ನವದೆಹಲಿ: ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸರ್ಕಾರ ಕಚ್ಚಾ ಮತ್ತು ಸಂಸ್ಕರಿಸಿದ ಖಾದ್ಯ ತೈಲಗಳ ಮೇಲಿನ ಮೂಲ ಆಮದು ತೆರಿಗೆಯನ್ನು ಶೇ. 20 ರಷ್ಟು ಹೆಚ್ಚಿಸಿದೆ. ಇದರಿಂದಾಗಿ ಖಾದ್ಯ ತೈಲ ಬೆಲೆಗಳನ್ನು ಹೆಚ್ಚಿಸಿ, ಬೇಡಿಕೆ ತಗ್ಗಿಸಬಹುದು. ಜೊತೆಗೆ ತಾಳೆ ಎಣ್ಣೆ, ಸೋಯಾಬಿನ್ ಮತ್ತು ಸೂರ್ಯಕಾಂತಿ ಎಣ್ಣೆಯ ಸಾಗರೋತ್ತರ (ವಿದೇಶಿ) ಖರೀದಿ ಕಡಿಮೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಸುಂಕದರ ಏರಿಕೆ ಘೋಷಣೆ ಬೆನ್ನಲ್ಲೆ ಚಿಕಾಗೋ ಬೋರ್ಡ್ ಆಫ್ ಟ್ರೇಡ್ ಸೋಯಾ ಎಣ್ಣೆ ನಷ್ಟ ಅನುಭವಿಸಿದ್ದು, ಶೇ 2ರಷ್ಟು ಕುಸಿತ ಕಂಡಿದೆ. ಕಚ್ಛಾ ತಾಳೆ ಎಣ್ಣೆ, ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆ ಮೇಲಿನ ಶೇ 20ರಷ್ಟು ಕನಿಷ್ಠ ಸೀಮಾ ಸುಂಕವನ್ನು ಏರಿಕೆ ಮಾಡಿದೆ. ಇದು ಮೂರು ಖಾದ್ಯ ತೈಲಗಳ ಮೇಲಿನ ಒಟ್ಟಾರೆ ಆಮದು ತೆರಿಗೆಯನ್ನು 5.5ರಷ್ಟು 27.5ರಷ್ಟು ಹೆಚ್ಚಿಸಲಿದೆ. ಕಾರಣ, ಭಾರತದ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಮತ್ತು ಸಮಾಜ ಕಲ್ಯಾಣ ಸರ್ಚಾರ್ಜ್‌ಗೆ ಇದು ಒಳಪಟ್ಟಿರುತ್ತದೆ.
ಆಮದು ರಿಫೈಂಡ್ ತಾಳೆ ಎಣ್ಣೆ, ರಿಫೈಂಡ್ ಸೋಯಾ ಮತ್ತು ರಿಫೈಂಡ್ ಸೂರ್ಯಕಾಂತಿ ಮೇಲಿನ ತೆರಿಗೆ 13.75ರಿಂದ 35.75ರಷ್ಟು ಹೆಚ್ಚಿಸಲಾಗಿದೆ.
ಸರ್ಕಾರವು ಗ್ರಾಹಕರು ಮತ್ತು ರೈತರ ಹಿತಾಸಕ್ತಿಗಳನ್ನು ಸಮತೋಲನಗೊಳಿಸುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿದೆ. ಇದರಿಂದ ರೈತರು ಸೋಯಾಬೀನ್ ಮತ್ತು ಎಣ್ಣೆ ಬೀಜಗಳ ಬೆಳೆಗಳಿಗೆ ಸರ್ಕಾರ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆ ಪಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ರೀತಿ ಆಮದು ಸುಂಕ ಹೆಚ್ಚಿಸಿದೆ ಎಂದು ಸನ್‌ವಿನ್ ಗ್ರೂಪ್‌ನ ಸಿಇಒ ಸಂದೀಪ್ ಬಜೋರಿಯಾ ತಿಳಿಸಿದ್ದಾರೆ.
ದೇಶಿಯ ಸೋಯಾಬೀನ್ ದರ 100 ಕೆಜಿಗೆ 4,600 ರೂ ಇದ್ದು, ಇದು ರಾಜ್ಯ ನಿಗದಿಪಡಿಸಿರುವ ಬೆಂಬಲ ಬೆಲೆ 4,892ಕ್ಕಿಂತ ಕಡಿಮೆಯಾಗಿದೆ. ಭಾರತವೂ ಶೇ 70ರಷ್ಟು ಸಸ್ಯಜನ್ಯ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿದೆ.
ಇಂಡೊನೇಷ್ಯಾ, ಮಲೇಷ್ಯಾ ಮತ್ತು ಥಾಯ್ಕೆಂಡ್ನಿಂದ ತಾಳೆ ಎಣ್ಣೆಯನ್ನು ಖರೀದಿಸುತ್ತಿದೆ. ಸೋಯಾ ಮತ್ತು ಸೂರ್ಯಾಕಾಂತಿ ಎಣ್ಣೆಯನ್ನು ಅರ್ಜೆಂಟಿನಾ, ಬ್ರೆಜಿಲ್, ರಷ್ಯಾ ಮತ್ತು ಉಕ್ರೇನ್ನಿಂದ ತರಿಸಿಕೊಳ್ಳುತ್ತಿದೆ. ಭಾರತದ ಖಾದ್ಯ ತೈಲ ಶೇ 50ರಷ್ಟು ತಾಳೆ ಎಣ್ಣೆ ಆಮದು ಮಾಡಲಾಗುತ್ತಿದ್ದು, ಇದೀಗ ಸುಂಕ ಹೆಚ್ಚಳವು ಮುಂದಿನ ವಾರದಿಂದ ತಾಳೆ ಎಣ್ಣೆ ಬೆಲೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದು ಸ್ಪಷ್ಟವಾಗಿದೆ ಎಂದು ಹೊಸ ದೆಹಲಿ ಜಾಗತಿಕ ವ್ಯಾಪಾರ ಸಂಸ್ಥೆಯ ಮೂಲದ ಡೀಲರ್ ತಿಳಿಸಿದ್ದಾರೆ.
ಇದನ್ನೂ ಓದಿ: ನೀವು ಅಡುಗೆಗೆ ಯಾವ ಎಣ್ಣೆ ಬಳಸುತ್ತೀರಿ? ಉತ್ತಮ ಆರೋಗ್ಯಕ್ಕೆ ಈ ಅಡುಗೆ ಎಣ್ಣೆ ಉಪಯೋಗಿಸುವುದೇ ಒಳ್ಳೆಯದು!