ಹೈದರಾಬಾದ್: ಭಾರತವು ವಿಶ್ವದ ಮೂರನೇ ಅತಿದೊಡ್ಡ ವಾಹನ ಉದ್ಯಮವನ್ನು ಹೊಂದಿದ ರಾಷ್ಟ್ರವಾಗಿದೆ. ಹಾಗಾಗಿ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಎಸ್ಯುವಿ, ಹ್ಯಾಚ್‌ಬ್ಯಾಕ್‌ಗಳಿಂದ ಎಂವಿಪಿವರೆಗೆ ಎಲ್ಲ ರೀತಿಯ ಕಾರುಗಳು ಲಭ್ಯವಿವೆ. ಇದಲ್ಲದೇ ಟಾಪ್ ಎಂಡ್ ಪ್ರೀಮಿಯಂ ಕಾರುಗಳಿಂದ ಕೈಗೆಟುಕುವ ಕಾರುಗಳವರೆಗೆ ಎಲ್ಲ ರೀತಿಯ ಕಾರುಗಳು ಇಲ್ಲಿ ಸಿಗುತ್ತವೆ.
ಪ್ರಸ್ತುತ ನಾವು ಆರು ಲಕ್ಷದ ಬೆಲೆಯಲ್ಲಿ ಲಭ್ಯ ಇರುವ ಐದು ಕಾರುಗಳ ಬಗ್ಗೆ ತಿಳಿದುಕೊಳ್ಳೋಣ.
1. ರೆನಾಲ್ಟ್ ಟ್ರೈಬರ್: ಭಾರತದಲ್ಲಿ ರೆನಾಲ್ಟ್ ಟ್ರೈಬರ್ ಕಾರು ಜನಜನಿತವಾಗಿದೆ. ಈ ಕಾರಿನ ಬೆಲೆ ಅಂದಾಜು ರೂ.6 ಲಕ್ಷದಿಂದ ರೂ.8.97 ಲಕ್ಷ (ಎಕ್ಸ್ ಶೋ ರೂಂ) ರೂವರೆಗೂ ಇದೆ. ಈ ಕಾರು 1 ಲೀಟರ್ ಹಾಗೂ ಮೂರು ಸಿಲಿಂಡರ್ ಎಂಜಿನ್ ಹೊಂದಿದೆ. ಇದು 72 bhp ಪವರ್ ಮತ್ತು 96 Nm ಟಾರ್ಕ್ ಅನ್ನು ಉತ್ಪಾದಿಸುವ ಕಾರಾಗಿದೆ.
ರೆನಾಲ್ಟ್ ಟ್ರೈಬರ್ ಕಾರಿನಲ್ಲಿ ಡ್ರೈವರ್ ಸೀಟ್ ಆರ್ಮ್ ರೆಸ್ಟ್, ಪವರ್ಡ್ ವಿಂಗ್ ಮಿರರ್ಸ್, ಏಳು ಇಂಚಿನ ಟಿಎಫ್ ಟಿ ಇನ್ಸ್ಟ್ರುಮೆಂಟ್ ಕನ್ಸೋಲ್, ವೈರ್ ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್ ಮುಂತಾದ ಹಲವು ವೈಶಿಷ್ಟ್ಯಗಳಿವೆ. ನವೀಕರಿಸಿದ ರೆನಾಲ್ಟ್ ಟ್ರೈಬರ್ RXL ರೂಪಾಂತರವು ಹಿಂಭಾಗದ ವೈಪರ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಹಿಂಭಾಗದ ಹವಾನಿಯಂತ್ರಣ ದ್ವಾರಗಳು ಮತ್ತು PM 2.5 ಏರ್ ಫಿಲ್ಟರ್‌ಗಳನ್ನು ಹೊಂದಿದೆ. Renault ಟ್ರೈಬರ್ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರು ಎಂಬುದು ನಿಮ್ಮ ಗಮನದಲ್ಲಿರಲಿ.
2.ಮಾರುತಿ ಸುಜುಕಿ ಸ್ವಿಫ್ಟ್ : ಮಾರುತಿ ಸುಜುಕಿ ಸ್ವಿಫ್ಟ್ ಭಾರತದಲ್ಲಿನ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ಅಂದಾಜು ರೂ.5.99 ಲಕ್ಷದಿಂದ ರೂ.9.03 ಲಕ್ಷ (ಎಕ್ಸ್ ಶೋ ರೂಂ)ವರೆಗೆ ನಿಗದಿ ಮಾಡಲಾಗಿದೆ. ಈ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 90 bhp ಪವರ್ ಮತ್ತು 113 Nm ಟಾರ್ಕ್ ಹೊಂದಿದೆ. 5 -ಸ್ಪೀಡ್ ಮ್ಯಾನುವಲ್ ಗೇರ್ ಹಾಗೂ CVT ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನಲ್ಲೂ ಕೂಡಾ ಲಭ್ಯವಿದೆ. ಸ್ವಿಫ್ಟ್ ಕಾರು ADAS - ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್, 360 ಡಿಗ್ರಿ ಕ್ಯಾಮೆರಾದಂತಹ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.
3. ಹ್ಯುಂಡೈ ಗ್ರಾಂಡ್ ಐ10 ನಿಯೋಸ್ :ಈ ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಬೆಲೆ ರೂ.5.92 ಲಕ್ಷದಿಂದ ರೂ.8.56 ಲಕ್ಷ (ಎಕ್ಸ್ ಶೋರೂಂ)ವರೆಗಿನ ಬೆಲೆಯಲ್ಲಿ ಲಭ್ಯವಿದೆ. ಈ ಹುಂಡೈ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 83 bhp ಪವರ್ ಮತ್ತು 114 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮೇಟೆಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ (AMT) ಸೌಲಭ್ಯವನ್ನು ಹೊಂದಿದೆ. ಯಾವುದು ನಿಮಗೆ ಇಷ್ಟವೋ ಆ ಆಯ್ಕೆಯನ್ನು ನೀವು ಮಾಡಬಹುದಾಗಿದೆ.
4. ನಿಸ್ಸಾನ್ ಮ್ಯಾಗ್ನೈಟ್: ಭಾರತೀಯ ಮಾರುಕಟ್ಟೆಯಲ್ಲಿ ನಿಸ್ಸಾನ್ ಮ್ಯಾಗ್ನೈಟ್ ಕಾರು ರೂ.6 ಲಕ್ಷದಿಂದ ರೂ.11.27 ಲಕ್ಷದವರೆಗಿ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಲಭ್ಯವಿದೆ. ಎರಡು ಎಂಜಿನ್ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಬಂದಿದೆ. 1-ಲೀಟರ್ ಪೆಟ್ರೋಲ್ ಎಂಜಿನ್ 72 bhp ಪವರ್ ಮತ್ತು 96 Nm ಟಾರ್ಕ್ ವ್ಯವಸ್ಥೆ ಹೊಂದಿದೆ. 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 100 bhp ಪವರ್ ಮತ್ತು 160 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಸ್ವಯಂಚಾಲಿತ ಮತ್ತು ಹಸ್ತಚಾಲಿತ ಗೇರ್ ಬಾಕ್ಸ್ ಆಯ್ಕೆಗಳನ್ನು ಹೊಂದಿದೆ . ಈ ಕಾರು ಪ್ರತಿ ಲೀಟರ್‌ಗೆ 17.4 ಕಿಮೀ - 20 ಕಿಮೀ ಮೈಲೇಜ್ ನೀಡುತ್ತದೆ. ಈ ಕಾರು 32 ರೂಪಾಂತರಗಳಲ್ಲಿ ಮತ್ತು 9 ಬಣ್ಣಗಳಲ್ಲಿ ಲಭ್ಯವಿದೆ.
5. ಮಾರುತಿ ಸುಜುಕಿ ವ್ಯಾಗನ್ಆರ್: ಮಾರುತಿ ಸುಜುಕಿ ವ್ಯಾಗನ್ಆರ್ ಕಾರು 5.54 ಲಕ್ಷದ ಆರಂಬಿಕ ಬೆಲೆಯಲ್ಲಿ ಲಭ್ಯವಿದೆ. ಟಾಪ್ ಎಂಡ್ ಕಾರು 7.38 ಲಕ್ಷರೂ ನಡುವೆ (ಎಕ್ಸ್ ಶೋ ರೂಂ) ದೊರೆಯುತ್ತದೆ. ಈ ಜನಪ್ರಿಯ ಹ್ಯಾಚ್‌ಬ್ಯಾಕ್ ಕಾರು ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. 1-ಲೀಟರ್ ಪೆಟ್ರೋಲ್ ಎಂಜಿನ್ 67 bhp ಪವರ್ ಮತ್ತು 89 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. 1.2-ಲೀಟರ್ ಪೆಟ್ರೋಲ್ ಎಂಜಿನ್ 90 bhp ಪವರ್ ಮತ್ತು 113 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎರಡೂ ಎಂಜಿನ್‌ಗಳನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಮಾರುತಿ ಸುಜುಕಿ ವ್ಯಾಗನರ್ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ರಿಮೋಟ್ ಕೀಲೆಸ್ ಎಂಟ್ರಿ, ಚಾಲಿತ ಕಿಟಕಿಗಳು, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಹೈ ಸ್ಪೀಡ್ ಅಲರ್ಟ್ ಸಿಸ್ಟಮ್ ಗಳನ್ನು ಕೂಡಾ ಹೊಂದಿದೆ.
ಇದನ್ನು ಓದಿ:ಕೈಗಾರಿಕಾ ಉತ್ಪಾದನೆ ಬೆಳವಣಿಗೆ ದರ ಶೇ 5.7ಕ್ಕೆ ಏರಿಕೆ: ಗ್ರಾಹಕ ಬೆಲೆ ಹಣದುಬ್ಬರ ಇಳಿಕೆ - INDUSTRIAL PRODUCTION