ETV Bharat / state

ಬೆಂಗಳೂರು ಮೆಟ್ರೋ: ಹಳದಿ ಮಾರ್ಗದಲ್ಲಿ ಚಾಲಕರಹಿತ ರೈಲಿನ ಸುರಕ್ಷತಾ ತಪಾಸಣೆ - BENGALURU METRO

ಬೆಂಗಳೂರು ಮೆಟ್ರೋದ ಚಾಲಕ ರಹಿತ ರೈಲುಗಳ ತಪಾಸಣೆ ಇಂದು ನಡೆಯಿತು.

ಬೆಂಗಳೂರು ಮೆಟ್ರೋ: BMRCL ನಿಂದ ಹಳದಿ ಮಾರ್ಗದಲ್ಲಿ ಚಾಲಕರಹಿತ ರೈಲಿನ ಸುರಕ್ಷತಾ ತಪಾಸಣೆ
ಬೆಂಗಳೂರು ಮೆಟ್ರೋ: BMRCL ನಿಂದ ಹಳದಿ ಮಾರ್ಗದಲ್ಲಿ ಚಾಲಕರಹಿತ ರೈಲಿನ ಸುರಕ್ಷತಾ ತಪಾಸಣೆ (BMRCL)
author img

By ETV Bharat Karnataka Team

Published : Feb 24, 2025, 7:50 PM IST

ಬೆಂಗಳೂರು: ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ಇಂದು ಚಾಲಕ ರಹಿತ ಮೆಟ್ರೋ ರೈಲಿನ ತಪಾಸಣೆಯನ್ನು ನಡೆಸಲಾಯಿತು. ದಕ್ಷಿಣ ವಲಯದ ರೈಲ್ವೆ ಸುರಕ್ಷತಾ ಆಯುಕ್ತರು ಮತ್ತು ತಜ್ಞರ ತಂಡ ಹಲವಾರು ಪರೀಕ್ಷೆಗಳನ್ನು ನಡೆಸಿತು.

ಚಾಲಕ ರಹಿತ ಮೆಟ್ರೋ ರೈಲಿನ ತಪಾಸಣೆ ಯಶಸ್ವಿಯಾಗಿದ್ದರ ಬಗ್ಗೆ ನಮ್ಮ ಮೆಟ್ರೋ ಆಡಳಿತ ಮಂಡಳಿ ಎಕ್ಸ್​​ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇದು ಡ್ರೈವರ್ ಲೆಸ್ ಮೆಟ್ರೋ ಚಾಲನೆಗೆ ರೈಲ್ವೆ ಸಚಿವಾಲುದ ಅನುಮೋದನೆ ಪಡೆಯುವ ಪ್ರಥಮ ಹೆಜ್ಜೆಯಾಗಿದೆ ಎಂದು ತಿಳಿಸಿದೆ.

ಬೆಂಗಳೂರು ಮೆಟ್ರೋ: BMRCL ನಿಂದ ಹಳದಿ ಮಾರ್ಗದಲ್ಲಿ ಚಾಲಕರಹಿತ ರೈಲಿನ ಸುರಕ್ಷತಾ ತಪಾಸಣೆ
BMRCLನಿಂದ ಹಳದಿ ಮಾರ್ಗದಲ್ಲಿ ಚಾಲಕರಹಿತ ರೈಲಿನ ಸುರಕ್ಷತಾ ತಪಾಸಣೆ (BMRCL)

ಮೆಟ್ರೋದ ಹಳದಿ ಮಾರ್ಗದಲ್ಲಿ ಬರುವ ಆರ್​​.ವಿ.ರಸ್ತೆ - ಬೊಮ್ಮಸಂದ್ರ ನಿಲ್ದಾಣಗಳ ನಡುವೆ ಚಾಲಕ ರಹಿತ ಮೆಟ್ರೋ ರೈಲನ್ನು ಚಲಾಯಿಸಿ, ತಪಾಸಣೆ ನಡೆಸಲಾಗಿದೆ. ರೋಲಿಂಗ್ ಸ್ಟಾಕ್/ರೈಲು ರೈಲ್ವೆ ಮಂಡಳಿಯ ಅನುಮೋದನೆ ಪಡೆದು ಹಳದಿ ಮಾರ್ಗದ ಸಂಕೇತ ವ್ಯವಸ್ಥೆಯ ಪರೀಕ್ಷೆಗಳನ್ನು ಪೂರ್ಣಗೊಳಿಸಲಾಗುತ್ತದೆ. ನಂತರ ರೈಲ್ವೆ ಸುರಕ್ಷತಾ ಆಯುಕ್ತರು ಮತ್ತು ತಜ್ನರ ತಂಡವು ಮೆಟ್ರೋ ಮಾರ್ಗದ ರೀಚ್-5 ರ ಹಳದಿ ಲೈನ್​​ನಲ್ಲಿ ಸಂಪೂರ್ಣ ತಪಾಸಣೆ ನಡೆಸಲು ಮತ್ತೊಮ್ಮೆ ಪರೀಕ್ಷೆಗೆ ಆಹ್ವಾನಿಸಲಾಗುವುದೆಂದು ಮೆಟ್ರೋ ಸಂಸ್ಥೆ ತಿಳಿಸಿದೆ.

ರೈಲ್ವೆ ಸುರಕ್ಷತಾ ಆಯುಕ್ತರು ಮತ್ತು ತಜ್ನರ ತಂಡದಿಂದ ತಪಾಸಣೆ ಯಶ್ಸವಿಯಾಗಿ ಪೂರ್ಣಗೊಂಡ ನಂತರ ರೈಲ್ವೆ ಮಂಡಳಿಯ ಅನುಮೋದನೆ ಪಡೆದು ಹಳದಿ ಮಾರ್ಗದಲ್ಲಿ ಬಹು ನಿರೀಕ್ಷೆಯ ಚಾಲಕ ರಹಿತ ಮೆಟ್ರೋ ರೈಲಿನ ಸಂಚಾರ ಪ್ರಾರಂಭಿಸಲಾಗುತ್ತದೆ ಎಂದು ನಮ್ಮ ಮೆಟ್ರೋ ಮಾಹಿತಿ ಹಂಚಿಕೊಂಡಿದೆ.

ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ ಕಂಪನಿಯು ಚಾಲಕ ರಹಿತ ಮೆಟ್ರೋ ರೈಲುಗಳನ್ನು ಪೂರೈಸಿದೆ. ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ ಕಂಪನಿಯಿಂದ ಹೊಸ ರೈಲುಗಳಿಗಾಗಿ ರೈಲ್ವೆ ಸಚಿವಾಲಯದಿಂದ ಅನುಮೋದನೆ ಪಡೆಯುವ ಮೊದಲು ಈ ತಪಾಸಣೆ ಕಡ್ಡಾಯ ಎಂದು ರೈಲು ಸುರಕ್ಷತಾ ಆಯುಕ್ತ ಎ.ಎಂ.ಚೌಧರಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಮಸೂದೆ ವರದಿ ಸಲ್ಲಿಕೆ : 7 ಪಾಲಿಕೆ ರಚನೆ, 30 ತಿಂಗಳ ಮೇಯರ್ ಅವಧಿಗೆ ಸಲಹೆ - REPORT ON GREATER BENGALURU BILL

ETV Bharat Logo

Copyright © 2025 Ushodaya Enterprises Pvt. Ltd., All Rights Reserved.