ಬೆಂಗಳೂರು (ಆನೇಕಲ್) : ಇಲ್ಲಿನ ಜಿಗಣಿಯ ಕೆರೆಯಲ್ಲಿ ಮೊಸಳೆಯೊಂದು ವಾರದಿಂದ ಪಟ್ಟಣದ ಜನರಿಗೆ ಕಾಣಿಸಿಕೊಳ್ಳುತ್ತಿದೆ. ಇದೀಗ ಅದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಮೊಸಳೆಯ ಇರುವಿಕೆ ಖಾತರಿಯಾಗಿದೆ.
ಎಂದಿನಂತೆ ಕೆರೆಯ ನೀರಿನ ಮರದ ತುಂಡಿನ ಮೇಲೆ ಮೊಸಳೆ ಮಲಗಿರುವುದು ಹಾಗೂ ನೀರಿನೊಳಗೆ ಮೊಸಳೆ ಮುಳುಗಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಕೂಡಲೇ ಎಚ್ಚೆತ್ತ ಜಿಗಣಿ ಪುರಸಭೆಯ ಮುಖ್ಯಾಧಿಕಾರಿ ರಾಜೇಶ್, ಮೊಸಳೆ ಈಜಾಡುವ ದೃಶ್ಯಗಳೊಂದಿಗೆ ಅರಣ್ಯಾಧಿಕಾರಿಗಳು, ವನ್ಯ ಜೀವಿ ಸಂರಕ್ಷಣಾ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಜಿಗಣಿ ಕೆರೆಯಲ್ಲಿ ನೀರಿನ ಜಂಬು ತುಂಬಿರುವುದರಿಂದ ಮೊಸಳೆ ನೀರಲ್ಲಿರುವುದು ಸಹಜವಾಗಿ ಕಾಣವುದಿಲ್ಲ. ಸೂಕ್ಷ್ಮವಾಗಿ ಗಮನಿಸಿದವರಿಗೆ ಮೊಸಳೆ ಕಾಣಿಸಿದೆ. ಹೀಗಾಗಿ, ಪುರಸಭೆಯಿಂದ ಕೆರೆಯ ಕಟ್ಟೆ ಅಕ್ಕಪಕ್ಕದಲ್ಲಿ ಹಸು, ಕರು, ಕುರಿ ಜಾನುವಾರುಗಳನ್ನು ಮೇಯಲು ಬಿಡದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ : ಯಾದಗಿರಿ: ಹಳ್ಳದಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ- ವಿಡಿಯೋ - CROCODILE SPOTTED