ETV Bharat / bharat

ವಿದ್ಯಾರ್ಥಿಗಳು, ಪೊಲೀಸರ ಮಧ್ಯೆ ಘರ್ಷಣೆ: ಪ್ರಶಾಂತ್ ಕಿಶೋರ್ ವಿರುದ್ಧ ಎಫ್​ಐಆರ್ - FIR AGAINST PRASHANT KISHOR

ವಿದ್ಯಾರ್ಥಿಗಳನ್ನು ಹಿಂಸೆಗೆ ಪ್ರಚೋದಿಸಿದ ಆರೋಪದ ಮೇಲೆ ಪ್ರಶಾಂತ್ ಕಿಶೋರ್ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್ (IANS)
author img

By ETV Bharat Karnataka Team

Published : Dec 30, 2024, 6:51 PM IST

ಪಾಟ್ನಾ: ಹಿಂಸಾತ್ಮಕ ಪ್ರತಿಭಟನೆಗಿಳಿಯುವಂತೆ ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ರಾಜಕೀಯ ತಂತ್ರಜ್ಞ ಹಾಗೂ ಜನ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ವಿರುದ್ಧ ಸೋಮವಾರ ಎಫ್​ಐಆರ್ ದಾಖಲಿಸಲಾಗಿದೆ. 70ನೇ ಬಿಪಿಎಸ್​ಸಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದ ಅಭ್ಯರ್ಥಿಗಳ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿರುವ ಅವರು, ಪೊಲೀಸರ ವಿರುದ್ಧ ಪ್ರತಿ ಎಫ್ಐಆರ್ ದಾಖಲಿಸುವುದಾಗಿ ಹೇಳಿದ್ದಾರೆ.

ಪ್ರತಿಭಟನಾ ನಿರತ ಅಭ್ಯರ್ಥಿಗಳ ಮೇಲೆ ಪೊಲೀಸರು ನಡೆಸಿದ ಲಾಠಿ ಪ್ರಹಾರವನ್ನು ಪ್ರಶ್ನಿಸಿ ನ್ಯಾಯಾಲಯ ಮತ್ತು ಮಾನವ ಹಕ್ಕುಗಳ ಆಯೋಗವನ್ನು ಸಂಪರ್ಕಿಸುವುದಾಗಿ ಕಿಶೋರ್ ಘೋಷಿಸಿದರು. ಪ್ರತಿಭಟನಾಕಾರರ ವಿರುದ್ಧ ಎಫ್ಐಆರ್ ದಾಖಲಿಸಿದ್ದಕ್ಕಾಗಿ ಅವರು ಸರ್ಕಾರವನ್ನು ಟೀಕಿಸಿದರು.

"ಲಾಠಿಚಾರ್ಜ್​ಗೆ ಆದೇಶಿಸಿದ ನಗರ ಪೊಲೀಸ್ ವರಿಷ್ಠಾಧಿಕಾರಿ (ಎಸ್​ಪಿ) ವಿರುದ್ಧ ನ್ಯಾಯಾಲಯ ಮತ್ತು ಮಾನವ ಹಕ್ಕುಗಳ ಆಯೋಗದಲ್ಲಿ ದೂರು ನೀಡಲಿದ್ದೇನೆ" ಎಂದು ಕಿಶೋರ್ ಹೇಳಿದರು. ಸಮವಸ್ತ್ರ ಅಥವಾ ಕುರ್ತಾ ಪೈಜಾಮಾ ಧರಿಸಿದ ಯಾರಿಗೂ ನಾನು ಹೆದರುವುದಿಲ್ಲವೆಂದು ಹೇಳಿದ ಕಿಶೋರ್, ಆಡಳಿತ ಮತ್ತು ರಾಜಕೀಯ ವ್ಯಕ್ತಿಗಳನ್ನು ಎದುರಿಸುವುದಾಗಿ ಸಂಕಲ್ಪ ಮಾಡಿದರು.

ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸುವುದು ಸೇರಿದಂತೆ ಐದು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಬಿಹಾರ ಮುಖ್ಯ ಕಾರ್ಯದರ್ಶಿ ಅಮೃತ್ ಲಾಲ್ ಮೀನಾ ಅವರಿಗೆ ಐದು ವಿದ್ಯಾರ್ಥಿಗಳ ನಿಯೋಗ ಅರ್ಜಿ ಸಲ್ಲಿಸಿದೆ. ಪ್ರಶಾಂತ್ ಕಿಶೋರ್ ವಿದ್ಯಾರ್ಥಿಗಳ ಈ ನಿಯೋಗದ ನೇತೃತ್ವ ವಹಿಸಿದ್ದರು. ಬೇಡಿಕೆಗಳನ್ನು ಈಡೇರಿಸದಿದ್ದರೆ, ಸರ್ಕಾರದ ಮೇಲೆ ಒತ್ತಡ ಹೇರಲು ಪಾಟ್ನಾದಲ್ಲಿ ನಡೆಯಲಿರುವ ಅನಿರ್ದಿಷ್ಟ ಧರಣಿಯ ನೇತೃತ್ವ ವಹಿಸುವುದಾಗಿ ಕಿಶೋರ್ ಹೇಳಿದ್ದಾರೆ.

ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್​​ ಘಟನೆಯಲ್ಲಿ ತಾನು ಭಾಗಿಯಾಗಿದ್ದೇನೆ ಎಂಬ ಆರೋಪಗಳನ್ನು ಕಿಶೋರ್ ನಿರಾಕರಿಸಿದರು. ತಾವು ಪ್ರತಿಭಟನಾ ಸ್ಥಳದಿಂದ ಹೊರಟ 45 ನಿಮಿಷಗಳ ನಂತರ ಈ ಘಟನೆ ನಡೆದಿದೆ ಎಂದು ಅವರು ಪ್ರತಿಪಾದಿಸಿದರು.

ತಾನು, ಆರತಿ ಮಿಶ್ರಾ ಮತ್ತು ಆನಂದ್ ಮಿಶ್ರಾ ಸೇರಿದಂತೆ 700 ವಿದ್ಯಾರ್ಥಿಗಳು ಹಾಗೂ ವ್ಯಕ್ತಿಗಳ ವಿರುದ್ಧ ದಾಖಲಾಗಿರುವ ಎಫ್ಐಆರ್ ಹಿಂಪಡೆಯಬೇಕೆಂದು ಅವರು ಒತ್ತಾಯಿಸಿದರು. ಪರೀಕ್ಷಾ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ ಕಿಶೋರ್, ಪ್ರಶ್ನೆ ಪತ್ರಿಕೆ ಸೋರಿಕೆಯಾದ ಬಾಪು ಕೇಂದ್ರ ಮಾತ್ರವಲ್ಲದೆ ಎಲ್ಲಾ ಕೇಂದ್ರಗಳಲ್ಲಿ ಬಿಪಿಎಸ್​ಸಿ ಪರೀಕ್ಷೆಯನ್ನು ರದ್ದುಗೊಳಿಸಬೇಕೆಂದು ಪುನರುಚ್ಚರಿಸಿದರು.

ಇದನ್ನೂ ಓದಿ : ಸಂದೇಶಖಾಲಿ ಪ್ರತಿಭಟನೆಗಳ ಹಿಂದೆ ಹಣದ ಆಟ: ಸಿಎಂ ಮಮತಾ ಶಂಕೆ - SANDESHKHALI MOVEMENT

ETV Bharat Logo

Copyright © 2025 Ushodaya Enterprises Pvt. Ltd., All Rights Reserved.