ETV Bharat / entertainment

ಇಂದು ತೆರೆಕಾಣಬೇಕಿದ್ದ "ಸಂಜು ವೆಡ್ಸ್ ಗೀತಾ 2" ಮುಂದೂಡಿಕೆ: ಹೊಸ ಬಿಡುಗಡೆ ದಿನಾಂಕ? - SANJU WEDS GEETHA 2

ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕಿದ್ದ "ಸಂಜು ವೆಡ್ಸ್ ಗೀತಾ 2" ರಾಜ್ಯ ಮಾತ್ರವಲ್ಲದೇ ವಿದೇಶಗಳಲ್ಲೂ ಇಂದು ಅದ್ದೂರಿಯಾಗಿ ಬಿಡುಗಡೆಯಾಗಬೇಕಿತ್ತು. ಆದ್ರೆ ಸಿನಿಮಾ ಮುಂದೂಡಿಕೆ ಆಗಿದೆ.

Sanju Weds Geetha 2
"ಸಂಜು ವೆಡ್ಸ್ ಗೀತಾ 2" ಮುಂದೂಡಿಕೆ (Photo: ETV Bharat)
author img

By ETV Bharat Entertainment Team

Published : 4 hours ago

ಶಿಡ್ಲಘಟ್ಟದ ರೇಶ್ಮೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಜತೆಗೊಂದು ಪ್ರೇಮ್​ಕಹಾನಿ ಹೊತ್ತು ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ "ಸಂಜು ವೆಡ್ಸ್ ಗೀತಾ 2" ಕೊನೆ ಕ್ಷಣದಲ್ಲಿ ತನ್ನ ಬಿಡುಗಡೆಯನ್ನು ಮುಂದೂಡಿದೆ. 2025ರ ಚಂದನವನದ ಅತ್ಯಂತ ಬಹುನಿರೀಕ್ಷಿತ ಚಿತ್ರವಾಗಿ ಗುರುತಿಸಿಕೊಂಡಿದ್ದ "ಸಂಜು ವೆಡ್ಸ್ ಗೀತಾ 2" ಕೊನೆ ಕ್ಷಣದಲ್ಲಿ ತನ್ನ ರಿಲೀಸ್​ ಟೇಟ್​ ಅನ್ನು ಮುಂದೂಡಿದ್ದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಅದಾಗ್ಯೂ, ಸಿನಿಮಾ ಗೆಲ್ಲಬೇಕು, ಸೂಕ್ತ ಕಾರಣಗಳಿಂದ ಮುಂದೂಡಿಕೆಯಾಗಿರಬಹುದು ಎಂದು ಅಭಿಮಾನಿಗಳು ಅಂದಾಜಿಸತೊಡಗಿದ್ದಾರೆ.

ಕಳೆದ ರಾತ್ರಿ ಚಿತ್ರದ ನಾಯಕ ನಟ ಶ್ರೀನಗರ ಕಿಟ್ಟಿ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ನಲ್ಲಿ ಪೋಸ್ಟ್ ಶೇರ್ ಮಾಡಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದ ಸಿನಿಮಾ ರಾಜ್ಯ ಮಾತ್ರವಲ್ಲದೇ ವಿದೇಶಗಳಲ್ಲೂ ಇಂದು ಅದ್ದೂರಿಯಾಗಿ ಬಿಡುಗಡೆಯಾಗಬೇಕಿತ್ತು. ಆದ್ರೆ ಸಿನಿಮಾ ಮುಂದೂಡಿಕೆ ಆಗಿದ್ದು, ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಪೋಸ್ಟರ್​ನಲ್ಲಿ ತಿಳಿಸಿದ್ದಾರೆ. ಹಾಗೇ ಅಭಿಮಾನಿಗಳೂ ಸೇರಿದಂತೆ ಸಿನಿಪ್ರಿಯರಲ್ಲೂ ವಿಳಂಬಕ್ಕೆ ಕ್ಷಮೆಯಾಚಿಸಿದ್ದಾರೆ.

ಚಿತ್ರಕ್ಕೆ ನಾಗಶೇಖರ್ ಆ್ಯಕ್ಷನ್​ ಕಟ್ ಹೇಳಿದ್ದಾರೆ. ಚಂದನವನದಲ್ಲಿ ತಮ್ಮದೇ ಆದ ಬೇಡಿಕೆ ಹೊಂದಿರುವ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಶಿಡ್ಲಘಟ್ಟದಿಂದ ಶುರುವಾಗೋ ಸಿನಿಮಾ ಸ್ವಿಟ್ಜರ್​ಲ್ಯಾಂಡ್​ವರೆಗೆ ಸಾಗಲಿದ್ದು, ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಬ್ಯಾನರ್​​ ಅಡಿಯಲ್ಲಿ ಚಲವಾದಿ ಕುಮಾರ್ ನಿರ್ಮಿಸಿದ್ದಾರೆ. ಸಿನಿಮಾ ಮೇಲೆ ಅಭಿಮಾನಿಗಳು ಈಗಾಗಲೇ ಸಾಕಷ್ಟು ಕುತೂಹಲ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: 'ಸಂಜು ವೆಡ್ಸ್ ಗೀತಾ 2 ಬಿಡುಗಡೆಯಾಗುತ್ತಿರುವುದು ಗೊತ್ತಿರಲಿಲ್ಲ': ಮದುವೆ, ಸಿನಿಮಾ, ರಾಜಕೀಯದ ಬಗ್ಗೆ ರಮ್ಯಾ ಮಾತು​​

ಸಂಜು ವೆಡ್ಸ್ ಗೀತಾ-2 ಕಥೆಯ ಕ್ರೆಡಿಟ್ ಸುದೀಪ್​​​ಗೇನೆ ಸಲ್ಲುತ್ತದೆ: ಸಿನಿಮಾ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ್ದ ನಿರ್ದೇಶಕ ನಾಗಶೇಖರ್, ರೇಶ್ಮೆ ಬೆಳೆಗಾರರ ವಿಷಯದೊಂದಿಗೆ ಪ್ರೇಮ್​​ ಕಹಾನಿಯೂ ಸಾಗುತ್ತದೆ. ಮಾಣಿಕ್ಯ ಚಿತ್ರೀಕರಣದ ಸಂದರ್ಭ ಚಿತ್ರದ ಎಳೆಯನ್ನು ಸುದೀಪ್ ಅವರು ಕೊಟ್ಟಿದ್ದರು. ಇಂಥ ಕಥೆಗಳನ್ನು ನೀವು ಚೆನ್ನಾಗಿ ಹ್ಯಾಂಡಲ್ ಮಾಡುತ್ತೀರೆಂದು ಹೇಳಿ ನನಗೆ ಜವಾಬ್ದಾರಿ ವಹಿಸಿದ್ದರು. ಹಾಗಾಗಿ ಕಥೆಯ ಕ್ರೆಡಿಟ್ ಸುದೀಪ್ ಅವರಿಗೇನೇ ಸಲ್ಲುತ್ತದೆ ಎಂದಿದ್ದರು. ಅಲ್ಲದೇ ಪ್ರಚಾರದ ಸಂದರ್ಭ ಸಿನಿಮಾದ ಸುಮಧುರ ಹಾಡೊಂದನ್ನು ಅನಾವರಣಗೊಳಿಸುವ ಮೂಲಕ ಅಭಿನಯ ಚಕ್ರವರ್ತಿ ಚಿತ್ರತಂಡಕ್ಕೆ ಸಾಥ್ ನೀಡಿದ್ದರು.

ಇದನ್ನೂ ಓದಿ: ಶಿಡ್ಲಘಟ್ಟದಿಂದ ಸ್ವಿಟ್ಜರ್​ಲ್ಯಾಂಡ್​ವರೆಗೆ: 'ಸಂಜು ವೆಡ್ಸ್ ಗೀತಾ 2' ಕಥೆ ಕೊಟ್ಟಿದ್ದು ಸುದೀಪ್

ಶಿಡ್ಲಘಟ್ಟದ ರೇಶ್ಮೆ ಬೆಳೆಗಾರ ಸಂಜು ಪಾತ್ರದಲ್ಲಿ ನಟ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದು, ಗೀತಾ ಪಾತ್ರಕ್ಕೆ ರಚಿತಾ ರಾಮ್ ಜೀವ ತುಂಬಿದ್ದಾರೆ. ಶಿಡ್ಲಘಟ್ಟದಲ್ಲಿ ಅತಿ ಹೆಚ್ಚು ರೇಶ್ಮೆ ಬೆಳೆಯಲಾಗುತ್ತದೆ. ಆದ್ರೆ ರೈತರಿಗೆ ಸೂಕ್ತ ಮನ್ನಣೆ ಸಿಗೋದಿಲ್ಲ ಅನ್ನೋ ಎಳೆಯ ಸುತ್ತ ಕಥೆ ಹೆಣೆಯಲಾಗಿದೆ. ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಸರಿಸುಮಾರು 10 ಸುಂದರ ಲೊಕೇಶನ್‌ಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.