ಕರ್ನಾಟಕ

karnataka

ETV Bharat / bharat

ಕುಂಭಮೇಳ ಸೇರಿ 2025ರಲ್ಲಿ ನಡೆಯಲಿರುವ 5 ಪ್ರಮುಖ ಜಾಗತಿಕ ಘಟನಾವಳಿಗಳ ಮುನ್ನೋಟ - YEARENDER 2024

2025ರಲ್ಲಿ ನಡೆಯಲಿರುವ ಪ್ರಮುಖ ಘಟನಾವಳಿಗಳ ಮುನ್ನೋಟ ಇಲ್ಲಿದೆ.

ಕುಂಭಮೇಳ (ಸಂಗ್ರಹ ಚಿತ್ರ)
ಕುಂಭಮೇಳ (ಸಂಗ್ರಹ ಚಿತ್ರ) (ETV BHARAT)

By ETV Bharat Karnataka Team

Published : Dec 26, 2024, 6:42 PM IST

ಬೆಂಗಳೂರು: 2025 ರಲ್ಲಿ ನಡೆಯಲಿರುವ, ವಿಶ್ವದ ಗಮನ ಸೆಳೆಯಲಿರುವ 5 ಪ್ರಮುಖ ಘಟನಾವಳಿಗಳ ಬಗೆಗಿನ ಮಾಹಿತಿ ಇಲ್ಲಿದೆ. ಭಾರತದ ಕುಂಭಮೇಳವೂ ಜಗತ್ತಿನ ಗಮನ ಸೆಳೆದಿರುವುದು ವಿಶೇಷ. ಜೊತೆಗೆ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವುದು ಕೂಡ 2025 ರ ಮಹತ್ವದ ಘಟನೆಯಾಗಲಿದೆ. ಈ ಎಲ್ಲಾ ವಿಷಯಗಳ ಬಗ್ಗೆ ಒಂದು ಮುನ್ನೋಟ ಇಲ್ಲಿದೆ:

ಡೊನಾಲ್ಡ್ ಟ್ರಂಪ್ 2.0: ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಶ್ವಾಸಾರ್ಹ ಗೆಲುವಿನ ನಂತರ, ಡೊನಾಲ್ಡ್ ಟ್ರಂಪ್ ಜನವರಿ 20 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅದಕ್ಕೂ ಮುನ್ನ ಅವರು ತಮ್ಮ ಭವಿಷ್ಯದ ಕ್ಯಾಬಿನೆಟ್​ನಲ್ಲಿ ಸೇರ್ಪಡೆಯಾಗಲಿರುವ ಹಲವಾರು ನಾಮನಿರ್ದೇಶಿತರನ್ನು ಹೆಸರಿಸಿದ್ದಾರೆ.

ಕೊರೊನಾ ಲಸಿಕೆಗಳ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದ ರಾಬರ್ಟ್ ಎಫ್ ಕೆನಡಿ ಜೂನಿಯರ್ ಅವರನ್ನು ಆರೋಗ್ಯ ಕಾರ್ಯದರ್ಶಿಯಾಗಿ ಮತ್ತು ಎಲೋನ್ ಮಸ್ಕ್ ಅವರನ್ನು ಸರ್ಕಾರಿ ದಕ್ಷತಾ ಇಲಾಖೆಯ ಸಹ-ಮುಖ್ಯಸ್ಥರನ್ನಾಗಿ ಹೆಸರಿಸಿದ್ದು, ಟ್ರಂಪ್ ತಮ್ಮ ಎರಡನೇ ಅವಧಿಯು ಯುನೈಟೆಡ್ ಸ್ಟೇಟ್ಸ್ ಮತ್ತು ಜಗತ್ತಿನ ಪಾಲಿಗೆ ಹೇಗಿರಬಹುದು ಎಂಬ ಬಗ್ಗೆ ಒಂದು ಮುನ್ಸೂಚನೆ ನೀಡಿದ್ದಾರೆ.

ವಾಷಿಂಗ್ಟನ್​ನ ಯುಎಸ್ ಕ್ಯಾಪಿಟಲ್ ಮುಂದೆ ನಡೆಯಲಿರುವ ಪ್ರಮಾಣವಚನ ಸಮಾರಂಭದಲ್ಲಿ 82 ವರ್ಷದ ಜೋ ಬಿಡೆನ್ ಟ್ರಂಪ್​ಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ. ಟ್ರಂಪ್ ತಮ್ಮ ನಾಲ್ಕು ವರ್ಷಗಳ ಅವಧಿಯ ಅಂತ್ಯದ ವೇಳೆಗೆ ಇತಿಹಾಸದಲ್ಲಿ ಅತ್ಯಂತ ಹಿರಿಯ ಯುಎಸ್ ಅಧ್ಯಕ್ಷರಾಗಲಿದ್ದಾರೆ.

ಹವಾಮಾನ: 2025ನೇ ವರ್ಷವು ಜಗತ್ತಿನಾದ್ಯಂತೆ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ವರ್ಷವಾಗಲಿದೆಯೇ ಎಂದು ಕಾದು ನೋಡಬೇಕಿದೆ.

ಶೇ 30ರಷ್ಟು ಇಂಗಾಲ ಡೈ ಆಕ್ಸೈಡ್​ ಅನಿಲವನ್ನು ಹೊರಸೂಸುವ ಮೂಲಕ ಚೀನಾ ಜಗತ್ತಿನ ಅತಿದೊಡ್ಡ ಮಾಲಿನ್ಯಕಾರಕ ದೇಶವಾಗಿದೆ. ಒಟ್ಟಾರೆಯಾಗಿ 2025ರಲ್ಲಿ ಪಳೆಯುಳಿಕೆ ಇಂಧನಗಳ ಸುಡುವಿಕೆಯಿಂದ ಇಂಗಾಲದ ಡೈ ಆಕ್ಸೈಡ್ ಹೊರಸೂಸುವ ಪ್ರಮಾಣ ಸ್ವಲ್ಪ ಮಟ್ಟಿಗೆ ಮಾತ್ರ ಹೆಚ್ಚಾಗಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ವಿಶ್ವದಾದ್ಯಂತ ಕಲ್ಲಿದ್ದಲು, ತೈಲ ಮತ್ತು ಅನಿಲವನ್ನು ಸುಡುವುದರಿಂದ ಹೊರಸೂಸುವ ಒಟ್ಟಾರೆ ಇಂಗಾಲದ ಡೈಆಕ್ಸೈಡ್ ಮುಂದಿನ ಕೆಲ ವರ್ಷಗಳಲ್ಲಿ ಉತ್ತುಂಗಕ್ಕೇರಬಹುದು ಎಂದು ಗ್ಲೋಬಲ್ ಕಾರ್ಬನ್ ಪ್ರಾಜೆಕ್ಟ್​ನ ಗ್ಲೆನ್ ಪೀಟರ್ಸ್ ಹೇಳುತ್ತಾರೆ. ಈ ಇಂಗಾಲದ ಮಾಲಿನ್ಯವು ಹೆಚ್ಚುತ್ತಿರುವ ಅಪಾಯಕಾರಿ ಹವಾಮಾನ ಬದಲಾವಣೆಗೆ ಮುಖ್ಯ ಕಾರಣವಾಗಿದೆ.

ಈ ವಿಷಯದಲ್ಲಿ ವಿಶ್ವದ ದೇಶಗಳು ಸುಮ್ಮನಿರಲು ಸಾಧ್ಯವಿಲ್ಲ ಮತ್ತು ಇಂಗಾಲದ ತಟಸ್ಥತೆಯನ್ನು ಸಾಧಿಸಲು ತಮ್ಮ ಇಂಗಾಲ ಹೊರಸೂಸುವಿಕೆಯನ್ನು ತ್ವರಿತವಾಗಿ ಕಡಿಮೆ ಮಾಡಬೇಕು ಎಂದು ಇ 3 ಜಿ ಥಿಂಕ್ ಟ್ಯಾಂಕ್​ನ ಇಗ್ನಾಸಿಯೊ ಅರೋನಿಜ್ ವೆಲಾಸ್ಕೊ ಹೇಳಿದರು.

ಫುಟ್ ಬಾಲ್ ಮೇನಿಯಾ: ಕ್ರೀಡಾಸಕ್ತರಿಗೆ 2025ನೇ ವರ್ಷ ಒಂದಿಷ್ಟು ರೋಮಾಂಚಕಾರಿ ಆಗಿರಲಿದೆ. ಈ ಬೇಸಿಗೆಯಲ್ಲಿ ವಿಸ್ತೃತ 32-ಕ್ಲಬ್ ವಿಶ್ವಕಪ್ ಫುಟ್ ಬಾಲ್ ನಡೆಯಲಿದೆ. ಇದು ವಿಶೇಷವಾಗಿ ನಿರಂತರ ಫುಟ್​ ಬಾಲ್ ಋತುವಿನ ನಂತರ ನಡೆಯಲಿದೆ. 2026 ರಲ್ಲಿ ಮುಂದಿನ ವಿಶ್ವಕಪ್​ನಲ್ಲಿ ಇನ್ನೂ 16 ದೇಶಗಳು ಸೇರ್ಪಡೆಯಾಗಲಿವೆ. ಇದರ ಪರಿಣಾಮವಾಗಿ 64 ಪಂದ್ಯಗಳ ಬದಲು 104 ಪಂದ್ಯಗಳು ನಡೆಯಲಿವೆ.

2034 ರ ವಿಶ್ವಕಪ್ ಆತಿಥ್ಯ ವಹಿಸುತ್ತಿರುವ ಸೌದಿ ಅರೇಬಿಯಾ ಆಟಕ್ಕೆ ಹೆಚ್ಚಿನ ಹಣಕಾಸು ತುಂಬಲಿದೆ. ಇದು ಪರಿವರ್ತನಾತ್ಮಕ ಪರಿಣಾಮಗಳನ್ನು ಬೀರಲಿದೆ. ಪ್ರಸ್ತುತ ಆಟಗಾರರು, ಅಭಿಮಾನಿಗಳು ಮತ್ತು ಪಂಡಿತರೊಂದಿಗೆ ಪ್ರೀತಿ-ದ್ವೇಷದ ಸಂಬಂಧದಲ್ಲಿ ಸಿಲುಕಿರುವ ವಿಎಆರ್ ತಂತ್ರಜ್ಞಾನದ ನಿರಂತರ ಬಳಕೆಯು ವಿವಾದದ ಕಿಡಿ ಹೊತ್ತಿಸಬಹುದು.

ಕುಂಭಮೇಳ: ಜನವರಿ 13 ರಿಂದ ಫೆಬ್ರವರಿ ಅಂತ್ಯದವರೆಗೆ ಭಾರತದ ಪವಿತ್ರ ಗಂಗಾ ನದಿ ತೀರದಲ್ಲಿ ನಡೆಯುವ ಅದ್ಭುತ ಹಿಂದೂ ಉತ್ಸವದಲ್ಲಿ ಹತ್ತು ಮಿಲಿಯನ್ ಜನರು ಗುಲಾಬಿ ದಳಗಳು ಮತ್ತು ಪವಿತ್ರ ಬೂದಿಯನ್ನು ಸುರಿಯುವ ಮೂಲಕ ಭೂಮಿಯ ಮೇಲಿನ ಅತಿದೊಡ್ಡ ಸಭೆ ನಡೆಯಲಿದೆ.

ಯುನೆಸ್ಕೋದಿಂದ ಅಮೂರ್ತ ಸಾಂಸ್ಕೃತಿಕ ಪರಂಪರೆ ಎಂದು ವರ್ಗೀಕರಿಸಲ್ಪಟ್ಟಿರುವ ಕುಂಭ ಮೇಳ ಎಂದು ಕರೆಯಲ್ಪಡುವ ಮೆಗಾ ಉತ್ಸವವು ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುತ್ತದೆ. ಹಿಂದೂ ಧರ್ಮದ ಅತ್ಯಂತ ಪವಿತ್ರವೆಂದು ಪರಿಗಣಿಸಲಾದ ಗಂಗಾ ಮತ್ತು ಯಮುನಾ ನದಿಗಳ ನೀರಿನಲ್ಲಿ ನಾಲ್ಕು ಪವಿತ್ರ ಸ್ಥಳಗಳ ನಡುವೆ ಈ ಸ್ಥಳವಿದೆ. 2025 ರ ಕುಂಭಮೇಳವು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯಲಿದೆ. 2013ರಲ್ಲಿ ಈ ಉತ್ಸವದಲ್ಲಿ 120 ಮಿಲಿಯನ್ ಜನ ಪಾಲ್ಗೊಂಡಿದ್ದರು.

ಒಯಾಸಿಸ್ ಮತ್ತು ಬಿಟಿಎಸ್ ಪುನರಾಗಮನ:ಒಂದು ಕಡೆ, ಬ್ರಿಟ್ ಪಾಪ್ ನ ಹುಡುಗರು, ಮತ್ತೊಂದೆಡೆ ಕೆ-ಪಾಪ್ ನ ಹೊಸ ಮುಖದ ಡಾರ್ಲಿಂಗ್​​ಗಳು. ಒಯಾಸಿಸ್ ಮತ್ತು ಬಿಟಿಎಸ್ ಎರಡೂ 2025 ರಲ್ಲಿ ಮರಳಲು ಸಜ್ಜಾಗಿವೆ. ಇದು ಅವರ ಅಭಿಮಾನಿಗಳಿಗೆ ಸಂತೋಷ ತರುವುದು ಖಂಡಿತ. ಗಲ್ಲಾಘರ್ ಬ್ರದರ್ಸ್ ಲಿಯಾಮ್ ಮತ್ತು ನೋಯೆಲ್ ನೇತೃತ್ವದ ಒಯಾಸಿಸ್ 2009 ರಲ್ಲಿ 15 ವರ್ಷಗಳ ವಿಭಜನೆಯ ನಂತರ ಮತ್ತೆ ಒಟ್ಟಾಗಿ ಮರಳಲಿದೆ.

1990 ರ ದಶಕದಲ್ಲಿ ಪ್ರಮುಖ ಸ್ಥಾನಮಾನವನ್ನು ಗಳಿಸಿದ ಹಾಡುಗಳಾದ "ವಂಡರ್ ವಾಲ್" ಮತ್ತು "ಶಾಂಪೇನ್ ಸೂಪರ್ ನೋವಾ" ಹಾಡುಗಳನ್ನು ಹಾಡಿದ ಬ್ಯಾಂಡ್ ಬ್ರಿಟನ್ ಮತ್ತು ಐರ್ಲೆಂಡ್​ ಪ್ರವಾಸ ಕೈಗೊಳ್ಳಲಿದೆ. ನಂತರ ಇದು ಉತ್ತರ ಮತ್ತು ದಕ್ಷಿಣ ಅಮೆರಿಕಾಗೆ ಭೇಟಿ ನೀಡಲಿದೆ. ಈ ಪ್ರದರ್ಶನಗಳಿಗೆ ಅಧಿಕೃತ ವೆಬ್ ಸೈಟ್​ಗಳಿಂದ ಟಿಕೆಟ್​ಗಳನ್ನು ಖರೀದಿಸುವ ಪೈಪೋಟಿಯಲ್ಲಿ ಅನೇಕರಿಗೆ ಟಿಕೆಟ್ ಸಿಗಲಿಲ್ಲ. ಇಂಥವರು ಹೇಗಾದರೂ ಟಿಕೆಟ್ ಪಡೆಯಲೇಬೇಕೆಂದು ಬಯಸಿದ್ದರಿಂದ ಟಿಕೆಟ್ ಹಗರಣವೂ ನಡೆಯಿತು.

ದಕ್ಷಿಣ ಕೊರಿಯಾದಲ್ಲಿ ಈ ಬಾರಿ ವಿಭಿನ್ನ ಕಂಪನವಾಗಲಿದೆ. ಇಲ್ಲಿ ಅತ್ಯಂತ ಜನಪ್ರಿಯ ಕೆ-ಪಾಪ್ ಬಾಯ್ ಬ್ಯಾಂಡ್ ಬಿಟಿಎಸ್ ತನ್ನ ಸದಸ್ಯರು ತಮ್ಮ ಕಡ್ಡಾಯ ಮಿಲಿಟರಿ ಸೇವೆಯನ್ನು ಪೂರ್ಣಗೊಳಿಸಿದ ನಂತರ ಜೂನ್​ನಲ್ಲಿ ಮತ್ತೆ ಒಂದಾಗಲಿದ್ದಾರೆ. ಇದು ಲಕ್ಷಾಂತರ ಅಭಿಮಾನಿಗಳು ಮತ್ತು ಇಡೀ ಶತಕೋಟಿ ಡಾಲರ್ ಉದ್ಯಮವು ಕಾಯುತ್ತಿರುವ ಪುನರಾಗಮನವಾಗಿದೆ. ಮೆಗಾಸ್ಟಾರ್​ಗಳು ಪ್ರದರ್ಶನ ಮತ್ತು ಸಾರ್ವಜನಿಕ ಜೀವನಕ್ಕೆ ಮರಳುವುದರಿಂದ ದಕ್ಷಿಣ ಕೊರಿಯಾದ ಸಾಂಸ್ಕೃತಿಕ ರಫ್ತು ಇನ್ನೂ ಹೆಚ್ಚಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ : ರಾಮೋಜಿ ರಾವ್ ಪರಂಪರೆ: ವಿಶ್ವದ ಅತೀ ದೊಡ್ಡ ಚಿತ್ರನಗರಿಯ ಸ್ಥಾಪಕ, ದಿಗ್ಗಜ ಉದ್ಯಮಿಯ ಬದುಕಿನ ಹಿನ್ನೋಟ - THE RAMOJI RAO LEGACY

ABOUT THE AUTHOR

...view details