ಕೊಯಮತ್ತೂರು/ಚೆನ್ನೈ: ಕೊಯಮತ್ತೂರಿನಲ್ಲಿ ಸೆಪ್ಟೆಂಬರ್ 11 ರಂದು ನಡೆದ ಉದ್ಯಮಗಳ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೊಯಮತ್ತೂರು ದಕ್ಷಿಣ ಶಾಸಕಿ ವನತಿ ಶ್ರೀನಿವಾಸನ್ ಭಾಗವಹಿಸಿದ್ದರು. ಆಗ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಅನ್ನಪೂರ್ಣ ಸಂಸ್ಥೆಯ ಮಾಲೀಕ ಟಿ. ಶ್ರೀನಿವಾಸನ್ ಪ್ರಶ್ನೆಯೊಂದನ್ನು ಕೇಳಿದ್ದರು. ಮೇಡಂ ಪ್ಯಾನ್‌ಗೆ ಜಿಎಸ್‌ಟಿ ಇಲ್ಲ.. ಆದರೆ, ಕೇಕ್‌ನಲ್ಲಿರುವ ಕ್ರೀಮ್‌ಗೆ ಶೇ.18 ಜಿಎಸ್‌ಟಿ? ಯಾಕೆ ಎಂದು ಪ್ರಶ್ನಿಸಿದ್ದರು.
ಇದಕ್ಕೆ ಸಂಬಂಧಿಸಿದ ವಿಡಿಯೋಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಲ್ಲದೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಕ್ಷಮೆ ಯಾಚಿಸುವ ವಿಡಿಯೋ ಬಿಡುಗಡೆಯಾಗಿ ಸಂಚಲನ ಸೃಷ್ಟಿಸಿತ್ತು. ಇದು ವಾದ - ಪ್ರತಿವಾದ ಟೀಕೆಗಳಿಗೆ ಕಾರಣವಾಗಿತ್ತು. ಈ ಬಗ್ಗೆಅನ್ನಪೂರ್ಣ ಹೋಟೆಲ್ ಆಡಳಿತ ಮಂಡಳಿ ಇದೀಗ ಸ್ಪಷ್ಟನೆ ನೀಡಿದ್ದು, ಈ ಬಗ್ಗೆ ನಡೆಯುತ್ತಿದ್ದ ಚರ್ಚೆಗೆ ಪೂರ್ಣ ವಿರಾಮ ಹಾಕುವ ಪ್ರಯತ್ನ ಮಾಡಿದೆ.
ಏನಿದು ಘಟನೆ?: ಕಳೆದ ಸೆಪ್ಟೆಂಬರ್ 11 ರಂದು ಕೊಯಮತ್ತೂರಿನಲ್ಲಿ ಎಂಎಸ್‌ಎಂಇಗಳು ಮತ್ತು ಚೇಂಬರ್ ಆಫ್ ಕಾಮರ್ಸ್ ಪ್ರತಿನಿಧಿಗಳು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜತೆ ಸಂವಾದ ನಡೆಸಿದ್ದರು. ಈ ವೇಳೆ ನಮ್ಮ ವ್ಯವಸ್ಥಾಪಕ ನಿರ್ದೇಶಕಿ, ತಮಿಳುನಾಡು ಹೋಟೆಲ್ ಅಸೋಸಿಯೇಶನ್‌ನ ಗೌರವಾನ್ವಿತ ಅಧ್ಯಕ್ಷ ಟಿ. ಶ್ರೀನಿವಾಸನ್ ಅವರೊಂದಿಗೆ ಸಂವಾದದ ಸಂದರ್ಭದಲ್ಲಿ ಬೇಕರಿಗಳಲ್ಲಿ ವಿವಿಧ ಉತ್ಪನ್ನಗಳಿಗೆ ವಿಧಿಸುವ ವಿವಿಧ ಜಿಎಸ್‌ಟಿ ದರಗಳ ವಿಷಯವನ್ನು ಪ್ರಸ್ತಾಪಿಸಿದ್ದರು.
ತಪ್ಪು ಗ್ರಹಿಕೆಗಳಿಗೆ ವಿರಾಮ ಹಾಕಲು ಬಯಸಿದ ಟಿ ಶ್ರೀನಿವಾಸನ್: ವಿತ್ತ ಸಚಿವರೊಂದಿಗಿನ ಅವರ ಸಂಭಾಷಣೆಯ ವಿಡಿಯೋ ಮರುದಿನ ವೈರಲ್ ಆಗುತ್ತಿದ್ದಂತೆ ಯಾವುದೇ ತಪ್ಪು ತಿಳಿವಳಿಕೆ ಅಥವಾ ಸತ್ಯಗಳ ತಪ್ಪು ನಿರೂಪಣೆಯಾಗದಂತೆ ಖಚಿತಪಡಿಸಿಕೊಳ್ಳಲು, ಟಿ. ಶ್ರೀನಿವಾಸನ್ ಅವರು ಸ್ವತಃ ಹಣಕಾಸು ಸಚಿವರನ್ನು ಖುದ್ದಾಗಿ ಭೇಟಿಯಾದರು. ಈ ಖಾಸಗಿ ಸಂಭಾಷಣೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಜಾಗರೂಕತೆಯಿಂದ ಹಂಚಿಕೊಳ್ಳಲಾಗಿದೆ. ಇದು ಸಾಕಷ್ಟು ತಪ್ಪು ತಿಳಿವಳಿಕೆ ಮತ್ತು ಗೊಂದಲಕ್ಕೆ ಕಾರಣವಾಗಿದೆ. ವಿಡಿಯೋವನ್ನು ತಪ್ಪಾಗಿ ಶೇರ್ ಮಾಡಿದ್ದಕ್ಕಾಗಿ ತಮಿಳುನಾಡು ಬಿಜೆಪಿ ತನ್ನ ಅಧಿಕೃತ ಎಕ್ಸ್ ಪೇಜ್ ನಲ್ಲಿ ಕ್ಷಮೆಯಾಚಿಸಿದೆ. ಪರಿಣಾಮ ವಿಡಿಯೋ ರಚಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ವ್ಯಾಪಾರ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಜಿಎಸ್‌ಟಿ ಸಭೆ ಆಯೋಜಿಸಿದ್ದಕ್ಕಾಗಿ ಹಣಕಾಸು ಸಚಿವರು ಮತ್ತು ಶಾಸಕಿ ವನತಿ ಶ್ರೀನಿವಾಸನ್ ಅವರಿಗೆ ನಾವು ಕೃತಜ್ಞರಾಗಿರುತ್ತೇವೆ. ಇದರೊಂದಿಗೆ ನಾವು ಅನಗತ್ಯ ಊಹೆಗಳು ಮತ್ತು ತಪ್ಪುಗ್ರಹಿಕೆಗಳಿಗೆ ವಿರಾಮ ಹಾಕಲು ಬಯಸುತ್ತೇವೆ ಎಂದು ಹೇಳಿದ್ದಾರೆ
ವಲಯ ಬಿಜೆಪಿ ಅಧ್ಯಕ್ಷರ ತಲೆದಂಡ: ಅಲ್ಲದೇ ಈ ವರದಿಯನ್ನು ಮೊದಲು ಎಕ್ಸ್ ಸೈಟ್ ನಲ್ಲಿ ಪ್ರಕಟಿಸಿದ ಅನ್ನಪೂರ್ಣ ಕಂಪನಿ ನಂತರ ಡಿಲೀಟ್ ಮಾಡಿ ರಿಡಾಕ್ಟ್ ಮಾಡಿದ ವರದಿ ಪ್ರಕಟಿಸಿದೆ. ಅದೇ ಸಮಯದಲ್ಲಿ ಕ್ಷಮೆಯಾಚಿಸುವ ವಿಡಿಯೋ ಪೋಸ್ಟ್ ಮಾಡಿದ ಕೊಯಮತ್ತೂರು ಸಿಂಗಾನಲ್ಲೂರು ವಲಯ ಬಿಜೆಪಿ ಅಧ್ಯಕ್ಷ ಸತೀಶ್ ಅವರನ್ನು ಪಕ್ಷದ ಮೂಲ ಸದಸ್ಯತ್ವ ಸೇರಿದಂತೆ ಎಲ್ಲಾ ಹುದ್ದೆಗಳಿಂದ ತೆಗೆದುಹಾಕಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ: ಏರಿಕೆಯಾಗಲಿದೆ ಅಡುಗೆ ಎಣ್ಣೆ ದರ: ಆಮದು ಸುಂಕ ಹೆಚ್ಚಿಸಿದ ಸರ್ಕಾರ - EDIBLE OIL IMPORT TAX HIKE