ETV Bharat / state

ಬಸ್ ಟಿಕೆಟ್ ದರ ಏರಿಕೆ -  ಮಧ್ಯರಾತ್ರಿಯಿಂದಲೇ ಜಾರಿ: ಎಲ್ಲಿಗೆ ಎಷ್ಟು ದರ ತಿಳಿಯಿರಿ! - KSRTC BUS FARE INCREASE

ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಶೇ.15ರಷ್ಟು ಪ್ರಯಾಣ ದರ ಪರಿಷ್ಕರಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಶನಿವಾರ(ಡಿ.4) ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಅನ್ವಯವಾಗಲಿದೆ.

ಬಸ್ ಟಿಕೆಟ್ ದರ ಪರಿಷ್ಕರಿಸಿ ಸರ್ಕಾರ ಆದೇಶ
ಬಸ್ ಟಿಕೆಟ್ ದರ ಪರಿಷ್ಕರಿಸಿ ಸರ್ಕಾರ ಆದೇಶ (IANS)
author img

By ETV Bharat Karnataka Team

Published : Jan 4, 2025, 5:27 PM IST

Updated : Jan 4, 2025, 5:41 PM IST

ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಲ್ಲಿ ಶೇ.15ರಷ್ಟು ಪ್ರಯಾಣ ದರ ಪರಿಷ್ಕರಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಶನಿವಾರ(ಡಿ.4) ಮಧ್ಯರಾತ್ರಿಯಿಂದ ಶೇ 15ರಷ್ಟು ಟಿಕೆಟ್ ಏರಿಕೆಯ ಪರಿಷ್ಕೃತ ದರ ಅನ್ವಯವಾಗಲಿದೆ.

ಹೀಗಿದೆ ಬಸ್​​ ಪ್ರಯಾಣದ ದರ ಏರಿಕೆಯ ಪಟ್ಟಿ: ಈ ಸಂಬಂಧ ಕೆಎಸ್ಆರ್​ಟಿಸಿ ಎಕ್ಸ್‌ಪ್ರೆಸ್ ಬಸ್​ಗಳ ಹೊಸ ದರ ಪಟ್ಟಿ ಬಿಡುಗಡೆ ಮಾಡಿದೆ. ಹೊಸ ಟಿಕೆಟ್ ದರ ಪಟ್ಟಿಯಂತೆ

ಪರಿಷ್ಕೃತ ದರ ಪಟ್ಟಿ
ಪರಿಷ್ಕೃತ ದರ ಪಟ್ಟಿ (ETV Bharat)
  • ಬೆಂಗಳೂರಿನಿಂದ ತುಮಕೂರು ಪ್ರಯಾಣ ದರ 80 ನಿಂದ 91 ರೂ.ಗೆ ಏರಿಕೆಯಾಗಿದೆ.
  • ಬೆಂಗಳೂರು-ಮಂಡ್ಯಗೆ ಪ್ರಯಾಣ ದರ 116 ನಿಂದ 131 ರೂ.ಗೆ ಏರಿಕೆಯಾಗಿದೆ.
  • ಬೆಂಗಳೂರು-ಮಂಗಳೂರು ಟಿಕೆಟ್ ದರ 454 ರೂ.ಗೆ ಏರಿಕೆಯಾಗಿದೆ.
  • ಬೆಂಗಳೂರು-ಹಾಸನ ಟಿಕೆಟ್ ದರ 246 ರೂ.ಗೆ ಹೆಚ್ಚಳವಾಗಿದೆ.
  • ಬೆಂಗಳೂರು-ಮೈಸೂರು ಟಿಕೆಟ್ ದರ 162 ರೂ.ಗೆ ಹೆಚ್ಚಳವಾಗಿದೆ.
  1. ಬೆಂಗಳೂರು - ಬೆಳಗಾವಿ ಟಿಕೆಟ್ ದರ 697 ರೂ.ಗೆ ಏರಿಕೆಯಾಗಿದೆ.
  2. ಬೆಂಗಳೂರು - ಹುಬ್ಬಳ್ಳಿ ಟಿಕೆಟ್ ದರ 563 ರೂ.ಗೆ ಏರಿಕೆಯಾಗಿದೆ.
  3. ಬೆಂಗಳೂರು-ಹಾವೇರಿ ಟಿಕೆಟ್ ದರ 474 ರೂ.ಗೆ ಹೆಚ್ಚಳವಾಗಿದೆ.
  4. ಬೆಂಗಳೂರು-ಕಲಬುರಗಿ ಟಿಕೆಟ್ ದರ 805 ರೂ.ಗೆ ಹೆಚ್ಚಳವಾಗಿದೆ.
  5. ಬೆಂಗಳೂರು-ಶಿವಮೊಗ್ಗ ಟಿಕೆಟ್ ದರ 356 ರೂ.ಗೆ ಏರಿಕೆಯಾಗಿದೆ.
  6. ಬೆಂಗಳೂರು-ಬಳ್ಳಾರಿ ಟಿಕೆಟ್ ದರ 424 ರೂ.ಗೆ ಏರಿಕೆಯಾಗಿದೆ.
ಪರಿಷ್ಕೃತ ದರ ಪಟ್ಟಿ
ಪರಿಷ್ಕೃತ ದರ ಪಟ್ಟಿ (ETV Bharat)
ಪರಿಷ್ಕೃತ ದರ ಪಟ್ಟಿ
ಪರಿಷ್ಕೃತ ದರ ಪಟ್ಟಿ (ETV Bharat)

ಆರ್ಥಿಕ ಮುಗ್ಗಟ್ಟಿನಲ್ಲಿ ಸಾರಿಗೆ ಸಂಸ್ಥೆಗಳು: ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳು ಪ್ರಸ್ತುತ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ. ಸಾರಿಗೆ ಸಂಸ್ಥೆಗಳಿಗೆ ಡೀಸೆಲ್ ಮತ್ತು ಸಿಬ್ಬಂದಿಗಳಿಗೆ ವೇತನ ಪಾವತಿಸುವುದು ಪ್ರಮುಖ ವೆಚ್ಚಗಳಾಗಿದ್ದು, ಸದರಿ ಎರಡು ವೆಚ್ಚಗಳು ಸೇರಿದಂತೆ ಒಟ್ಟು ಶೇ.90 ರಷ್ಟು ವೆಚ್ಚ ಹೆಚ್ಚಳವಾಗಿದೆ. ಸಿಬ್ಬಂದಿಗಳ ಭವಿಷ್ಯ ನಿಧಿ, ನಿವೃತ್ತ ನೌಕರರ ವೇತನ, ಗ್ರಾಚ್ಯುಟಿ, ಪೂರೈಕೆದಾರರ ಬಾಕಿ ಬಿಲ್‌ಗಳು, ಡೀಸೆಲ್ ಸರಬರಾಜು ಬಿಲ್, ಮೋಟಾರ್ ವಾಹನ ತೆರಿಗೆ ಪಾವತಿ ಮಾಡದಿರುವುದು ಮತ್ತು ಇತರ ಬಿಲ್‌ಗಳ ಬಾಕಿಯಿಂದಾಗಿ ನಾಲ್ಕು ಸಾರಿಗೆ ಸಂಸ್ಥೆಗಳ ಮೇಲೆ ಆರ್ಥಿಕ ಹೊಣೆಗಾರಿಕೆ ಉಂಟಾಗಿದೆ. ನಾಲ್ಕು ಸಾರಿಗೆ ಸಂಸ್ಥೆಗಳಿಗೆ 31-12-2024ರ ಅಂತ್ಯಕ್ಕೆ ಸುಮಾರು 6520.14 ಕೋಟಿ ರೂ.ಗಳ ಆರ್ಥಿಕ ಹೊಣೆಗಾರಿಕೆ ಕ್ರೋಢೀಕೃತವಾಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.

ಪರಿಷ್ಕೃತ ದರ ಪಟ್ಟಿ
ಪರಿಷ್ಕೃತ ದರ ಪಟ್ಟಿ (ETV Bharat)

ರಾಜ್ಯದ ರಸ್ತೆ ಸಾರಿಗೆ ಸಂಸ್ಥೆಗಳು ಆರ್ಥಿಕವಾಗಿ ಮುನ್ನಡೆಯಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿಯ ಸುಧಾರಣೆಗೆ ಹಾಗೂ ಹಮ್ಮಿಕೊಳ್ಳಲಾಗಿರುವ ಯೋಜನೆಗಳನ್ನು ಜಾರಿಗೊಳಿಸಲು ಪ್ರಯಾಣಿಕ ಬಸ್ ದರಗಳನ್ನು ಶೇ.33ರಷ್ಟು ಹೆಚ್ಚಿಸಲು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಶೇ.42ರಷ್ಟು ಹೆಚ್ಚಿಸುವಂತೆ ಕೋರಿದ್ದರು. ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಶೇ.15ರಷ್ಟು ಟಿಕೆಟ್ ದರ ಪರಿಷ್ಕರಣೆ ಮಾಡಲು ಅನುಮತಿಸಿತ್ತು.

ಇದನ್ನೂ ಓದಿ: ಕೆಎಸ್ಆರ್​ಟಿಸಿ ಪ್ರಯಾಣದ ದರ ಏರಿಕೆ; ಸರ್ಕಾರದ ವಿರುದ್ಧ ಕುಂದಾನಗರಿ ಜನರ ಆಕ್ರೋಶ

Last Updated : Jan 4, 2025, 5:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.