ಬೆಂಗಳೂರು: ಐಟಿಬಿಟಿ ಹಬ್ ಎಂದೇ ಖ್ಯಾತಿಗಳಿಸಿರುವ ಎಲೆಕ್ಟ್ರಾನಿಕ್ ಸಿಟಿ ಮೊದಲನೇ ಹಂತದ ಟೋಲ್ ಗೇಟ್ ಬಳಿ ಚಿರತೆಯೊಂದು ರಸ್ತೆ ದಾಟಿ ಹೋಗಿದೆ. ನಸುಕಿನ ಜಾವ ಮೂರು ಗಂಟೆ ಸಮಯದಲ್ಲಿ ಎಲೆಕ್ಟ್ರಾನಿಕ್ ಸಿಟಿಯ ಪನಕ್ ಇಂಡಿಯಾ ಕಂಪನಿ ಭಾಗದಿಂದ ಎನ್‌ಟಿಟಿಎಫ್ ಗ್ರೌಂಡ್ ಭಾಗಕ್ಕೆ ಹೋಗಿದೆ.
ಟೋಲ್ ಪ್ಲಾಜಾನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಸಿಸಿಟಿವಿ ಕಡೆ ಕಣ್ಣಾಡಿಸಿದಾಗ ಚಿರತೆ ಓಡಾಡಿರೋ ದೃಶ್ಯ ಕಂಡು ಶಾಕ್ ಆಗಿದ್ದಾರೆ. ಲಕ್ಷಾಂತರ ಕಾರ್ಮಿಕರು ಕೆಲಸ ಮಾಡುವ ಐಟಿಬಿಟಿ ಹಬ್ನಲ್ಲಿ ಚಿರತೆ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿದ್ದು, ಚಿರತೆಗಾಗಿ ಹುಡುಕಾಟ ನಡೆಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: 3 ವರ್ಷದ ಬಳಿಕ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆ: ಹವಾಮಾನ ಇಲಾಖೆ - More rainfall in the state