ಕರ್ನಾಟಕ

karnataka

ETV Bharat / bharat

ಏಕತೆ, ಸಾಮರಸ್ಯದ ಪ್ರತೀಕವಾಗಿ ಯೋಗ ದಿನಾಚರಣೆ: ಪ್ರಧಾನಿ ನರೇಂದ್ರ ಮೋದಿ - 10 th Yoga day celebrates - 10 TH YOGA DAY CELEBRATES

ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಇನ್ನು 10 ದಿನ ಬಾಕಿ ಇದ್ದು, ಯೋಗದಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳುವ ಮೂಲಕ ಅದರ ಪ್ರಯೋಜನ ಪಡೆಯುವಂತೆ ದೇಶದ ಜನತೆಗೆ ಕರೆ ನೀಡಿದ್ದಾರೆ.

yoga-day-celebrates-timeless-practice-of-oneness-harmony-pm-modi
ಯೋಗದಲ್ಲಿ ತೊಡಗಿರುವ ಪಿಎಂ ಮೋದಿ (ಸಂಗ್ರಹ ಚಿತ್ರ)

By PTI

Published : Jun 11, 2024, 12:13 PM IST

ನವದೆಹಲಿ: ಯೋಗವನ್ನು ಜೀವನದ ಭಾಗವಾಗಿಸಿ ಈ ನಿಟ್ಟಿನೆಡೆಗೆ ಬದ್ಧತೆಯನ್ನು ಪ್ರದರ್ಶಿಸಬೇಕು ಹಾಗೂ ಇತರರನ್ನು ಯೋಗದ ಅಭ್ಯಾಸದಲ್ಲಿ ತೊಡಗುವಂತೆ ಜನರು ಪ್ರೋತ್ಸಾಹಿಸಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಜೂನ್​ 21ರಂದು ನಡೆಯುವ ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಇನ್ನು 10 ದಿನಗಳು ಬಾಕಿ ಇದ್ದು, ಸಾಮರಸ್ಯ ಮತ್ತು ಏಕತೆಯಿಂದ ಈ ದಿನವನ್ನು ಆಚರಿಸುವಂತೆ ಅವರು ಸಲಹೆ ನೀಡಿದ್ದಾರೆ.

ಯೋಗವೂ ಸಂಸ್ಕೃತಿ ಮತ್ತು ಭೌಗೋಳಿಕ ಗಡಿ ಮೀರಿ ಮುಂದುವರೆದಿದೆ. ಜನರ ಒಟ್ಟಾರೆ ಯೋಗಕ್ಷೇಮವನ್ನು ಕಾಪಾಡುವಲ್ಲಿ ಪ್ರಮುಖವಾಗಿದ್ದು, ಈ ಮೂಲಕ ಎಲ್ಲರನ್ನೂ ಒಂದು ಮಾಡಿದೆ ಎಂದು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಈ ವರ್ಷದ ಯೋಗ ದಿನಕ್ಕೆ ಹತ್ತಿರವಾಗುತ್ತಿದ್ದು, ನಾವು ಈ ಯೋಗವನ್ನು ನಮ್ಮ ಜೀವನದ ಅಂತರ್ಗತ ಭಾಗವಾಗಿಸಿ, ಇತರರು ಕೂಡ ತಮ್ಮ ಜೀವನದ ಭಾಗವಾಗಿ ಯೋಗವನ್ನು ಅನುಸರಿಸುವಂತೆ ಪ್ರೋತ್ಸಾಹಿಸಬೇಕು ಎಂದು ಅವರು ತಿಳಿಸಿದ್ದಾರೆ.

ಯೋಗ ಶಾಂತತೆ, ಸವಾಲುಗಳ ವಿರುದ್ಧ ಹೋರಾಡುವ ಹಾಗೂ ನೆಮ್ಮದಿ, ಧೈರ್ಯವನ್ನು ನೀಡುತ್ತದೆ ಎಂದು ತಿಳಿಸಿರುವ ಪ್ರಧಾನಿ, ಇದೇ ವೇಳೆ ಯೋಗದ ವಿವಿಧ ಆಸನಗಳ ಅಭ್ಯಾಸದಿಂದ ಆಗುವ ಪ್ರಯೋಜನಗಳ ಕುರಿತು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಭಾರತದ ಪ್ರಾಚೀನ ಯೋಗದ ಆರೋಗ್ಯಕರ ಪ್ರಯೋಜನ ಕುರಿತು ಸಾರುವ ಉದ್ದೇಶದಿಂದ ವಿಶ್ವಸಂಸ್ಥೆಯಲ್ಲಿ ಈ ಕುರಿತು ಪ್ರಸ್ತಾವನೆಯನ್ನು 2014ರಲ್ಲಿ ಭಾರತದ ಪ್ರತಿನಿಧಿ ಮಂಡಿಸಿದ್ದರು. ಇದಕ್ಕೆ ಇಡಿ ವಿಶ್ವ ಬೆಂಬಲ ಸೂಚಿಸಿದ ಫಲವಾಗಿ ಜೂನ್​ 21ರಂದು ವಿಶ್ವ ಅಂತಾರಾಷ್ಟ್ರೀಯ ದಿನವಾಗಿ ಘೋಷಣೆ ಮಾಡಲಾಗಿತ್ತು.

ಇದನ್ನೂ ಓದಿ: ಯೋಗಕ್ಕೆ ಮಾರುಹೋದ ವಿದೇಶಿಗರು: ಯೋಗ ತರಬೇತಿಗಾಗಿ ಧಾರವಾಡದ ಪುಟ್ಟ ಗ್ರಾಮಕ್ಕೆ ಬಂದ ಅಮೆರಿಕ ಯುವತಿ

ABOUT THE AUTHOR

...view details