ಕರ್ನಾಟಕ

karnataka

ಫೆಡ್​ ಬಡ್ಡಿದರ ಇಳಿಕೆ ಮುನ್ಸೂಚನೆ: ನಿಫ್ಟಿ 25000, ಸೆನ್ಸೆಕ್ಸ್ 82,000 ಅಂಕಗಳ ಗಡಿ ದಾಟಿ ವಹಿವಾಟು - Bull run at markets continues

By ANI

Published : Aug 1, 2024, 10:12 AM IST

ಅಮೆರಿಕದ ಕೇಂದ್ರಬ್ಯಾಂಕ್​ ಬಡ್ಡಿ ದರ ಇಳಿಕೆಯ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮುಂಬೈ ಷೇರುಮಾರುಕಟ್ಟೆಯಲ್ಲಿ ಭರ್ಜರಿ ರ್‍ಯಾಲಿ ಕಂಡು ಬಂದಿದ್ದು, ಎನ್​​​ಎಸ್​ಸಿ ಮತ್ತು ಬಿಎಸ್​​ಸಿ ಏರಿಕೆಯೊಂದಿಗೆ ದಿನ ಆರಂಭ ಮಾಡಿವೆ.

Etv BhaBull run at markets continues, Nifty crosses 25000, Sensex at 82,000 pointsrat
Etv Bhಫೆಡ್​ ಬಡ್ಡಿದರ ಇಳಿಕೆ ಮುನ್ಸೂಚನೆ: ನಿಫ್ಟಿ 25000, ಸೆನ್ಸೆಕ್ಸ್ 82,000 ಅಂಕಗಳ ಗಡಿ ದಾಟಿ ವಹಿವಾಟು: ಷೇರುದಾರರಿಗೆ ಭರ್ಜರಿ ಲಾಭarat (ANI)

ಮುಂಬೈ: ಭಾರತೀಯ ಮಾರುಕಟ್ಟೆಯಲ್ಲಿ ಇಂದು ಕೂಡಾ ಭರ್ಜರಿ ರ್‍ಯಾಲಿ ಮುಂದುವರೆದಿದೆ. ಗುರುವಾರ ಷೇರುಪೇಟೆ ದಾಖಲೆಯ ಏರಿಕೆಯನ್ನು ದಾಖಲಿಸಿದೆ. ನಿಫ್ಟಿ ನಿನ್ನೆ ಕೊನೆಗೊಂಡ ಅಂಕಗಳಿಗಿಂತ 92.15 ಪಾಯಿಂಟ್‌ಗಳ ಹೆಚ್ಚಳ ಕಂಡು 25,030.95 ನಲ್ಲಿ ವಹಿವಾಟು ಪ್ರಾರಂಭಿಸಿತು.

BSE ಸೆನ್ಸೆಕ್ಸ್ ಕೂಡ 208.34 ಪಾಯಿಂಟ್ ಹೆಚ್ಚಳದೊಂದಿಗೆ ದಾಖಲೆಯ 82,082 ಅಂಕಗಳಿಗೆ ಏರಿಕೆ ಕಂಡಿತು. ಮಾರುಕಟ್ಟೆ ತಜ್ಞರ ಪ್ರಕಾರ, ಭಾರತೀಯ ಷೇರು ಮಾರುಕಟ್ಟೆ, ಬಡ್ಡಿ ದರ ಕಡಿತದ ಸುಳಿವಿನಿಂದ ಮತ್ತಷ್ಟು ಉತ್ತೇಜಿತವಾಗಿವೆ. ಫೆಡ್ ಚೇರ್ಮನ್​ ಜೆರೋಮ್ ಪೊವೆಲ್ ಸೆಪ್ಟೆಂಬರ್‌ನ ಆರಂಭದಲ್ಲಿಯೇ ಸಂಭವನೀಯ ಬಡ್ಡಿದರ ಕಡಿತದ ಸುಳಿವು ನೀಡಿದ್ದಾರೆ. ಅಮೆರಿಕ ಫೆಡರಲ್​ನ ನೀತಿ ನಿಯಮದ ಸಭೆ ಮುಕ್ತಾಯದ ಬಳಿಕ ಜರೋಮ್​ ಸುದ್ದಿಗೋಷ್ಠಿ ನಡೆಸಿ ಅವರು ದರ ಕಡಿತದ ಸುಳಿವು ನೀಡಿರುವುದು ಮಾರುಕಟ್ಟೆಯಲ್ಲಿ ಹೆಚ್ಚಿನ ಉತ್ಸಾಹ ಕಂಡು ಬಂದಿದೆ.

ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ ಮಾತುಗಳಿಂದ ಜಾಗತಿಕ ಇಕ್ವಿಟಿ ಮಾರುಕಟ್ಟೆಗಳಿಗೆ ಧನಾತ್ಮಕವಾಗಿ ವ್ಯವಹಾರ ನಡೆಸುತ್ತಿವೆ. ಮುಖ್ಯವಾಗಿ, ಅಮೆರಿಕ ಆರ್ಥಿಕತೆ ಚೇತರಿಕೆ ಕಾಣುತ್ತಿದೆ

ನಿಫ್ಟಿ 50 ಪ್ರಮುಖ ಷೇರುಗಳಾದ ಮಾರುತಿ, JSW ಸ್ಟೀಲ್, ಹಿಂಡಾಲ್ಕೊ, ಕೋಲ್ ಇಂಡಿಯಾ ಮತ್ತು ಟಾಟಾ ಮೋಟಾರ್ಸ್ ಷೇರುಗಳು ಆರಂಭಿಕ ವಹಿವಾಟಿನ ಟಾಪ್ ಗೇನರ್‌ಗಳಾಗಿ ಹೊರಹೊಮ್ಮಿದರೆ, ಮಹೀಂದ್ರಾ ಮತ್ತು ಮಹೀಂದ್ರಾ, ಬಿಪಿಸಿಎಲ್, ಇನ್ಫೋಸಿಸ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಸನ್‌ಫಾರ್ಮಾ ಷೇರುಗಳು ಕುಸಿತ ಕಂಡಿವೆ. ಬಹುತೇಕ ಎಲ್ಲ ವಲಯದ ಸೂಚ್ಯಂಕಗಳು ಸಕಾರಾತ್ಮಕವಾಗಿ ಆರಂಭವಾಗಿವೆ.

ಕಳೆದ ಆರು ತಿಂಗಳಲ್ಲಿ, ನಿಫ್ಟಿ 50 ಶೇಕಡಾ 15 ಕ್ಕಿಂತ ಹೆಚ್ಚು ಏರಿಕೆ ಕಂಡಿದ್ದರೆ ಬಿಎಸ್‌ಇ ಸೆನ್ಸೆಕ್ಸ್ ಸಹ ಏರುಗತಿಯಲ್ಲೇ ಸಾಗುತ್ತಿದೆ. ಇನ್ನು ಜುಲೈ 23 ರ ಕೇಂದ್ರ ಬಜೆಟ್​​ ಬಳಿಕ ಎರಡೂ ಮಾರುಕಟ್ಟೆಗಳಲ್ಲಿ ಭರ್ಜರಿ ಲಾಭದ ಗಳಿಕೆಯಲ್ಲಿ ಮುಂದುವರೆಯುತ್ತಿವೆ. "ವಿದೇಶಿ ಬಂಡವಾಳ ಹೂಡಿಕೆದಾರರು ಹಾಗೂ ದೇಶೀಯ ಹೂಡಿಕೆದಾರರು ಷೇರುಗಳ ಭರ್ಜರಿ ಖರೀದಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಬಹುತೇಕ ಷೇರುಗಳ ಏರುಗತಿಯಲ್ಲಿ ಮುಂದುವರೆಯುತ್ತಿವೆ.

ಇನ್ನು ಜಾಗತಿಕ ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ಕಂಡು ಬರುತ್ತಿವೆ. ಏಷ್ಯಾ ಮಾರುಕಟ್ಟೆಗಳು ವಾಲ್ ಸ್ಟ್ರೀಟ್‌ನ ವ್ಯವಹಾರವನ್ನು ಹೆಚ್ಚಾಗಿ ಟ್ರ್ಯಾಕ್ ಮಾಡುತ್ತಿದೆ. ಡೌ ಜೋನ್ಸ್ ಮತ್ತು ಎಸ್ & ಪಿ 500 ಅನುಕ್ರಮವಾಗಿ ಶೇಕಡಾ 0.24 ಮತ್ತು ಶೇಕಡಾ 1.58 ರಷ್ಟು ಏರಿಕೆ ದಾಖಲಿಸಿವೆ. ನಾಸ್ಡಾಕ್ ಶೇಕಡಾ 2.64 ರಷ್ಟು ಹೆಚ್ಚಳವನ್ನು ಕಂಡಿದೆ.

ಇದನ್ನು ಓದಿ:ನಿಮ್ಮ ಕ್ರೆಡಿಟ್ ವರದಿಯಿಂದ ’ಲೇಟ್​ ಪೇಮಂಟ್‘​ ತಪ್ಪಾದ ದಾಖಲಿಸುವಿಕೆ ಸರಿಪಡಿಸುವುದು ಹೇಗೆ?: ಇದನ್ನು ಮಾಡಿ ಸಾಕು! - REMOVE LATE PAYMENTS CREDIT REPORT

ABOUT THE AUTHOR

...view details