ಹೈದರಾಬಾದ್:ಫಿನ್‌ಟೆಕ್ ಉದ್ಯಮದಲ್ಲಿ ಭಾರತದ ಹೆಸರಾಂತ ಭಾರತ್‌ಪೇ (BharatPe) ತನ್ನ ಬಳಕೆದಾರರಿಗೆ ಸರಳ ಮತ್ತು ಸುಲಭ ಸೇವೆ ಒದಗಿಸಲು ಸಜ್ಜಾಗಿದೆ. ಪಿಒಎಸ್ (Point of Sale), ಕ್ಯೂರ್ಆರ್ (QR) ಮತ್ತು ಸ್ಪೀಕರ್ ಒಳಗೊಂಡ ಒಂದೇ ಸಾಧನವನ್ನು ಬಿಡುಗಡೆಗೊಳಿಸಿದೆ. ಇದು ಭಾರತದ ಮೊದಲ ಆಲ್ ಇನ್ ಒನ್ ಪಾವತಿ ಕ್ರಮವಾಗಿದೆ. ಭಾರತ್‌ಪೇ ಓನ್ (BharatPe One) ಹೆಸರಲ್ಲಿ ಈ ಸೇವೆ ಪ್ರಾರಂಭಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಈ ನವೀನ ಉತ್ಪನ್ನವು ವ್ಯಾಪಾರಿಗಳಿಗೆ ವಹಿವಾಟುಗಳನ್ನು ಸುವ್ಯವಸ್ಥಿತಗೊಳಿಸಲು ವಿನ್ಯಾಸಗೊಳಿಸಲಾಗಿದೆ. ಡೈನಾಮಿಕ್ ಮತ್ತು ಸ್ಟ್ಯಾಟಿಕ್ ಕ್ಯೂಆರ್ ಕೋಡ್, ಟ್ಯಾಪ್ ಮತ್ತು ಪೇ ಮತ್ತು ಸಾಂಪ್ರದಾಯಿಕ ಕಾರ್ಡ್ ಪಾವತಿ ಆಯ್ಕೆಗಳು ಸೇರಿದಂತೆ ವ್ಯಾಪಕವಾದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಾದ್ಯಂತ ಬಹುಮುಖ ಪಾವತಿಗಳ ಸ್ವೀಕರಿಸುವ ಆಯ್ಕೆಗಳನ್ನು ಭಾರತ್‌ಪೇ ಓನ್ ಒದಗಿಸುತ್ತದೆ.
ಆರಂಭದಲ್ಲಿ 100ಕ್ಕೂ ನಗರಗಳಲ್ಲಿ ಲಭ್ಯ:ಮೊದಲ ಹಂತದಲ್ಲಿ 100ಕ್ಕೂ ನಗರಗಳಲ್ಲಿ ಈ ಸಾಧನದ ಉತ್ಪನ್ನಗಳು ಲಭ್ಯವಾಗಲಿವೆ. ಮುಂದಿನ 6 ತಿಂಗಳ ಅವಧಿಯಲ್ಲಿ 450ಕ್ಕೂ ನಗರಗಳಿಗೆ ವಿಸ್ತರಿಸಲಾಗುವುದು ಎಂದು ತಿಳಿಸಿದೆ. ಒಂದೇ ವೆಚ್ಚದಲ್ಲಿ ಪರಿಣಾಮಕಾರಿ ಸಾಧನವಾಗಿ ಅನೇಕ ಕಾರ್ಯಗಳನ್ನು ಸಂಯೋಜಿಸುವ ಮೂಲಕ ವಿವಿಧ ವಲಯಗಳಾದ್ಯಂತ ಸಣ್ಣ ಮತ್ತು ಮಧ್ಯಮ ವ್ಯವಹಾರಗಳ ವಿವಿಧ ಅಗತ್ಯಗಳಿಗೆ ಅನುಗುಣವಾಗಿ ನಾವು ಸಮಗ್ರ ಪರಿಹಾರವನ್ನು ಒದಗಿಸುತ್ತಿದ್ದೇವೆ ಎಂದು ಭಾರತ್‌ಪೇ ಸಿಇಒ ನಳಿನ್ ನೇಗಿ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.