ETV Bharat / sports

ಅಬ್ಬಾ.. ವಿರಾಟ್​ ಕೊಹ್ಲಿ ಹೊಡೆದ ಪವರ್​ಫುಲ್​ ಶಾಟ್​ಗೆ ಪುಡಿಯಾದ ಚೆಪಾಕ್​ ಮೈದಾನದ ಗೋಡೆ - Virat Kohli Powefull Shot - VIRAT KOHLI POWEFULL SHOT

ಭಾರತ ಕ್ರಿಕೆಟ್​ ತಂಡದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಬಾಂಗ್ಲಾ ವಿರುದ್ಧದ ಟೆಸ್ಟ್​ ಪಂದ್ಯಕ್ಕಾಗಿ ಮೈದಾನದಲ್ಲಿ ಅಭ್ಯಾಸ ನಡೆಸಿದ್ದಾರೆ. ಈ ವೇಳೆ, ಅವರು ಹೊಡೆದಿರುವ ಪವರ್​ಫುಲ್​ ಶಾಟ್​ಗೆ ಗೊಡೆಯೇ ಪುಡಿಯಾಗಿದೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ (IANS)
author img

By ETV Bharat Sports Team

Published : Sep 16, 2024, 2:42 PM IST

ಚೆನ್ನೈ (ತಮಿಳುನಾಡು): ಬಾಂಗ್ಲಾದೇಶ ವಿರುದ್ಧ ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ನಡೆಸಿರುವ ಟೀಂ ಇಂಡಿಯಾದ ಆಟಗಾರರು ಚೆಪಾಕ್​ ಮೈದಾನದಲ್ಲಿ ಬೆವರು ಹರಿಸುತ್ತಿದ್ದಾರೆ. ಬಾಂಗ್ಲಾ ವಿರುದ್ಧದ ತವರಿನ ಸರಣಿ ಉಭಯ ತಂಡಗಳ ಪಾಲಿಗೆ ಮಹತ್ವ ಪಡೆದುಕೊಂಡಿದೆ. ಈ ಹಿನ್ನೆಲೆ ರೋಹಿತ್​ ಪಡೆ ಅಭ್ಯಾಸದಲ್ಲಿ ತೋಡಗಿದೆ. ಅಲ್ಲದೇ ಕಳೆದ 9 ತಿಂಗಳಿನಿಂದ ಕಾರಣಾಂತರಗಳಿಂದ ಟೆಸ್ಟ್​ ಕ್ರಿಕೆಟ್​ನಿಂದ ಹೊರಗುಳಿದ್ದ ವಿರಾಟ್​​ ಕೊಹ್ಲಿ ಈ ಸರಣಿ ಮೂಲಕ ಮತ್ತೆ ಕಮ್​ ಬ್ಯಾಕ್​ ಮಾಡಲಿದ್ದಾರೆ.

ಕೊಹ್ಲಿ ಪಾಲಿಗೂ ಈ ಸರಣಿ ಮಹತ್ವ ಪಡೆದುಕೊಂಡಿದ್ದು ಹಲವಾರು ದಾಖಲೆಗಳನ್ನು ಮುರಿಯಲು ರನ್​ ಮಷಿನ್​ಗೆ ಸುವರ್ಣವಕಾಶ ಇದೆ. ಈ ಹಿನ್ನೆಲೆ ನೆಟ್ಸ್​ನಲ್ಲಿ ಭರ್ಜರಿ ಅಭ್ಯಾಸದಲ್ಲಿ ತೊಡಗಿದ್ದಾರೆ. ಆದರೆ, ಟೆಸ್ಟ್​ ಆರಂಭಕ್ಕೂ ಮುನ್ನವೇ ವಿರಾಟ್​ ಕೊಹ್ಲಿ ಮೈದಾನದಲ್ಲಿ ತಮ್ಮ ಶಕ್ತಿ ಪ್ರದರ್ಶಸಿದ್ದಾರೆ. ಹೌದು ಮೈದಾನದಲ್ಲಿ ಅಭ್ಯಾಸದ ವೇಳೆ ಬಲಿಷ್ಠವಾದ ಹೊಡೆತ ಹೊಡೆದು ಎಲ್ಲರನ್ನು ಬೆರಗಾಗಿಸಿದ್ದಾರೆ. ಸಧ್ಯ ಚೆಪಾಕ್ ಸ್ಟೇಡಿಯಂನಲ್ಲಿ ಬೆವರು ಹರಿಸುತ್ತಿರುವ ಕೊಹ್ಲಿ ಅಭ್ಯಾಸ ವೇಳೆ ಗೊಡೆಯನ್ನು ಒಡೆದು ಹಾಕಿದ್ದಾರೆ.

ಭಾನುವಾರ ನಡೆದ ಟೀಂ ಇಂಡಿಯಾ ಜೊತೆಗಿನ ಅಭ್ಯಾಸ ಪಂದ್ಯದಲ್ಲಿ ಮಾಜಿ ನಾಯಕ ವಿರಾಟ್ ಪವರ್​ಫುಲ್​ ಹೊಡೆತದಿಂದಾಗಿ ಕ್ರೀಡಾಂಗಣದ ಗೋಡೆ ಪುಡಿಯಾಗಿದೆ. ಕೊಹ್ಲಿಯ ಈ ಬಲಿಷ್ಠವಾದ ಹೊಡೆತದಿಂದ ಚೆಂಡು ಗೋಡೆಯನ್ನು ಸೀಳಿ ಕೊಠಡಿಯೊಳಗೆ ನುಗ್ಗಿದೆ. ಸದ್ಯ ಈ ಪೋಸ್ಟ್​​ ಭಾರಿ ವೈರಲ್​ ಆಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.