. ಏಕೆಂದರೆ, ಷೇರು ಮಾರುಕಟ್ಟೆಗಳಲ್ಲಿ ಏರಿಳಿತಗಳು ಬಹಳ ಸಹಜ. ಆದ್ದರಿಂದ, ಮ್ಯೂಚುವಲ್ ಫಂಡ್​ಗಳು ಯಾವಾಗಲೂ ಲಾಭವನ್ನು ಗಳಿಸುತ್ತವೆ ಎಂದು ಹೇಳಲಾಗುವುದಿಲ್ಲ. ಆದರೆ, ದೀರ್ಘಾವಧಿಯವರೆಗೆ ಹೂಡಿಕೆ ಮಾಡಿದರೆ, ಖಂಡಿತವಾಗಿಯೂ ಒಳ್ಳೆಯ ಲಾಭ ಗಳಿಸಲು ಸಾಧ್ಯವಾಗುತ್ತದೆ ಎಂದು ಷೇರು ಮಾರುಕಟ್ಟೆಯ ಹಳೆಯ ಅಂಕಿ ಅಂಶಗಳು ನಿಮಗೆ ದೃಢಪಡಿಸುತ್ತವೆ.

ಹೂಡಿಕೆ ಮಾಡುವವರು ಗಮನಿಸಿ: 15x15x15 ನಿಯಮವು ಹೂಡಿಕೆಯ ಅಂದಾಜಿನ ಸೂತ್ರವಾಗಿದೆ. ಇದೊಂದು ಊಹಾತ್ಮಕ ಹೂಡಿಕೆ ಸೂತ್ರವಾಗಿದೆ. ಇದಲ್ಲದೇ, ಇದು ಮ್ಯೂಚುವಲ್ ಫಂಡ್ ಹೂಡಿಕೆಗಳ ಮೇಲೆ ವಿಧಿಸುವ ಶುಲ್ಕಗಳು ಮತ್ತು ತೆರಿಗೆಗಳ ಬಗ್ಗೆ ಏನನ್ನೂ ಇಲ್ಲಿ ಉಲ್ಲೇಖ ಮಾಡಿಲ್ಲ. ಅಲ್ಲದೆ, ನಿಮ್ಮ ಆದಾಯವು ನಿಖರವಾಗಿ 15 ಪ್ರತಿಶತದಷ್ಟು ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ನಿಮಗೆ ಸರಾಸರಿ ಲಾಭದ ಕುರಿತು ತಿಳಿಸಲಾಗಿದೆ. ಈ ಲಾಭವು ಗಮನಾರ್ಹವಾಗಿ ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು. ಹಾಗಾಗಿ ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡರೆ ನಿಮ್ಮ ಆದಾಯದಲ್ಲಿ ಏರಿತವಾಗುವ ಸಾಧ್ಯತೆ ಇದೆ.

ಪೋರ್ಟ್‌ಫೋಲಿಯೋ ವೈವಿಧ್ಯೀಕರಣ:ಪೋರ್ಟ್‌ಫೋಲಿಯೋ ವೈವಿಧ್ಯೀಕರಣವು ನಿಮ್ಮ ಹೂಡಿಕೆಗಳು ವೈವಿಧ್ಯಮಯವಾಗಿರುತ್ತದೆ ಎಂದು ಅರಿತುಕೊಳ್ಳಬೇಕಿದೆ. ಇದಕ್ಕಾಗಿ ನೀವು ನಿಮ್ಮ ಹಣವನ್ನು ಚಿನ್ನ, ಷೇರು ಮಾರುಕಟ್ಟೆಗಳು, ರಿಯಲ್ ಎಸ್ಟೇಟ್, ಸ್ಥಿರ ಠೇವಣಿಗಳಂತಹ ವಿವಿಧ ಹೂಡಿಕೆ ಮಾರ್ಗಗಳಲ್ಲಿ ಹೂಡಿಕೆ ಮಾಡಬೇಕು. ಇಲ್ಲದಿದ್ದರೆ ಕೇವಲ ಒಂದು ಕ್ಷೇತ್ರದಲ್ಲಿ ಹೂಡಿಕೆ ಮಾಡುವುದು ನಷ್ಟದ ಹೆಚ್ಚಿನ ಅಪಾಯವನ್ನು ಹೊಂದಿರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ:ಮ್ಯೂಚುವಲ್ ಫಂಡ್‌: ಲಾರ್ಜ್ ಕ್ಯಾಪ್ Vs ಮಿಡ್ ಕ್ಯಾಪ್ Vs ಸ್ಮಾಲ್ ಕ್ಯಾಪ್; ಹೂಡಿಕೆಗೆ ಯಾವುದು ಬೆಸ್ಟ್ ಗೊತ್ತೇ? - Investment In Mutual Funds

ABOUT THE AUTHOR

...view details