ನವದೆಹಲಿ: ತಿರುಮಲ ತಿರುಪತಿ ದೇವಸ್ಥಾನಕ್ಕೆ "ತುಪ್ಪ" ಪೂರೈಕೆ ಮಾಡುವಾಗ ಎಫ್‌ಎಸ್‌ಎಸ್‌ಎಐ ಮಾನದಂಡಗಳನ್ನು ಪೂರೈಸದ ಕಾರಣಕ್ಕಾಗಿ ಎಂ/ಎಸ್ ಎಆರ್ ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್‌ಗೆ ಕೇಂದ್ರ ಆರೋಗ್ಯ ಸಚಿವಾಲಯ ಶೋಕಾಸ್ ನೋಟಿಸ್ ನೀಡಿದೆ.
ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಪರವಾನಗಿಯನ್ನು ಏಕೆ ಅಮಾನತುಗೊಳಿಸಬಾರದು ಎಂದು ಕೇಳಿದ್ದು, ಆರೋಪಗಳಿಗೆ ಸಂಬಂಧಿಸಿದಂತೆ ಉತ್ತರ ನೀಡುವಂತೆ ಕಂಪನಿಗೆ ನೀಡಿದ ನೋಟಿಸ್‌ನಲ್ಲಿ ಕೇಳಲಾಗಿದೆ. ಆರೋಗ್ಯ ಇಲಾಖೆ ನೀಡಿರುವ ನೋಟಿಸ್ನ ಪ್ರತಿ ಈಟಿವಿ ಭಾರತಕ್ಕೂ ಲಭ್ಯವಾಗಿದೆ.
ಸಚಿವಾಲಯವು ಕಂಪನಿಯಿಂದ ಸೆಪ್ಟೆಂಬರ್ 23 ರೊಳಗೆ ಉತ್ತರವನ್ನು ಕೇಳಿದ್ದು, ಈ ಅವಧಿಯಲ್ಲಿ ಉತ್ತರ ನೀಡಲು ವಿಫಲವಾದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ, 2006 ಮತ್ತು ಅದರ ಅಡಿ ಮಾಡಿದ ನಿಯಮಗಳ ಪ್ರಕಾರ ಸೂಕ್ತ ಕ್ರಮಗಳನ್ನು ಪ್ರಾರಂಭಿಸಲಾಗುವುದು ಎಂದು ನೋಟಿಸ್‌ನಲ್ಲಿ ಇದೇ ವೇಳೆ, ಎಚ್ಚರಿಕೆ ಕೂಡಾ ನೀಡಲಾಗಿದೆ.
ಕಾಯಿದೆಯ ಪ್ರಕಾರ, ಎಲ್ಲ ನಿಬಂಧನೆಗಳನ್ನು ಎಲ್ಲ ಸಮಯದಲ್ಲೂ ನಿರ್ವಾಹಕರು ಅನುಸರಿಸಬೇಕು. M/S AR ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್‌ಗೆ FSSAI ಕೇಂದ್ರೀಯ ಪರವಾನಗಿ ಸಂಖ್ಯೆ 10014042001610 ಅನ್ವಯ ಅನುಮತಿ ಪಡೆದುಕೊಂಡಿದೆ. ಈ ಪರವಾನಗಿಯು ಜೂನ್ 1, 2029 ರವರೆಗೆ ಮಾನ್ಯವಾಗಿರುತ್ತದೆ ಎಂದು ಸಚಿವಾಲಯ ತಿಳಿಸಿದೆ.
ದಿ ಡೈರೆಕ್ಟರ್ ಇನ್‌ಸ್ಟಿಟ್ಯೂಟ್ ಆಫ್ ಪ್ರಿವೆಂಟಿವ್ ಮೆಡಿಸಿನ್, ಮಂಗಳಗಿರಿ (ಆಂಧ್ರಪ್ರದೇಶ), 10/5C, ಮಧುರೈ ರಸ್ತೆ, ಬೇಗಂಪುರ ಪೋಸ್ಟ್, ದಿಂಡಿಗಲ್ ಬ್ಲಾಕ್, ತಮಿಳುನಾಡು-624002 ರಲ್ಲಿ ನೆಲೆಗೊಂಡಿರುವ ಸಂಸ್ಥೆಯು ಒಂದು ಎಂದು ಸಚಿವಾಲಯ ತಿಳಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಟಿಟಿಡಿಗೆ ತುಪ್ಪದ ಪೂರೈಕೆ ಮಾಡುತ್ತಿತ್ತು.
ಮಾಹಿತಿಯ ಪ್ರಕಾರ, ಟಿಟಿಡಿಯ ತುಪ್ಪ ಖರೀದಿ ಸಮಿತಿಯು ಗುಜರಾತ್‌ನ ಆನಂದ್‌ನಲ್ಲಿರುವ NDDB CALF ಲ್ಯಾಬ್‌ಗೆ ಪರೀಕ್ಷೆಗಾಗಿ ಸರಬರಾಜು ಮಾಡಿದ ಎಲ್ಲ ಮಾದರಿಗಳನ್ನು ಕಳುಹಿ ಪರೀಕ್ಷೆಗೆ ಒಳಪಡಿಸಿತ್ತು. ವಿಶ್ಲೇಷಣೆಯ ನಂತರ, ನಿಮ್ಮ ಸಂಸ್ಥೆಯ M/s AR ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್‌ನ ಮಾದರಿಯು ನಿಯತಾಂಕಗಳನ್ನು ಪೂರೈಸಲು ವಿಫಲವಾಗಿದೆ ಮತ್ತು ನಿಮ್ಮ ಸಂಸ್ಥೆಯನ್ನು EO, TTD ಕಪ್ಪುಪಟ್ಟಿಗೆ ಸೇರಿಸಿದೆ ಎಂದು ಸಚಿವಾಲಯ ತಿಳಿಸಿದೆ.
ಗುಣಮಟ್ಟವನ್ನು ಪೂರೈಸದ ಡೈರಿಯಿಂದ ತಯಾರಿಸಿದ "ತುಪ್ಪ" ಉತ್ಪನ್ನ ಅನುಸರಣೆಗೆ ಅನುಗುಣವಾಗಿಲ್ಲ ಎಂದು ಅದು ಹೇಳಿದೆ, ಇದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ, 2006, ನಿಯಮಗಳು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.