ETV Bharat / business

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಡೇಟ್ಸ್​​ ಫಿಕ್ಸ್: ಈ ಕಾರ್ಡ್ ಹೊಂದಿರುವವರಿಗೆ ಬಂಪರ್​, 6000ಕ್ಕೆ ಸಿಗಲಿವೆ ಮೊಬೈಲ್ಸ್​! - GREAT INDIAN FESTIVAL 2024 OFFERS

author img

By ETV Bharat Karnataka Team

Published : Sep 16, 2024, 4:06 PM IST

ಪ್ರಮುಖ ಇ-ಕಾಮರ್ಸ್ ಕಂಪನಿ ಅಮೆಜಾನ್ ಹಬ್ಬದ ಸಮಯದಲ್ಲಿ ಅತಿದೊಡ್ಡ ಮಾರಾಟಕ್ಕೆ ಸಿದ್ಧವಾಗಿದೆ. ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ ದಿನಾಂಕಗಳನ್ನು ಈಗಾಗಲೇ ಪ್ರಕಟಿಸಲಾಗಿದೆ. ಎಸ್‌ಬಿಐ ಕಾರ್ಡ್ ಬಳಕೆದಾರರಿಗೆ ಈ ಬಾರಿಯ ಸೇಲ್‌ನಲ್ಲಿ ಉತ್ತಮ ರಿಯಾಯಿತಿ ಸಿಗಲಿದೆ.

Amazon Great Indian Festival
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಡೇಟ್ಸ್​​ ಫಿಕ್ಸ್: ಈ ಕಾರ್ಡ್ ಹೊಂದಿರುವವರಿಗೆ ಬಂಪರ್​, 6000ಕ್ಕೆ ಸಿಗಲಿವೆ ಮೊಬೈಲ್ಸ್​! (Amazon)

Amazon Great Indian Festival: ಹಬ್ಬದ ಋತುವಿನಲ್ಲಿ ಪ್ರಮುಖ ಇ-ಕಾಮರ್ಸ್ ಕಂಪನಿ ಅಮೆಜಾನ್ ಈ ಸಲವೂ ದೊಡ್ಡ ಆಫರ್​ ನೀಡುವ ಮೂಲಕ ಮಾರಾಟಕ್ಕೆ ಸಿದ್ಧವಾಗಿದೆ. ವಾರ್ಷಿಕ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಸೆಪ್ಟೆಂಬರ್ 27 ರಿಂದ ಆರಂಭವಾಗಲಿದೆ. ಪ್ರೈಮ್ ಸದಸ್ಯರಿಗೆ ಒಂದು ದಿನ ಮುಂಚಿತವಾಗಿ ಸೇಲ್ ಲಭ್ಯವಿರುತ್ತದೆ. ಅಂದರೆ ಸೆಪ್ಟೆಂಬರ್ 26 ರಿಂದಲೇ ಈ ಸೇಲ್ ಆರಂಭವಾಗಲಿದೆ.

ಇದನ್ನು ಓದಿ:' ಹುಬ್ಬಳ್ಳಿ-ಧಾರವಾಡದಲ್ಲಿ ನಿಡೆಕ್ ಕಂಪನಿಯಿಂದ ಹೆಚ್ಚುವರಿ ₹150 ಕೋಟಿ ಹೂಡಿಕೆ, 800 ಉದ್ಯೋಗ ಸೃಷ್ಟಿ' - Invest Karnataka

ಈ ಬಾರಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಎಸ್‌ಬಿಐ ಕಾರ್ಡ್ ಬಳಕೆದಾರರಿಗೆ ಉತ್ತಮ ರಿಯಾಯಿತಿಗಳು ದೊರೆಯಲಿವೆ. ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಖರೀದಿಸುವ ಗ್ರಾಹಕರು ಶೇ 10ರಷ್ಟು ರಿಯಾಯಿತಿ ಪಡೆಯಬಹುದು. Amazon Pay UPI ಜೊತೆಗೆ 1000 ರೂಪಾಯಿಗಿಂತ ಹೆಚ್ಚಿನ ಖರೀದಿಗೆ 100ರೂ. ರಿಯಾಯಿತಿ ನೀಡುವುದಾಗಿ Amazon ಹೇಳಿದೆ. ಮಾರಾಟದ ಭಾಗವಾಗಿ, ಮೊಬೈಲ್‌ಗಳ ಮೇಲೆ ಶೇಕಡಾ 40, ಎಲೆಕ್ಟ್ರಾನಿಕ್ಸ್‌ಗಳ ಮೇಲೆ ಶೇಕಡಾ 75, ಗೃಹೋಪಯೋಗಿ ವಸ್ತುಗಳ ಮೇಲೆ ಶೇಕಡಾ 50, ಫ್ಯಾಷನ್ ಉತ್ಪನ್ನಗಳ ಮೇಲೆ ಶೇ 50 - 80ರವರೆಗೆ ರಿಯಾಯಿತಿಗಳು ಸಿಗಲಿವೆ. ಅಮೆಜಾನ್ ಅಲೆಕ್ಸಾ ಉತ್ಪನ್ನಗಳ ಮೇಲೆ ಶೇಕಡಾ 55 ರಷ್ಟು ರಿಯಾಯಿತಿಯನ್ನು ಘೋಷಿಸಲಾಗಿದೆ. ಆದರೆ ಯಾವುದರ ಮೇಲೆ ಎಷ್ಟು ರಿಯಾಯಿತಿ ನೀಡಲಾಗಿದೆ ಎಂಬುದನ್ನು ಅಮೆಜಾನ್ ಇನ್ನೂ ಬಹಿರಂಗಪಡಿಸಿಲ್ಲ.

5,999 ರೂಗೆ ಸಿಗಲಿವೆ ಮೊಬೈಲ್​​ಗಳು : ಗ್ರೇಟ್ ಇಂಡಿಯನ್ ಸೇಲ್‌ನ ಭಾಗವಾಗಿ, ಮೊಬೈಲ್‌ಗಳನ್ನು 5,999 ರಿಂದ ಮಾರಾಟ ಮಾಡಲಾಗುವುದು ಎಂದು ಅಮೆಜಾನ್ ತಿಳಿಸಿದೆ. ಮೊಬೈಲ್ ಬಿಡಿಭಾಗಗಳು ಕೇವಲ 89ರೂ. ದಿಂದ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ. 24 ತಿಂಗಳ ನೋ-ಕಾಸ್ಟ್ EMI ಸೌಲಭ್ಯವನ್ನು ಸಹ ಈ ಬಾರಿ ನೀಡಲಾಗಿದೆ. ಸ್ಮಾರ್ಟ್ ಟಿವಿಗಳ ಬೆಲೆ 6,999ರೂ ದಿಂದ ಪ್ರಾರಂಭವಾಗಲಿದೆ. Amazon Alexa ಮತ್ತು FireTV Stick ಸಾಧನಗಳು 1,999 ರೂಗಳಿಂದ ಪ್ರಾರಂಭವಾಗುತ್ತದೆ. ಮಾರಾಟದ ಸಮಯದಲ್ಲಿ, ನೀವು ಪ್ರಯಾಣದ ಬುಕಿಂಗ್‌ನಲ್ಲಿ ರಿಯಾಯಿತಿಯನ್ನು ಪಡೆಯಬಹುದು ಎಂದು ಅಮೆಜಾನ್ ಹೇಳಿದೆ. ವಿನಿಮಯ ಕೊಡುಗೆಗಳ ಜೊತೆಗೆ ಕೂಪನ್‌ಗಳನ್ನು ಸಹ ನೀಡಲಾಗುತ್ತದೆ. ಆಫರ್‌ಗಳ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ಅದು ಹೇಳಿದೆ.

ಇದನ್ನು ಓದಿ:ಪ್ರಿಪೇಯ್ಡ್​-ಪೋಸ್ಟ್​ಪೇಯ್ಡ್​ ಕನೆಕ್ಷನ್​ ಬಗ್ಗೆ ನಿಮಗೆಷ್ಟು ಗೊತ್ತು, ಇದರಲ್ಲಿ ಯಾವ ಯೋಜನೆ ಬೆಸ್ಟ್? - Prepaid vs Postpaid

ಮತ್ತೊಂದೆಡೆ ಫ್ಲಿಪ್‌ಕಾರ್ಟ್, ಹಬ್ಬದ ಸೀಸನ್‌ನಲ್ಲಿ ಆಫರ್‌ಗಳ ಹಬ್ಬವನ್ನು ಪ್ರಾರಂಭಿಸಿದೆ. ಫ್ಲಿಪ್‌ಕಾರ್ಟ್ ತನ್ನ ವಾರ್ಷಿಕ 'ಬಿಗ್ ಬಿಲಿಯನ್ ಡೇಸ್' ಮಾರಾಟದ ದಿನಾಂಕಗಳನ್ನು ಈಗಾಗಲೇ ಪ್ರಕಟಿಸಿದೆ. ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟವೂ ಸೆಪ್ಟೆಂಬರ್ 27 ರಿಂದ ಪ್ರಾರಂಭವಾಗಲಿದೆ. ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಿಗೆ ಒಂದು ದಿನ ಮುಂಚಿತವಾಗಿ ಅಂದರೆ ಈ ತಿಂಗಳ 26 ರಿಂದ ಸೇಲ್ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ಇದರೊಂದಿಗೆ ಗ್ರಾಹಕರು ಈ ಬಾರಿಯ ಮಾರಾಟದಲ್ಲಿ ಭಾರಿ ರಿಯಾಯಿತಿ ಮತ್ತು ಉತ್ತಮ ಕೊಡುಗೆಗಳನ್ನು ಪಡೆಯಲಿದ್ದಾರೆ.

ಇದನ್ನು ಓದಿ:ಆದಷ್ಟು ಬೇಗ ಭಾರತದ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಹೊಸ ಕಿಯಾ ಕಾರ್ನಿವಲ್, ಬುಕ್ಕಿಂಗ್​ ಆರಂಭ, ಬೆಲೆ ಎಷ್ಟು!? - New Kia Carnival Booking Starts

ETV Bharat Logo

Copyright © 2024 Ushodaya Enterprises Pvt. Ltd., All Rights Reserved.