ತ್ರಿಶೂರ್ (ಕೇರಳ): ರಷ್ಯಾ ಸೇನೆ ವಿರುದ್ಧ ಉಕ್ರೇನ್ ನಡೆಸಿದ ಶೆಲ್ ದಾಳಿಗೆ ತ್ರಿಶೂರ್ ಮೂಲದ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ ಎಂಬ ಮಾಹಿತಿ ಮೃತನ ಸಂಬಂಧಿಕರಿಗೆ ಸಿಕ್ಕಿದೆ. ಕೇರಳದ ಕಲ್ಲೂರು ನೈರಂಗಡಿ ನಿವಾಸಿ ಸಂದೀಪ್ (36) ಮೃತ ವ್ಯಕ್ತಿ. ಸಂದೀಪ್ ಅವರ ಭಾಗವಾಗಿದ್ದ ರಷ್ಯಾದ ಸೇನಾ ಘಟಕವನ್ನು ಗುರಿಯಾಗಿಸಿಕೊಂಡು ಉಕ್ರೇನ್ ದಾಳಿ ನಡೆಸಿದೆ. ಸಂದೀಪ್ ಸಾವಿನ ಮಾಹಿತಿಯು ರಷ್ಯಾದ ಮಲಯಾಳಿ ಸಂಘಟನೆಗಳ ವಾಟ್ಸಪ್ ಸಂದೇಶಗಳ ಮೂಲಕ ಬೆಳಕಿಗೆ ಬಂದಿದೆ.
ರಷ್ಯಾದ ಮಲಯಾಳಿ ಅಸೋಸಿಯೇಷನ್ ಸದಸ್ಯರು ಆಸ್ಪತ್ರೆಯಲ್ಲಿ ಮೃತದೇಹವನ್ನು ಗುರುತಿಸಿದ್ದಾರೆ ಮತ್ತು ನಂತರ ಕಲ್ಲೂರಿನ ಸಂದೀಪ್ ಮನೆಗೆ ಸಂದೇಶವನ್ನು ರವಾನಿಸಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ರಷ್ಯಾದ ಮಲಯಾಳಿ ಸಂಘಟನೆಗಳ ಪ್ರಕಾರ, ಸೋಮವಾರ(ಇಂದು) ರಾಯಭಾರ ಕಚೇರಿಯಿಂದ ಅಧಿಕೃತ ಮಾಹಿತಿಯನ್ನು ನಿರೀಕ್ಷಿಸಲಾಗಿದೆ. ಸಂದೀಪ್ ಸೇರಿದಂತೆ 12 ಸದಸ್ಯರಿದ್ದ ರಷ್ಯಾದ ಗಸ್ತು ಘಟಕದ ಮೇಲೆ ಉಕ್ರೇನ್ ಸೇನೆಯಿಂದ ದಾಳಿ ನಡೆದಿದೆ ಎಂಬ ಮಾಹಿತಿಯನ್ನು ಮೃತನ ಸಂಬಂಧಿಕರು ಸ್ವೀಕರಿಸಿದ್ದಾರೆ.