ನವದೆಹಲಿ: ಇಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ 78ನೇ ಜನ್ಮದಿನ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಶುಭಾಶಯ ಕೋರಿದ್ದಾರೆ.
ಎಕ್ಸ್ ಜಾಲತಾಣದ ಮೂಲಕ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ, ಸೋನಿಯಾ ಗಾಂಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೀರ್ಘ ಜೀವನ ಮತ್ತು ಆರೋಗ್ಯಕ್ಕಾಗಿ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.
ಇನ್ನು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಜೀವನ ಲಕ್ಷಾಂತರ ಜನರಿಗೆ ನೀವು ಸ್ಫೂರ್ತಿಯಾಗಿದ್ದೀರ ಎಂದಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಸಮುದಾಯಗಳ ಹಕ್ಕುಗಳಿಗೆ ಚಾಂಪಿಯನ್, ಸಾರ್ವಜನಿಕ ಜೀವನದಲ್ಲಿ ಲಕ್ಷಾಂತರ ಜನರನ್ನು ಪ್ರೇರೇಪಿಸಿದ ಅವರಿಗೆ ದೀರ್ಘ ಜೀವನ ಮತ್ತು ಆರೋಗ್ಯ ಸಿಗಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಪೋಸ್ಟ್ ಮಾಡಿ, ನಮ್ಮ ಕಾಲದ ಆದರ್ಶ ನಾಯಕರು ಎಂದಿದ್ದಾರೆ. ಭಾರತಕ್ಕಾಗಿ ಅಪ್ರತಿಮ ಕೊಡಗೆ ಮೂಲಕ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಮನಮೋಹನ್ ಸಿಂಗ್ ಅವರ ಉತ್ತಮ ಆಡಳಿತದಲ್ಲಿ ಅವರ ಮಾರ್ಗದರ್ಶನ ಭಾರತದ ಸ್ವಾತಂತ್ರ್ಯ ನಂತರ ಬೆಳವಣಿಗೆಯ ಪ್ರಯಾಣದಲ್ಲಿ ಪ್ರಮುಖವಾಗಿದೆ ಎಂದಿದ್ದಾರೆ.
ನಿರಂತರ ಟೀಕೆಗಳ ನಡುವೆಯೂ ಅವರು ಸಾರ್ವಜನಿಕ ಸೇವೆಗೆ ಕಟ್ಟಿಬದ್ಧರಾಗಿದ್ದಾರೆ. ನಮ್ಮ ಪಕ್ಷದ ಅವರ ಬೆಂಬಲ ಮತ್ತು ದೂರದೃಷ್ಟಿ ಶಕ್ತಿಯ ಮೂಲವಾಗಿದೆ ಎಂದಿದ್ದಾರೆ.
ಮಹಿಳಾ ಸಬಲೀಕರಣ, ಸಾಮಾಜಿಕ ನ್ಯಾಯ ಮತ್ತು ಎಲ್ಲರನ್ನೊಳಗೊಂಡ ಬೆಳವಣಿಗೆ, ಮತ್ತು ದೂರದೃಷ್ಟಿಯಿಂದ ಅನೇಕ ಸಮುದಾಯದ ಅಂಚಿನಲ್ಲಿರುವ ಜನರ ಉನ್ನತಿಗೆ ಮತ್ತು ಭಾರತದ ಕಲ್ಯಾಣ ರಾಜ್ಯ ಬಲಗೊಳಿಸುವಲ್ಲಿ ಪ್ರಮುಖರಾಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಕೂಡ ತಿಳಿಸಿದೆ.
ಇದನ್ನೂ ಓದಿ: ಪೊಲೀಸರಿಂದ ಅಶ್ರುವಾಯು ಪ್ರಯೋಗ, ಹಲವು ರೈತರಿಗೆ ಗಾಯ: ದೆಹಲಿ ಚಲೋ 2ನೇ ಸಲ ಸ್ಥಗಿತ