ETV Bharat / health

ಹೆಚ್ಚು ಮಟನ್​ ತಿನ್ನೋದರಿಂದ ಮಧುಮೇಹ ಸಾಧ್ಯತೆ: ಸಂಶೋಧನಾ ವರದಿಯಿಂದ ಹೊರಬಿತ್ತು ಮಾಹಿತಿ - Mutton Can Cause Diabetes - MUTTON CAN CAUSE DIABETES

Mutton Can Cause Diabetes: ನೀವು ಮಾಂಸಾಹಾರಿ ಪ್ರಿಯರೇ? ಅದರಲ್ಲೂ ಹೆಚ್ಚು ಮಟನ್ ಅನ್ನು ಸೇವಿಸುತ್ತೀರಾ? ಸ್ವಲ್ಪ ಎಚ್ಚರದಿಂದಿರಿ. ಕುರಿ ಮಾಂಸ ಹೆಚ್ಚು ತಿನ್ನುವವರಿಗೆ ಮಧುಮೇಹ ಬರುವ ಸಾಧ್ಯತೆ ಹೆಚ್ಚಿದೆ ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ.

MUTTON SIDE EFFECTS  DOES MUTTON CAUSE DIABETES  SIDE EFFECTS OF MUTTON  MUTTON CONSUMPTION RISK OF DIABETES
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : Sep 18, 2024, 5:49 PM IST

Updated : Sep 18, 2024, 6:26 PM IST

Does Mutton Cause Diabetes?: ಹಲವರು ಮನೆಗಳಲ್ಲಿ ವೀಕೆಂಡ್ ಬಂದರೆ ಸಾಕು, ನಾನ್ ವೆಜ್ ಇದ್ದೇ ಇರುತ್ತದೆ. ಹಾಗೆಯೇ, ಮನೆಯಲ್ಲಿ ಯಾವುದೇ ಫಂಕ್ಷನ್ ಅಥವಾ ಪಾರ್ಟಿಯಲ್ಲಿ ಹೆಚ್ಚಿನವರು ಮಾಂಸಾಹಾರಕ್ಕೆ ಆದ್ಯತೆ ನೀಡುತ್ತಾರೆ. ಹೆಚ್ಚಿನ ಜನರು ವಿಶೇಷವಾಗಿ ಕುರಿ ಮಾಂಸ ಇಷ್ಟಪಡುತ್ತಾರೆ. ನೀವು ಆ ಲಿಸ್ಟ್​ನಲ್ಲಿ ಇದ್ದೀರಾ? ಹಾಗಾದ್ರೆ, ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ತಜ್ಞರು. ಏಕೆಂದರೆ, ಇತ್ತೀಚಿನ ಸಂಶೋಧನೆಯೊಂದರಲ್ಲಿ ಕುರಿ ಮಾಂಸ ಹೆಚ್ಚು ತಿನ್ನುವವರಿಗೆ ಮಧುಮೇಹ ಬರುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದುಬಂದಿದೆ.

ವಾಸ್ತವವಾಗಿ, ಮಟನ್ ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪ್ರೋಟೀನ್ ಮತ್ತು ಇತರ ಪೋಷಕಾಂಶ ದೊರೆಯುತ್ತದೆ. ಇದರ ಪರಿಣಾಮವಾಗಿ, ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ.. ಮಟನ್ ಕೂಡ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬುದು ನಿಮಗೆ ತಿಳಿದಿದೆಯೇ? ಅದರಲ್ಲೂ ಹೆಚ್ಚಾಗಿ ಮಟನ್ ತಿನ್ನುವವರಿಗೆ ಟೈಪ್-2 ಡಯಾಬಿಟಿಸ್ ಬರುವ ಸಾಧ್ಯತೆ ಇದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.

ಈ ಸಂಶೋಧನೆಯ ಭಾಗವಾಗಿ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ (University of Cambridge) ವಿಜ್ಞಾನಿಗಳು 10 ವರ್ಷಗಳಿಂದ ಕುರಿ ಮಾಂಸ ತಿನ್ನುವ ಅಭ್ಯಾಸವನ್ನು ಹೊಂದಿರುವ ಜನರನ್ನು ಪರಿಗಣನೆಗೆ ತೆಗೆದುಕೊಂಡರು. ಈ ಅಧ್ಯಯನದ ಮೂಲಕ ವಾರದಲ್ಲಿ ಎರಡು ಅಥವಾ ಮೂರು ಬಾರಿ ಕುರಿ ಮಾಂಸವನ್ನು ಯಾವುದಾದರೊಂದು ರೂಪದಲ್ಲಿ (ಸೂಪ್, ಕುದಿಸಿದ, ಫ್ರೈ ಮಾಡಿದ ಕುರಿ ಮಾಂಸ) ಸೇವಿಸುವವರಲ್ಲಿ ಟೈಪ್-2 ಮಧುಮೇಹ ಬರುವ ಸಾಧ್ಯತೆ ಶೇ.15ರಷ್ಟು ಹೆಚ್ಚಾಗಿರುತ್ತದೆ ಎಂದು ತಿಳಿದುಬಂದಿದೆ. (ಈ ಕುರಿತು ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ). ಮುಖ್ಯವಾಗಿ.. ಮಟನ್‌ನಲ್ಲಿರುವ ಹಾನಿಕಾರಕ ಸ್ಯಾಚುರೇಟೆಡ್ ಕೊಬ್ಬುಗಳು ನೈಸರ್ಗಿಕ ಇನ್ಸುಲಿನ್ ಬಿಡುಗಡೆಗೊಳಿಸುವುದನ್ನು ತಡೆಯುತ್ತದೆ ಎಂದು ವಿಜ್ಞಾನಿಗಳು ಅಧ್ಯಯನದಿಂದ ಕಂಡುಕೊಂಡಿದ್ದಾರೆ.

ಇದಲ್ಲದೆ, ಮನೆಯಲ್ಲಿ ಬೇಯಿಸಿದ ಕುರಿ ಮಾಂಸ ತಿನ್ನುವವರಲ್ಲಿ ಹೋಲಿಸಿದರೆ, ವಿವಿಧ ಕಂಪನಿಗಳು ಸಂಸ್ಕರಿಸಿ ಪ್ಯಾಕ್ ಮಾಡಿದ ಮಟನ್ ತಿನ್ನುವವರಲ್ಲಿ ಮಧುಮೇಹದ ಅಪಾಯವು ತುಂಬಾ ಹೆಚ್ಚಾಗಿದೆ ಎಂದು ತೀರ್ಮಾನಿಸಲಾಗಿದೆ. ಮಟನ್ ಬದಲಿಗೆ, ಉತ್ತಮ ಕೊಬ್ಬು ಮತ್ತು ಪ್ರೋಟೀನ್​ಗಾಗಿ ಮೀನುಗಳನ್ನು ತಿನ್ನಲು ಸೂಚಿಸಲಾಗುತ್ತದೆ. ಈ ಸಂಶೋಧನೆಯಲ್ಲಿ ಭಾಗವಹಿಸಿದ ಖ್ಯಾತ ಪೌಷ್ಟಿಕತಜ್ಞರಾದ ಡಾ. ನಿತಾ ಜಿ. ಫೌಹಿ (Dr Nita G. Forouhi) ಅವರು, ''ಆಗಾಗ್ಗೆ ಕುರಿ ಮಾಂಸ ತಿನ್ನುವವರು ಜಾಗರೂಕರಾಗಿರಬೇಕು'' ಎಂದು ಸಲಹೆ ನೀಡುತ್ತಾರೆ. ದೇಹದ ಕೊಬ್ಬಿಗೆ ಮಾಂಸವು ಅವಶ್ಯಕವಾಗಿದೆ. ಆದರೆ, ಅದನ್ನು ಮಿತಿ ಮೀರಿ ತೆಗೆದುಕೊಳ್ಳುವುದು ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂದು ನೆನಪಿನಲ್ಲಿಡಬೇಕು ಎಂದು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ನೀವು ಈ ವೆಬ್​ಸೈಟ್​ಗಳನ್ನು ಸಂಪರ್ಕಿಸಬಹುದು:

https://www.cam.ac.uk/research/news/red-and-processed-meat-consumption-associated-with-higher-type-2-diabetes-risk

ಇದನ್ನೂ ಓದಿ:

Last Updated : Sep 18, 2024, 6:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.