ETV Bharat / business

ಸತತ 2ನೇ ವರ್ಷವೂ 10 ಲಕ್ಷ ವೀಸಾ: ಯುಎಸ್​ ರಾಯಭಾರ ಕಚೇರಿ ಹೊಸ ದಾಖಲೆ - US VISA

ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಯು ಸತತ ಎರಡನೇ ವರ್ಷ 10 ಲಕ್ಷಕ್ಕೂ ಹೆಚ್ಚು ವೀಸಾಗಳನ್ನು ನೀಡಿದೆ.

ಯುಎಸ್ ರಾಯಭಾರ ಕಚೇರಿ ಲೋಗೊ
ಯುಎಸ್ ರಾಯಭಾರ ಕಚೇರಿಯ ಲೋಗೊ (IANS)
author img

By ETV Bharat Karnataka Team

Published : 17 hours ago

ನವದೆಹಲಿ: ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿ ಮತ್ತು ಅದರ ದೂತಾವಾಸವು ಸತತ ಎರಡನೇ ವರ್ಷವೂ ಒಂದು ದಶಲಕ್ಷಕ್ಕೂ ಹೆಚ್ಚು ವಲಸೆಯೇತರ ವೀಸಾಗಳನ್ನು ನೀಡುವ ಮೂಲಕ ಹೊಸ ದಾಖಲೆಯನ್ನು ಬರೆದಿದೆ.

ಪ್ರವಾಸೋದ್ಯಮ, ವ್ಯಾಪಾರ, ಶಿಕ್ಷಣ, ವೈದ್ಯಕೀಯ ಚಿಕಿತ್ಸೆ ಮತ್ತು ಇತರ ಉದ್ದೇಶಗಳಿಗಾಗಿ ಯುನೈಟೆಡ್ ಸ್ಟೇಟ್ಸ್​ಗೆ ಪ್ರಯಾಣಿಸಲು ಭಾರತೀಯರು ಬಯಸುತ್ತಿರುವುದಕ್ಕೆ ದಾಖಲೆ ಸಂಖ್ಯೆಯ ವಲಸೆಯೇತರ ವೀಸಾಗಳು ಸಾಕ್ಷಿ. ವಲಸೆಯೇತರ ವೀಸಾವು ಈ ಉದ್ದೇಶಗಳಿಗಾಗಿ ಯುನೈಟೆಡ್ ಸ್ಟೇಟ್ಸ್​ಗೆ ಪ್ರಯಾಣಿಸುವುದನ್ನು ಸುಗಮಗೊಳಿಸುತ್ತದೆ.

ಕೋವಿಡ್ ಸಾಂಕ್ರಾಮಿಕ ಅಲೆ ಕೊನೆಗೊಂಡ ನಂತರ ಯುಎಸ್​ಗೆ ಭಾರತೀಯ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದ ಯುಎಸ್ ರಾಯಭಾರ ಕಚೇರಿ ವರ್ಷಗಳಿಂದ ದಾಖಲೆ ಸಂಖ್ಯೆಯ ವಲಸೆಯೇತರ ವೀಸಾಗಳನ್ನು ನೀಡುತ್ತಿದೆ.

"ಕಳೆದ ನಾಲ್ಕು ವರ್ಷಗಳಲ್ಲಿ, ಭಾರತದಿಂದ ಸಂದರ್ಶಕರ ಸಂಖ್ಯೆ ಐದು ಪಟ್ಟು ಹೆಚ್ಚಾಗಿದೆ ಮತ್ತು 2024 ರ ಮೊದಲ ಹನ್ನೊಂದು ತಿಂಗಳಲ್ಲಿ ಎರಡು ದಶಲಕ್ಷಕ್ಕೂ ಹೆಚ್ಚು ಭಾರತೀಯರು ಯುನೈಟೆಡ್ ಸ್ಟೇಟ್ಸ್​ಗೆ ಪ್ರಯಾಣಿಸಿದ್ದಾರೆ. ಇದು 2023 ರ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 26 ರಷ್ಟು ಹೆಚ್ಚಳವಾಗಿದೆ" ಎಂದು ರಾಯಭಾರ ಕಚೇರಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಐದು ದಶಲಕ್ಷಕ್ಕೂ ಹೆಚ್ಚು ಭಾರತೀಯರು ಈಗಾಗಲೇ ಯುನೈಟೆಡ್ ಸ್ಟೇಟ್ಸ್​ಗೆ ಭೇಟಿ ನೀಡಲು ವಲಸೆಯೇತರ ವೀಸಾ ಪಡೆದುಕೊಂಡಿದ್ದಾರೆ. ಅಲ್ಲದೆ ಪ್ರತಿದಿನ ಸಾವಿರಾರು ಹೊಸ ವೀಸಾ ನೀಡಲಾಗುತ್ತಿದೆ.

"ಈ ವರ್ಷ ಯುನೈಟೆಡ್ ಸ್ಟೇಟ್ಸ್​ನಲ್ಲಿ ಎಚ್ -1 ಬಿ ವೀಸಾಗಳನ್ನು ನವೀಕರಿಸಲು ಯುಎಸ್ ಸ್ಟೇಟ್ ಡಿಪಾರ್ಟ್ ಮೆಂಟ್ ಯಶಸ್ವಿ ಪೈಲಟ್ ಕಾರ್ಯಕ್ರಮವನ್ನು ಪೂರ್ಣಗೊಳಿಸಿದೆ. ಇದು ಭಾರತದ ಅನೇಕ ವಿಶೇಷ ಉದ್ಯೋಗ ಕಾರ್ಮಿಕರಿಗೆ ಯುನೈಟೆಡ್ ಸ್ಟೇಟ್ಸ್ ತೊರೆಯದೆ ತಮ್ಮ ವೀಸಾಗಳನ್ನು ನವೀಕರಿಸಲು ಅನುವು ಮಾಡಿಕೊಟ್ಟಿದೆ. ಈ ಪ್ರಾಯೋಗಿಕ ಕಾರ್ಯಕ್ರಮವು ಸಾವಿರಾರು ಅರ್ಜಿದಾರರಿಗೆ ನವೀಕರಣ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಿದೆ ಮತ್ತು 2025 ರಲ್ಲಿ ಯುಎಸ್ ಆಧರಿತ ನವೀಕರಣ ಕಾರ್ಯಕ್ರಮವನ್ನು ಔಪಚಾರಿಕವಾಗಿ ಸ್ಥಾಪಿಸಲು ಇಲಾಖೆ ಕೆಲಸ ಮಾಡುತ್ತಿದೆ" ಎಂದು ಯುಎಸ್ ರಾಯಭಾರ ಕಚೇರಿ ಹೇಳಿದೆ.

"ಯುಎಸ್ ರಾಯಭಾರ ಕಚೇರಿಯು ಭಾರತದಲ್ಲಿ ವಾಸಿಸುವ ಮತ್ತು ಭಾರತಕ್ಕೆ ಪ್ರಯಾಣಿಸುವ ಅಮೆರಿಕನ್ ನಾಗರಿಕರಿಗೆ 24,000 ಕ್ಕೂ ಹೆಚ್ಚು ಪಾಸ್​ಪೋರ್ಟ್​ಗಳು ಮತ್ತು ಇತರ ಕಾನ್ಸುಲರ್ ಸೇವೆಗಳನ್ನು ಒದಗಿಸಿದೆ" ಎಂದು ಅದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಕಚೇರಿಯು 3 ಲಕ್ಷಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳಿಗೆ ಯುಎಸ್ ವಿದ್ಯಾರ್ಥಿ ವೀಸಾಗಳನ್ನು ನೀಡಿದೆ.

ಇದನ್ನೂ ಓದಿ : ಕಳೆದ ವರ್ಷ 1.10 ಕೋಟಿ ಕ್ರೆಡಿಟ್ ಕಾರ್ಡ್ ವಿತರಣೆ: 99 ಕೋಟಿಗೆ ತಲುಪಿದ ಡೆಬಿಟ್​ ಕಾರ್ಡ್​ ಸಂಖ್ಯೆ - CREDIT DEBIT CARDS

ETV Bharat Logo

Copyright © 2024 Ushodaya Enterprises Pvt. Ltd., All Rights Reserved.