ಕರ್ನಾಟಕ

karnataka

ETV Bharat / business

12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕದಲ್ಲೇ ಆಸನ ನೀಡಿ: ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ಸೂಚನೆ - DGCA - DGCA

ವಿಮಾನದಲ್ಲಿ ಪ್ರಯಾಣಿಸುವ 12 ವರ್ಷದೊಳಗಿನ ಮಕ್ಕಳಿಗೆ ಅವರ ಪೋಷಕರೊಂದಿಗೆ ಕುಳಿತುಕೊಳ್ಳುವಂತೆ ಆಸನ ನಿಗದಿ ಮಾಡುವಂತೆ ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ಸೂಚಿಸಿದೆ.

Children below 12 must get a seat with their parents: DGCA tells airlines
Children below 12 must get a seat with their parents: DGCA tells airlines

By ETV Bharat Karnataka Team

Published : Apr 23, 2024, 6:35 PM IST

ನವದೆಹಲಿ:ವಿಮಾನದಲ್ಲಿ ಪ್ರಯಾಣಿಸುವ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅವರ ಪೋಷಕರೊಂದಿಗೆಯೇ ಕುಳಿತುಕೊಳ್ಳುವಂತೆ ಸೀಟು ನೀಡಬೇಕೆಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಿದೆ ಎಂದು ಡಿಜಿಸಿಎ ಏಪ್ರಿಲ್ 23 ರಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

"ಒಂದೇ ಪಿಎನ್ಆರ್​ನಲ್ಲಿ ಪ್ರಯಾಣಿಸುವ 12 ವರ್ಷದವರೆಗಿನ ಮಕ್ಕಳಿಗೆ ಅವರ ಪೋಷಕರು ಅಥವಾ ಪೋಷಕರಲ್ಲಿ ಕನಿಷ್ಠ ಒಬ್ಬರೊಂದಿಗೆ ಕುಳಿತುಕೊಳ್ಳುವಂತೆ ಆಸನಗಳನ್ನು ನೀಡಬೇಕು ಮತ್ತು ಅದರ ದಾಖಲೆಯನ್ನು ಇಟ್ಟುಕೊಳ್ಳಬೇಕು" ಎಂದು ಡಿಜಿಸಿಎ ವಿಮಾನಯಾನ ಸಂಸ್ಥೆಗಳಿಗೆ ತಿಳಿಸಿದೆ. ಪೋಷಕರೊಂದಿಗೆ ಮಕ್ಕಳಿಗೆ ಆಸನ ನೀಡದ ಹಲವಾರು ಪ್ರಕರಣಗಳು ಗಮನಕ್ಕೆ ಬಂದ ನಂತರ ಡಿಜಿಸಿಎ ಈ ಸಲಹೆ ನೀಡಿದೆ.

ಇದಲ್ಲದೆ ಶೂನ್ಯ ಬ್ಯಾಗೇಜ್, ಆದ್ಯತೆಯ ಆಸನ, ಊಟ, ಪಾನೀಯಗಳು, ಸಂಗೀತ ವಾದ್ಯಗಳ ಸಾಗಣೆಯಂತಹ ಸೇವೆಗಳಿಗೆ ಶುಲ್ಕ ವಿಧಿಸಲು ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ಅನುಮತಿ ನೀಡಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ವು 2024 ರ ವಾಯು ಸಾರಿಗೆ ಸುತ್ತೋಲೆ (ಎಟಿಸಿ) -01 ಯನ್ನು ಪರಿಷ್ಕರಿಸಿದೆ. "ನಿಗದಿತ ವಿಮಾನಯಾನ ಸಂಸ್ಥೆಗಳಿಂದ ಸೇವೆಗಳು ಮತ್ತು ಶುಲ್ಕಗಳನ್ನು ತೆಗೆದುಹಾಕುವುದು" ಹೆಸರಿನ ಶೀರ್ಷಿಕೆಯ ಪ್ರಕಾರ ಜೀರೋ ಬ್ಯಾಗೇಜ್, ಆದ್ಯತೆಯ ಆಸನ, ಊಟ / ತಿಂಡಿ / ಪಾನೀಯ ಶುಲ್ಕಗಳು, ಸಂಗೀತ ವಾದ್ಯಗಳ ಸಾಗಣೆ ಮುಂತಾದ ಕೆಲ ಸೇವೆಗಳಿಗೆ ಶುಲ್ಕ ವಿಧಿಸಲು ಅನುಮತಿ ನೀಡಲಾಗಿದೆ.

ಆದಾಗ್ಯೂ ಈ ಸೇವೆಗಳನ್ನು 'ಆಪ್ಟ್-ಇನ್' ಅಂದರೆ ಗ್ರಾಹಕರು ಬಯಸಿದರೆ ಮಾತ್ರ ಪಡೆಯಬಹುದು ಮತ್ತು ಇವು ಕಡ್ಡಾಯವಲ್ಲ ಎಂದು ಡಿಜಿಸಿಎ ಸ್ಪಷ್ಟಪಡಿಸಿದೆ. ನಿಗದಿತ ನಿರ್ಗಮನಕ್ಕೆ ಮೊದಲು ವೆಬ್ ಚೆಕ್- ಇನ್​ಗಾಗಿ ಯಾವುದೇ ಆಸನವನ್ನು ಆಯ್ಕೆ ಮಾಡದ ಪ್ರಯಾಣಿಕರಿಗೆ ಆಟೋ ಸೀಟ್ ನಿಯೋಜನೆಗೆ ಅವಕಾಶವಿದೆ ಎಂದು ಡಿಜಿಸಿಎ ತಿಳಿಸಿದೆ.

ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಇದು ನಾಗರಿಕ ವಿಮಾನಯಾನವನ್ನು ನಿಯಂತ್ರಿಸುವ ಭಾರತದ ಮುಖ್ಯ ನಿಯಂತ್ರಕ ಸಂಸ್ಥೆಯಾಗಿದೆ ಮತ್ತು ಪ್ರಾಥಮಿಕವಾಗಿ ಸುರಕ್ಷತಾ ವಿಷಯಗಳನ್ನು ನಿರ್ವಹಿಸುತ್ತದೆ. ಇದು ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ಐಸಿಎಒ) ಯೊಂದಿಗೆ ಸಮನ್ವಯದಲ್ಲಿ ಕೆಲಸ ಮಾಡುತ್ತದೆ. ಡಿಜಿಸಿಎ ಪ್ರಧಾನ ಕಚೇರಿ ನವದೆಹಲಿಯಲ್ಲಿದ್ದು, ಭಾರತದ ವಿವಿಧ ಭಾಗಗಳಲ್ಲಿ ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶಕರು ಇದರ ಮುಖ್ಯಸ್ಥರಾಗಿರುತ್ತಾರೆ.

ಇದನ್ನೂ ಓದಿ : ಆಸ್ಟನ್ ಮಾರ್ಟಿನ್​ನ 'Vantage' ಸ್ಪೋರ್ಟ್ಸ್ ಕಾರು ಬಿಡುಗಡೆ: ಬೆಲೆ ಎಷ್ಟು ಅಂತ ನೀವೇ ನೋಡಿ! - Aston Martin

For All Latest Updates

ABOUT THE AUTHOR

...view details