ಕರ್ನಾಟಕ

karnataka

By ETV Bharat Karnataka Team

Published : Jun 12, 2024, 2:50 PM IST

ETV Bharat / bharat

ಸೈಬರ್‌ ಕಳ್ಳರ ಹೊಸ ತಂತ್ರ 'ಡಿಜಿಟಲ್ ಅರೆಸ್ಟ್‌'? ಅವಶ್ಯವಾಗಿ ತಿಳಿಯಿರಿ, ಅಪಾಯದಿಂದ ಪಾರಾಗಿ! - Digital Arrest

ತಂತ್ರಜ್ಞಾನ ದಿನ ದಿನಕ್ಕೆ ಅಭಿವೃದ್ಧಿಯಾಗುತ್ತಿದ್ದಂತೆ ಸೈಬರ್ ಅಪರಾಧಗಳೂ ಹೆಚ್ಚಾಗುತ್ತಿವೆ. ಸೈಬರ್ ಕಳ್ಳರು ತಂತ್ರಜ್ಞಾನವನ್ನು ದುರುಪಯೋಗ ಮಾಡಿಕೊಂಡು ಹೊಸ ರೀತಿಯ ಅಪರಾಧಗಳನ್ನು ಎಸಗುತ್ತಿದ್ದಾರೆ. ಇದರ ಭಾಗವೇ ಡಿಜಿಟಲ್ ಅರೆಸ್ಟ್.

WHAT IS DIGITAL ARREST  Cyber crime  DIGITAL ARREST
ಸಾಂದರ್ಭಿಕ ಚಿತ್ರ (ETV Bharat)

ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ಅಪರಾಧಗಳು ಜಾಸ್ತಿ. ಎಷ್ಟೇ ಮುಂಜಾಗ್ರತೆ ವಹಿಸಿದರೂ ಯಾವುದೋ ಒಂದು ರೀತಿಯಲ್ಲಿ ಮೋಸ ಮಾಡಿ ಜೇಬಿಗೆ ಕತ್ತರಿ ಹಾಕುತ್ತಾರೆ. ಈ ಹಿಂದೆಲ್ಲಾ ಸೈಬರ್ ಅಪರಾಧಗಳು ಪಿನ್ ನಂಬರ್ ತಿಳಿದುಕೊಂಡು ಬ್ಯಾಂಕ್ ಖಾತೆಯಿಂದ ಹಣ ಎಗರಿಸುತ್ತಿದ್ದರು. ಒಟಿಪಿ ಮೂಲಕ ಹಣ ಕದಿಯುವುದು ಮತ್ತು ಅರೆಕಾಲಿಕ ಉದ್ಯೋಗದ ಆಫರ್‌ಗಳನ್ನು ನೀಡಿ ವಂಚಿಸುತ್ತಿದ್ದರು. ಈಗ ಇವೆಲ್ಲ ಹಳೆಯ ವಿಧಾನಗಳಾಗಿವೆ.

ಇದೀಗ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹೊಸ ರೀತಿಯಲ್ಲಿ ಮೋಸ ಮಾಡುತ್ತಿದ್ದಾರೆ. ಈ ಪೈಕಿ ಲೇಟೆಸ್ಟ್ ಡಿಜಿಟಲ್ ಅರೆಸ್ಟ್. ಇದರ ಮೂಲಕ ಜನರಿಂದ ಲಕ್ಷಗಟ್ಟಲೆ ಹಣ ಸುಲಿಗೆ ಮಾಡುತ್ತಿದ್ದಾರೆ.

ಡಿಜಿಟಲ್ ಬಂಧನ ಎಂದರೇನು?: ಸಾಮಾನ್ಯವಾಗಿ ಯಾರಾದರೂ ಅಪರಾಧ ಎಸಗಿದರೆ ದೂರಿನ ಮೇರೆಗೆ ನೇರವಾಗಿ ಪೊಲೀಸರು ಬಂದು ಬಂಧಿಸುತ್ತಾರೆ. ಆದರೆ, ಇಲ್ಲಿ ಸೈಬರ್ ಅಪರಾಧಿಗಳನ್ನು ಆನ್‌ಲೈನ್‌ನಲ್ಲಿ ಬಂಧಿಸಲಾಗುತ್ತದೆ. ಇದು ಹೇಗೆ?. ಸೈಬರ್ ಅಪರಾಧಿಗಳು ನಿಮಗೆ ವಿಡಿಯೋ ಕರೆ ಮಾಡುತ್ತಾರೆ. ತಾವು ಪೊಲೀಸ್ ಮತ್ತು ತನಿಖಾಧಿಕಾರಿಗಳೆಂದು ನಂಬಿಸುತ್ತಾರೆ. ಆ ನಂತರ ನೀವು ಬ್ಯಾಂಕ್ ಖಾತೆ, ಸಿಮ್ ಕಾರ್ಡ್, ಆಧಾರ್ ಕಾರ್ಡ್ ಇತ್ಯಾದಿಗಳನ್ನು ಅಕ್ರಮವಾಗಿ ಬಳಸಿದ್ದೀರಿ ಎಂದು ಬೆದರಿಕೆ ಹಾಕುತ್ತಾರೆ. ಇಲ್ಲವಾದಲ್ಲಿ ನಿಮ್ಮ ಹೆಸರಿನಲ್ಲಿ ಡ್ರಗ್ಸ್ ಸಿಕ್ಕಿದೆ ಎಂದೆಲ್ಲಾ ಹೇಳುತ್ತಾರೆ. ತನಿಖೆ ಮುಗಿಯುವವರೆಗೂ ವಿಡಿಯೋ ಕಾಲ್ ಕಟ್ ಮಾಡಲು ಅವಕಾಶವಿಲ್ಲ ಎನ್ನುತ್ತಾ ಹೆದರಿಸುತ್ತಾರೆ.

ಕೊನೆಗೆ, ಪ್ರಕರಣದಿಂದ ಹೊರಬರಬೇಕಾದರೆ ಹಣ ಕೊಡಬೇಕು. ಇಲ್ಲದಿದ್ದರೆ, ಜೀವಿತಾವಧಿಯನ್ನು ಜೈಲಿನಲ್ಲಿಯೇ ಕಳೆಯಬೇಕೆಂದು ಬೆದರಿಕೆ ಹಾಕಿದ್ದಾರೆ. ಇದನ್ನೆಲ್ಲ ಕೇಳುತ್ತಿರುವ ಸಂತ್ರಸ್ತರಿಗೆ ಏನು ಮಾಡಬೇಕೆಂದು ತೋಚುವುದಿಲ್ಲ. ಮೊದಲು ಆ ಸಮಸ್ಯೆಯಿಂದ ಹೊರಬರುವ ಆಸೆಯಲ್ಲಿ ಕೇಳಿದಷ್ಟು ಹಣ ಕೊಡುತ್ತಾರೆ. ಒಬ್ಬ ವ್ಯಕ್ತಿಯನ್ನು ಎಲ್ಲೂ ಹೋಗಲು ಬಿಡದೆ ಪರದೆಯ ಮುಂದೆ ಬಂಧಿಸಿ ದರೋಡೆ ಮಾಡುವ ವಿಧಾನವೇ ‘ಡಿಜಿಟಲ್ ಅರೆಸ್ಟ್​’.

ಈ ಹಿಂದಿನ ಸೈಬರ್ ಅಪರಾಧಗಳಿಗೆ ಹೋಲಿಸಿದರೆ, ಇದು ಸಂಪೂರ್ಣವಾಗಿ ವಿಭಿನ್ನ. ಇಂಥ ಹಗರಣಗಳ ಬಗ್ಗೆ ಜನರಿಗೆ ಹೆಚ್ಚು ತಿಳಿದಿಲ್ಲ. ಡಿಜಿಟಲ್ ಅರೆಸ್ಟ್​ ಅಪರಾಧಗಳನ್ನು ಮಾಡಲು ಸೈಬರ್ ಅಪರಾಧಿಗಳು ಸಾಮಾನ್ಯವಾಗಿ ಸ್ಕೈಪ್ ಆ್ಯಪ್ ಬಳಸುತ್ತಾರೆ. ಮೊದಲು ಫೋನ್ ಮಾಡಿ ನಿನ್ನ ಮೇಲೆ ಕೇಸುಗಳಿವೆ ಎಂದು ಬೆದರಿಸುತ್ತಾರೆ. ಮೇಲಾಧಿಕಾರಿ ನಂತರ ಮಾತನಾಡುತ್ತಾರೆ ಎಂದು ಸ್ಕೈಪ್ ಮೂಲಕವೇ ಹುಸಿ ತನಿಖೆ ನಡೆಸುತ್ತಾರೆ. ಆದಾಗ್ಯೂ, ಸ್ಕೈಪ್ ಇಂಟರ್ನೆಟ್‌​ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಿಂದ ಅಪರಾಧಿಗಳನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತದೆ. ನಕಲಿ ಇಮೇಲ್ ಐಡಿ ಬಳಸಿ ಅಪರಾಧ ಕೃತ್ಯಗಳನ್ನು ಎಸಗುತ್ತಾರೆ.

ಮುನ್ನೆಚ್ಚರಿಕೆ ಕ್ರಮಗಳು: ಸೈಬರ್ ಅಪರಾಧಿಗಳು ನಮ್ಮ ಭಯವನ್ನು ಅವಕಾಶವಾಗಿ ಪರಿವರ್ತಿಸುತ್ತಾರೆ. ಹಾಗಾಗಿ ವಂಚಕರು ನಿಮಗೆ ಕರೆ ಮಾಡಿದರೆ ಭಯಪಡದೆ ಉತ್ತರಿಸಿ. ನಿಜವಾಗಲೂ ನಾವು ತಪ್ಪು ಮಾಡಿದರೆ ಪೊಲೀಸರು ನೇರವಾಗಿ ನಮ್ಮ ಬಳಿ ಬಂದು ತನಿಖೆ ನಡೆಸುತ್ತಾರೆ. ದೆಹಲಿ, ಮುಂಬೈ ಮುಂತಾದ ಸ್ಥಳಗಳಿಗೆ ಸಂಬಂಧಿಸಿದಂತೆ ಯಾವುದೇ ಅಪರಾಧ ನಡೆದರೆ ಅಲ್ಲಿನ ಪೊಲೀಸರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಆರೋಪಿಯನ್ನು ಸ್ಥಳೀಯ ಠಾಣೆಗೆ ಕರೆಸಲಾಗುತ್ತದೆ. ಪೊಲೀಸರು ಯಾವತ್ತೂ ಸ್ಕೈಪ್ ಮತ್ತು ವಾಟ್ಸ್​ಆ್ಯಪ್​ನಲ್ಲಿ ವಿಚಾರಣೆ ನಡೆಸುವುದಿಲ್ಲ. ಇದನ್ನು ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಅಪರಿಚಿತ ಸಂಖ್ಯೆಗಳಿಂದ ಬೆದರಿಕೆ ಕರೆಗಳು ಬಂದರೆ, ಅನಗತ್ಯ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳಿಗೆ ಹೋಗದಿರುವುದು ಉತ್ತಮ ಎಂದು ತಜ್ಞರು ತಿಳಿಸಿದ್ದಾರೆ.

ABOUT THE AUTHOR

...view details