ಹೈದರಾಬಾದ್:ದೇಶದ ಅತಿ ಶ್ರೀಮಂತ ದೇಗುಲವಾಗಿರುವ ತಿರುಮಲ ತಿರುಪತಿಯಲ್ಲಿ ವರ್ಷದಲ್ಲಿ 450ಕ್ಕೂ ಹೆಚ್ಚು ಹಬ್ಬಗಳನ್ನು ಸಂಭ್ರಮದಲ್ಲಿ ಆಚರಿಸಲಾಗುವುದು. ಅದರಲ್ಲಿ ತಿರುಪತಿ ಬ್ರಹ್ಮೋತ್ಸವ ವಿಶೇಷವಾಗಿದೆ. 9 ದಿನಗಳ ಕಾಲ ತಿರುಪತಿಯ ತಿರುಮಲದಲ್ಲಿ ನಡೆಯುವ ಶ್ರೀವಾರಿ ಬ್ರಹ್ಮೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುವುದು. ಈ ಬಾರಿ ಅಕ್ಟೋಬರ್ 4 ರಿಂದ 12ರವರೆಗೆ ಅದ್ದೂರಿ ಬ್ರಹ್ಮೋತ್ಸವ ಆಚರಿಸಲಾಗುತ್ತಿದೆ. ಈ ಬ್ರಹ್ಮೋತ್ಸವವನ್ನು ಅಕ್ಟೋಬರ್ 3 ರಂದು ಅಂಕುರಾರ್ಪಣದೊಂದಿಗೆ ಆರಂಭಿಸಲಾಗುವುದು.
ಈ ಬ್ರಹ್ಮೋತ್ಸವ ಆಚರಣೆಯಲ್ಲಿ ನಿತ್ಯ ಬೆಳಗ್ಗೆ 8ರಿಂದ 10ರವರೆಗೆ ಹಾಗೂ ಸಂಜೆ 7 ರಿಂದ 9ರವರೆಗೆ (ಅಕ್ಟೋಬರ್ 4 ಹೊರತುಪಡಿಸಿ) ದೇವರಿಗೆ ವಾಹನ ಸೇವೆ ನಡೆಸಲಾಗುವುದು. ಈ ವಾಹನ ಸೇವೆಯ ದಿನಚರಿಯ ಕುರಿತು ಇಲ್ಲಿದೆ ಮಾಹಿತಿ.
ಅಕ್ಟೋಬರ್ 4ರಂದು ಶುಕ್ರವಾರ ಸಂಜೆ 05:45 ರಿಂದ 6:00 ರವರೆಗೆ ಧ್ವಜಾರೋಹಣ. ರಾತ್ರಿ 9ರಿಂದ 11ರವರೆಗೆ ಪೆದ್ದ ಶೇಷ ವಾಹನ
ಅಕ್ಟೋಬರ್ 5ರಂದು ಶನಿವಾರ ಬೆಳಗ್ಗೆ 8 ರಿಂದ 10ರವರೆಗೆ ಚಿಣ್ಣ ಶೇಷ ಮಧ್ಯಾಹ್ನ 1ರಿಂದ 3 ಸ್ನಪನಮ್ ಸಂಜೆ 7 ರಿಂದ 9 ಹಂಸ
ಅಕ್ಟೋಬರ್ 6ರ ಭಾನುವಾರದಂದು ಬೆಳಗ್ಗೆ 8 ರಿಂದ 10 ಸಿಂಹ ಮಧ್ಯಾಹ್ನ 1ರಿಂದ 3 ಸ್ನಪನಮ್ ಸಂಜೆ 7 ರಿಂದ 9 ಮುತ್ಯಾಪು ಪಾಂಡಿರಿ
ಅಕ್ಟೋಬರ್ 7ರ ಸೋಮವಾರ ಬೆಳಗ್ಗೆ 8 ರಿಂದ 10ರವರೆಗೆ ಕಲ್ಪವೃಕ್ಷ ಮಧ್ಯಾಹ್ನ 1ರಿಂದ 3 ಸ್ನಪನಮ್ ಸಂಜೆ 7 ರಿಂದ 9 ಸರ್ವ ಭೂಪಾಲ
ಅಕ್ಟೋಬರ್ 8ರಂದು ಮಂಗಳವಾರ ಬೆಳಗ್ಗೆ 8 ರಿಂದ 10ರವರೆಗೆ ಮೋಹಿನಿ ಅವತಾರ ಸಂಜೆ 6.30ರಿಂದ 11.30 ಗರುಡ ವಾಹನ
ಅಕ್ಟೋಬರ್ 9ರ ಬುಧವಾರ ಬೆಳಗ್ಗೆ 8 ರಿಂದ 10ರವರೆಗೆ ಹನುಮಂತ ಸಂಜೆ 4 ರಿಂದ 7 ಚಿನ್ನದ ರಥ ಸಂಜೆ 7 ರಿಂದ 9 ಗಜ ವಾಹನ
ಅಕ್ಟೋಬರ್ 10ರ ಗುರುವಾರ ಬೆಳಗ್ಗೆ 8 ರಿಂದ 10ರವರೆಗೆ ಸೂರ್ಯಪ್ರಭ ಸಂಜೆ 7 ರಿಂದ 10 ಚಂದ್ರಪ್ರಭ
ಅಕ್ಟೋಬರ್ 11 ಶುಕ್ರವಾರ ಬೆಳಗ್ಗೆ 7 ರಿಂದ ರಥೋತ್ಸವ ಸಂಜೆ 7 ರಿಂದ 9 ಅಶ್ವ ವಾಹನ
ಅಕ್ಟೋಬರ್ 12 ಶನಿವಾರ ಬೆಳಗ್ಗೆ 6 ರಿಂದ 9 ಚಕ್ರ ಸ್ನಾನ ಸಂಜೆ 8.30 ರಿಂದ 10.30 ಧ್ವಜಾರೋಹಣ
ವಾರ್ಷಿಕ ಬ್ರಹ್ಮೋತ್ಸವದಂದು ಎರಡು, ಮೂರು ಮತ್ತು ನಾಲ್ಕನೇ ದಿನಗಳಲ್ಲಿ ರಂಗನಾಯಕುಲ ಮಂಟಪದಲ್ಲಿ ಶ್ರೀ ಮಲಯಪ್ಪ ಸ್ವಾಮಿ, ಶ್ರೀದೇವಿ ಮತ್ತು ಭೂದೇವಿಯ ಉತ್ಸವ ದೇವತೆಗಳಿಗೆ ಸ್ನಪನ ತಿರುಮಂಜನವನ್ನು ಮಾಡಲಾಗುತ್ತದೆ.
ತಿರುಮಲ ದೇವಸ್ಥಾನದ ಸಂಪೂರ್ಣ ನೋಟ (ಟಿಟಿಡಿ) ಬ್ರಹ್ಮೋತ್ಸವ ಅಂಕುರಾರ್ಪಣ:ಸಾಂಪ್ರದಾಯಿಕ, ಅಂಕುರಾರೋಪಣಂ ವೈಖಾನಸ ಆಗಮದ ಪ್ರಮುಖ ಆಚರಣೆ ಆಗಿದೆ. ಬ್ರಹ್ಮೋತ್ಸವದ ಹಿಂದಿನ ದಿನ ಇದನ್ನು ಪೂರ್ವಭಾವಿಯಾಗಿ ಆಚರಿಸಲಾಗುವುದು. ಇದು ಉಯ್ಯಾಲೆ ಉತ್ಸವವಾಗಿದೆ.
ಈ ಆಚರಣೆಯ ಉದ್ದೇಶ 9 ದಿನಗಳ ಕಾಲ ನಡೆಯುವ ಉತ್ಸವವೂ ಯಶಸ್ವಿಯಾಗಿ ಆಚರಣೆಯಾಗಿ ನಡೆಯುವಂತೆ ಮಾಡುವ ಸಂಕಲ್ಪವಾಗಿದೆ. ಈ ಆಚರಣೆಯ ಮತ್ತೊಂದು ಪ್ರಮುಖ ಅಂಶ ಎಂದರೆ ಇದನ್ನು ಹಗಲಿನಲ್ಲಿ ಆಡುವಂತಿಲ್ಲ. ಜ್ಯೋತಿಷ್ಯ ತತ್ಬದ ಅನುಸಾರ ಚಂದ್ರನ ಬೆಳಕಿನಲ್ಲಿ ಮಾಡಲಾಗುವುದು. ಚಂದ್ರನನ್ನು ವಾಸ್ತವವಾಗಿ ಬಲಶಾಲಿ ಎಂದು ನಂಬಲಾಗಿದ್ದು, ಮಂಗಳಕರ ಲಹ್ನ ಕ್ಕೆ ಇದು ಉತ್ತಮ ಮೂಹರ್ತ ಎಂದು ಪರಿಗಣಿಸಲಾಗುವುದು.
ಏನಿದು ಪಾಲಿಕಾ: ಅಂಕುರಾರ್ಪಣವನ್ನು ಮಾಡುವಾಗ ಸಾಮಾನ್ಯವಾಗಿ ಬಳಸುವ ಚಿನ್ನ ಅಥವಾ ಬೆಳ್ಳಿ ಅಥವಾ ತಾಮ್ರ ಅಥವಾ ಮಣ್ಣಿನ ಪಾತ್ರೆಗಳನ್ನು ಪಾಲಿಕಾ ಎಂದು ಕರೆಯಲಾಗುವವುದು. ಇವುಗಳನ್ನು ಯಾಗಶಾಲೆಯಲ್ಲಿ ಇಡಲಾಗುವುದು. ಇದರಲ್ಲಿ ಬೀಜಗಳ ಬಿತ್ತನೆ ಮಾಡಲಾಗುವುದು. ಈ ಬೀಜಗಳು ಮೊಳಕೆಯೊಡುವುದು ವೈಭವಪೂರ್ಣವಾಗಿ ಆಚರಿಸಲಾಗುವುದು. ಇದಾದ ಬಳಿಕ ಸೇನಾಧಿಪತಿ ಉತ್ಸವ, ಮೃತ್ಸಂಗರಾಹಣ, ವಾರ್ಷಿಕ ಬ್ರಹ್ಮೋತ್ಸವಗಳಿಗೆ ಅಂಕುರಾರ್ಪಣೆ ನಡೆಸಲಾಗುವುದು.
ಇದನ್ನೂ ಓದಿ: ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಂಜನಗೂಡು ಪಂಚ ಮಹಾರಥೋತ್ಸವ ವೈಭವ: ವಿಡಿಯೋ