ಹೈದರಾಬಾದ್: ಭಾರತದಲ್ಲಿ ಬೈಕ್‌ಗಳಿಗೆ ಕ್ರೇಜ್ ತುಸು ಜಾಸ್ತಿನೇ ಇದೆ. ಇಂದು ಬೈಕ್‌ಗಳು ಇಲ್ಲದ ಮನೆಗಳೇ ವಿರಳ ಎನ್ನುವಂತಾಗಿದೆ. ಅದಕ್ಕಾಗಿಯೇ ಎಲ್ಲ ಪ್ರಮುಖ ಆಟೋಮೊಬೈಲ್ ಕಂಪನಿಗಳು ಯುವಜನರನ್ನು ಆಕರ್ಷಿಸಲು ಸೂಪರ್ ಸ್ಟೈಲಿಶ್ ಲುಕ್, ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ರೈಡಿಂಗ್ ಅನುಭವ ಹೊಂದಿರುವ ಸ್ಪೋರ್ಟ್ಸ್ ಬೈಕ್‌ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿವೆ. ಅವುಗಳ ಬಗ್ಗೆ ನೋಡುವುದಾದರೆ,
1. BMW G310 RR :ಸೂಪರ್ ರೈಡಿಂಗ್ ಅನುಭವ ಪಡೆಯಬೇಕು ಎಂದು ಇಚ್ಛಿಸುವುದಾದರೆ ಅಂತಹ ಕ್ರೇಜ್ ಇರುವರಿಗಾಗಿ BMW G310 RR ಉತ್ತಮ ಆಯ್ಕೆಯಾಗಿದೆ. ಇದು 312.12 ಸಿಸಿ ಎಂಜಿನ್ ಹೊಂದಿದೆ. ಈ ಬೈಕ್ 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ನೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರ ಮೈಲೇಜ್ ಲೀಟರ್ಗೆ 30 ಕಿಮೀ. ಮಾರುಕಟ್ಟೆಯಲ್ಲಿ ಈ ಸ್ಪೋರ್ಟ್ಸ್ ಬೈಕಿನ ಬೆಲೆ ಅಂದಾಜು ರೂ.3,04,304 (ಎಕ್ಸ್ ಶೋ ರೂಂ).
2. ಡುಕಾಟಿ ಮಾನ್‌ಸ್ಟರ್:ಡುಕಾಟಿ ಮಾನ್‌ಸ್ಟರ್ ಸೂಪರ್‌ಕಾರ್ ಬ್ರ್ಯಾಂಡ್ ಡುಕಾಟಿ ಬಿಡುಗಡೆ ಮಾಡಿರುವ ಅತ್ಯಂತ ದಕ್ಷತೆಯ ಬೈಕ್ ಇದಾಗಿದೆ. ಈ ಸೂಪರ್ ಸ್ಟೈಲಿಶ್ ಮಾಡೆಲ್ ಉತ್ತಮ ಡೈನಾಮಿಕ್ ಮತ್ತು ಸ್ಪೋರ್ಟಿ ಲುಕ್ ಕೂಡಾ ಹೊಂದಿದೆ. ಹೆಸರಿಗೆ ತಕ್ಕಂತೆ ಇದು ಅತ್ಯಂತ ಶಕ್ತಿಶಾಲಿ 937 ಸಿಸಿ ಎಂಜಿನ್ ಹೊಂದಿದೆ. ಇದ 6 -ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ನೊಂದಿಗೆ ಬರುತ್ತದೆ. ಈ ಬೈಕಿನ ಸೀಟ್ ಎತ್ತರ 820 ಎಂಎಂ. ಒಂದು ಲೀಟರ್ ಪೆಟ್ರೋಲ್ಗೆ 19 ಕಿ.ಮೀ ಮೈಲೇಜ್ ನೀಡುತ್ತದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ಅಂದಾಜು ರೂ.12,94,366.
3. ಕಾವಾಸಾಕಿ ನಿಂಜಾ ZX-4R: ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಾವಾಸಾಕಿ ನಿಂಜಾ - ತನ್ನ ಕ್ರೀಡಾ ಬೈಕ್‌ಗಳಿಗೆ ಬಹಳ ಪ್ರಸಿದ್ಧವಾಗಿದೆ. ಕಾವಾಸಾಕಿ ನಿಂಜಾ ZX-4R ಈ ಕಂಪನಿಯ ಸೂಪರ್ ಸ್ಪೋರ್ಟ್ಸ್ ಬೈಕ್ ಇದಾಗಿದೆ. ಈ ಆಕರ್ಷಕ ಬೈಕ್ 399 ಸಿಸಿ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. 76.4 ಬಿಎಚ್‌ಪಿ ಶಕ್ತಿಯನ್ನು ಉತ್ಪಾದಿಸುತ್ತದೆ . ಆಸನದ ಎತ್ತರ 800 ಮಿ.ಮೀ. ಇದ್ದು, ನೋಡಲು ಆಕರ್ಷಕವಾಗಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ಅಂದಾಜು 8,49,000 ರೂ.
4. ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್ಎಸ್ : ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಟ್ರಯಂಫ್ ಸ್ಪೋರ್ಟ್ಸ್ ಬೈಕ್‌ಗಳ ಜನಪ್ರಿಯತೆ ದಿನ ದಿನಕ್ಕೂ ಹೆಚ್ಚುತ್ತಿದೆ. ಬೆಲೆ ಹೆಚ್ಚಿದ್ದರೂ ಈ ಬೈಕ್ನ ಕಾರ್ಯವೈಖರಿಗೆ ಸಾಕಷ್ಟು ಮಂದಿ ಫಿದಾ ಆಗಿದ್ದಾರೆ. ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್ಎಸ್ ಸ್ಪೋರ್ಟ್ಸ್ ಬೈಕ್ ಯುವಜನತೆಗೆ ಅತ್ಯಂತ ಆಕರ್ಷಕವಾಗಿದೆ. ಈ ಬೈಕ್ 1160 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದೆ. ಈ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್ಎಸ್ ಬೈಕ್ ಒಂದು ಲೀಟರ್ ಇಂಧನಕ್ಕೆ 17.8 ಕಿಮೀ ಮೈಲೇಜ್ ನೀಡುತ್ತದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ಅಂದಾಜು 18,24,976 ರೂ ಮಾತ್ರ.
5. KTM RC 390:ಕಳೆದ ಕೆಲವು ವರ್ಷಗಳಿಂದ KTM ಬೈಕ್‌ಗಳು ಭಾರತದಲ್ಲಿ ಭಾರಿ ಜನಪ್ರಿಯತೆಯನ್ನು ಗಳಿಸಿಕೊಂಡಿವೆ ಮಧ್ಯಮ ಶ್ರೇಣಿಯ ಬೆಲೆಯಲ್ಲಿ ಸ್ಪೋರ್ಟ್ಸ್ ಬೈಕ್ ಖರೀದಿಸಲು ಬಯಸುವವರಿಗೆ ಕೆಟಿಎಂ ಅತ್ಯುತ್ತಮ ಆಯ್ಕೆಯಾಗಿದೆ. ಈ ಕಂಪನಿ ಬಿಡುಗಡೆ ಮಾಡಿರುವ ಅತ್ಯುತ್ತಮ ಮಾಡೆಲ್ ಕೆಟಿಎಂ ಆರ್ ಸಿ 390. ಈ ಬೈಕ್ ಉತ್ತಮ ಕ್ಲಾಸಿಕ್ ಲುಕ್ ಹೊಂದಿದ್ದು, 373.27 ಸಿಸಿ ಎಂಜಿನ್ ನೊಂದಿಗೆ ಅತ್ಯುತ್ತಮ ಮಾದರಿಯಾಗಿದೆ. ಇದು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ನೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವುದೆ. ಈ ಬೈಕ್ ಲೀಟರ್ಗೆ 29 ಕಿಮೀ ಮೈಲೇಜ್ ನೀಡುತ್ತದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ಅಂದಾಜು 3,16,163 ರೂ.
ಇದನ್ನು ಓದಿ:ಬೆಳ್ಳಿ ಖರೀದಿಸಬೇಕೇ? ಬೆಳ್ಳಿ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಬೇಕೇ? ಸಿಲ್ವರ್ ಇಟಿಎಫ್ ಹೂಡಿಕೆ ಮೇಲಿನ ಸಾಧಕ, ಬಾಧಕಗಳೇನು? - How to invest in silver