ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ದಟ್ಟ ಮಂಜು ಮುಸುಕಿದ ವಾತಾವರಣ ಮುಂದುವರೆದಿದ್ದು, ಶುಕ್ರವಾರ ಶೂನ್ಯ ವೀಕ್ಷಣಾ ಸಾಮರ್ಥ್ಯ ದಾಖಲಾಗಿದೆ. ಇದರ ಪರಿಣಾಮವಾಗಿ, ವಿಮಾನ ಹಾಗೂ ರೈಲು ಸಂಚಾರ ಬಂದ್ ಆಗಿದೆ. ಭಾರತೀಯ ಹವಾಮಾನ ಇಲಾಖೆ ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನ ಸೇರಿದಂತೆ ಉತ್ತರ ಭಾರತದ ಹಲವೆಡೆ ಸಾಧಾರಣದಿಂದ ದಟ್ಟ ಮಂಜಿನ ವಾತಾವರಣ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಜಾಲತಾಣದ ಪ್ರಕಾರ, ದೆಹಲಿಯಲ್ಲಿ ಇಂದು ಬೆಳಗ್ಗೆ 6ಕ್ಕೆ ವಾಯು ಗುಣಮಟ್ಟ ಸೂಚ್ಯಂಕ 408 ದಾಖಲಾಗುವ ಮೂಲಕ ವಾಯುಮಾಲಿನ್ಯ ಕಳಪೆ ವರ್ಗದಲ್ಲಿದೆ. ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಆವರಿಸಿದ ಹಿನ್ನೆಲೆಯಲ್ಲಿ ವಿಮಾನ ಹಾರಾಟದ ಮೇಲೆ ಪರಿಣಾಮ ಬೀರಿದೆ.
#WATCH | Visibility reduced to zero as a blanket of dense fog witnessed in parts of Delhi-NCR
— ANI (@ANI) January 10, 2025
(Visuals from DND area) pic.twitter.com/90MRojqE0H
ಫ್ಲೈಟ್ರಾಡರ್24 ವಿಮಾನಯಾನ ವೆಬ್ಸೈಟ್ ಪ್ರಕಾರ, ವಿಮಾನಗಳು ಸರಿಸುಮಾರು 41 ನಿಮಿಷ ತಡವಾಗಿ ಕಾರ್ಯಾಚರಣೆ ಮಾಡಿವೆ. ಕಳೆದ ವಾರವೂ ಕೂಡ ಉತ್ತರ ಭಾರತದಲ್ಲಿ ದಟ್ಟ ಮಂಜಿನ ವಾತಾವರಣಲಿತ್ತು. ಅನೇಕ ವಿಮಾನ ಮತ್ತು ರೈಲು ಸೇವೆಯಲ್ಲಿ ಅಸ್ತವ್ಯಸ್ತವಾಗಿತ್ತು.
ದೆಹಲಿ ತಾಪಮಾನ: ದೆಹಲಿಯಲ್ಲಿ ಕನಿಷ್ಠ ತಾಪಮಾನ 6 ಡಿಗ್ರಿ ಸೆಲ್ಸಿಯಸ್ ಇದ್ದು, ಗರಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಇದೆ. ವಾಯು ಗುಣಮಟ್ಟವನ್ನು ಅವಲೋಕಿಸಿ, 3ನೇ ಹಂತದ ಜಿಆರ್ಎಪಿ ನೀತಿಯನ್ನು ಮರು ಜಾರಿ ಮಾಡಿದೆ.
ಇದನ್ನೂ ಓದಿ: 1 ರೂಪಾಯಿ ಕಾನ್ವೆಂಟ್ ಶಾಲೆ : ಮಕ್ಕಳಿಗೆ ಪುಸ್ತಕ, ಸಮವಸ್ತ್ರ, ಶೂ ಉಚಿತ!