ಹೈದರಾಬಾದ್: ಭಾರತೀಯ ಸೇನೆಯ ಮೊದಲ ಕಮಾಂಡರ್ ಇನ್ ಚೀಫ್ ಆಗಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಅವರು ಸೇವೆಯಿಂದ ನಿವೃತ್ತಿಯಾದ ನೆನಪಿಗಾಗಿ ಪ್ರತಿವರ್ಷ ಜನವರಿ 14 ರಂದು ಸಶಸ್ತ್ರ ಪಡೆಗಳ ಹಿರಿಯ ಯೋಧರ ದಿನವನ್ನು(ಸಶಸ್ತ್ರ ಪಡೆಗಳ ವೆಟರನ್ಸ್ ಡೇ) ಆಚರಿಸಲಾಗುತ್ತದೆ. ರಾಷ್ಟ್ರದ ಸೇವೆಗಾಗಿ ಮತ್ತು ದೇಶವನ್ನು ರಕ್ಷಿಸಲು ಯೋಧರ ತ್ಯಾಗ ಮತ್ತು ಅಮೂಲ್ಯ ಕೊಡುಗೆಗಳನ್ನು ಸ್ಮರಿಸಲು ಸಶಸ್ತ್ರ ಪಡೆಗಳ ಹಿರಿಯ ಯೋಧರ ದಿನವನ್ನು ಪ್ರತಿವರ್ಷ ಆಚರಿಸುತ್ತಾ ಬರಲಾಗುತ್ತಿದೆ.
ಈ ದಿನದ ಮಹತ್ವ: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಅವರು ಭಾರತೀಯ ಸೇನೆಯ ಮೊದಲ ಕಮಾಂಡರ್ ಇನ್ ಚೀಫ್ ಹುದ್ದೆಯಿಂದ 1953 ಜನವರಿ 14 ರಂದು ನಿವೃತ್ತಿಯಾದರು. ಇಂತಹ ಹಿರಿಯ ಯೋಧರನ್ನು ಗೌರವಿಸುವ ಸಲುವಾಗಿ ಜನವರಿ 14ರಂದು ಹಿರಿಯ ಯೋಧರ ದಿನವನ್ನು ಆಚರಿಸಲು ನಿರ್ಧರಿಸಲಾಗಿದೆ. ಇಂದು ದೇಶದಾದ್ಯಂತ ವಿವಿಧ ನಗರಗಳಲ್ಲಿ ಅಂದು ನಿವೃತ್ತ ಯೋಧರ ಸಭೆಗಳು ನಡೆಯುತ್ತವೆ.
ಪ್ರತಿ ವರ್ಷ ನಿವೃತ್ತಿಯಾಗುವ ಸೈನಿಕರ ಎಷ್ಟು?: ದೇಶದಲ್ಲಿ ಅಂದಾಜು 25 ಲಕ್ಷ ಮಾಜಿ ಸೈನಿಕರಿದ್ದಾರೆ (ನಾಲ್ಕು ಲಕ್ಷ ಮೃತ ಸೈನಿಕರ ಪತ್ನಿಯರು ಸೇರಿದಂತೆ). ವಾರ್ಷಿಕವಾಗಿ ಸುಮಾರು 60 ಸಾವಿರ ಯೋಧರು ನಿವೃತ್ತಿಯಾಗುತ್ತಿದ್ದಾರೆ.
ಒಂದು ಶ್ರೇಣಿ, ಒಂದು ಪಿಂಚಣಿ ಯೋಜನೆ: 2015 ನವೆಂಬರ್ 7 ರಂದು ಒಂದು ಶ್ರೇಣಿ, ಒಂದು ಪಿಂಚಣಿ ಅನ್ನು ಜಾರಿಗೆ ತರಲಾಯಿತು. ಇದು ನಮ್ಮ ರಾಷ್ಟ್ರವನ್ನು ರಕ್ಷಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಯೋಧರು ಮತ್ತು ಮಾಜಿ ಸೇನಾ ಸಿಬ್ಬಂದಿಯ ಧೈರ್ಯ ಮತ್ತು ತ್ಯಾಗಗಳಿಗೆ ಗೌರವವನ್ನು ಸೂಚಿಸುತ್ತದೆ.
ಒಂದು ಶ್ರೇಣಿ, ಒಂದು ಪಿಂಚಣಿ (OROP) ಅನ್ನು ಜಾರಿ ನಿರ್ಧಾರ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ ಮತ್ತು ನಮ್ಮ ವೀರರಿಗೆ ಕೃತಜ್ಞತೆಯನ್ನು ಸಲ್ಲಿಸುವುದಾಗಿದೆ.
ಸಶಸ್ತ್ರ ಪಡೆಗಳ ಮಾಜಿ ಸೈನಿಕರಿಗೆ ಇರುವ ಯೋಜನೆಗಳು:
- ಎಕ್ಸ್ ಸರ್ವಿಸ್ಮೆನ್(ESM)ಕೊಲ್ ಲೋಡಿಂಗ್ ಅಂಡ್ ಟ್ರಾನ್ಸ್ಪೋರ್ಟೇಶನ್ ಸ್ಕೀಮ್
- ಕೊಲ್ ಟಿಪ್ಪರ್ ಅಟ್ಯಾಚ್ಮೆಂಟ್ ಸ್ಕೀಮ್ ಫಾರ್ ವಿಡೋಸ್ ಅಂಡ್ ಡಿಸೇಬಲ್ಡ್ ಎಕ್ಸ್ ಸರ್ವಿಸ್ಮೆನ್
- 8% ಕೋಟಾ ಯೋಜನೆಯಡಿ ತೈಲ ಉತ್ಪನ್ನ ಏಜೆನ್ಸಿಗಳನ್ನು ನಡೆಸಲು ಅರ್ಹತಾ ಪ್ರಮಾಣ ಪತ್ರದ ವಿತರಣೆ
- ಕಂಪನಿಯ ಮಾಲೀಕತ್ವದ ಮಳಿಗೆಗಳ ನಿರ್ವಹಣೆ (COCO)
- ಮದರ್ ಡೈರಿ ಹಾಲಿನ ಬೂತ್ ಗಳು ಮತ್ತು ಹಣ್ಣು ಮತ್ತು ತರಕಾರಿ (ಸಫಾಲ್) ಅಂಗಡಿಗಳ ಹಂಚಿಕೆ
- ಎನ್ಸಿಆರ್ನಲ್ಲಿ ಇಎಸ್ಎಂ (ಅಧಿಕಾರಿಗಳು)ಗಳಿಂದ ಸಿಎನ್ಜಿ ಸ್ಟೇಷನ್ ನಿರ್ವಹಣೆ
- ಎಲ್ಪಿಜಿ ವಿತರಣೆಗಾಗಿ ಅರ್ಹತಾ ಪ್ರಮಾಣಪತ್ರ ನೀಡಲಾಗುತ್ತದೆ.
- ಪೆಟ್ರೋಲ್ ಮತ್ತು ಡೀಸೆಲ್ ರಿಟೇಲ್ ಔಟ್ಲೆಟ್ ನಡೆಸಲು ಅರ್ಹತಾ ಪ್ರಮಾಣಪತ್ರದ ವಿತರಣೆ
- ಸೆಕ್ಯೂರಿಟಿ ಏಜನ್ಸಿ ಸ್ಕೀಮ್
- ತಾಂತ್ರಿಕ ಸೇವೆಗಳನ್ನು ಒದಗಿಸುವ ಯೋಜನೆ
ಇದನ್ನೂ ಓದಿ: ಜಮ್ಮು - ಕಾಶ್ಮೀರದಲ್ಲಿ ಹತರಾದ ಶೇ 60ರಷ್ಟು ಉಗ್ರರು ಪಾಕಿಸ್ತಾನಿಯರು: ಸೇನಾ ಮುಖ್ಯಸ್ಥ ಜನರಲ್ ದ್ವಿವೇದಿ
ಇದನ್ನೂ ಓದಿ: ರಾಷ್ಟ್ರೀಯ ಯುವ ದಿನ: ಸ್ವಾಮಿ ವಿವೇಕಾನಂದರ ಪರಂಪರೆಯ ಸ್ಮರಣೆ - ಇಂದಿನ ಮಹತ್ವ, ಇತಿಹಾಸ ತಿಳಿಯಿರಿ