Donald Trump And Elon Musk Watch SpaceX Rocket Launch: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಬಳಿಕ ಟೆಸ್ಲಾ ಹಾಗೂ ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್ ಹಾಗೂ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ಇದೀಗ ಇವರಿಬ್ಬರೂ ಸ್ಪೇಸ್‌ಎಕ್ಸ್‌ಗೆ ಸೇರಿದ ಬೃಹತ್ ಸ್ಟಾರ್‌ಶಿಪ್ ರಾಕೆಟ್ ಉಡಾವಣೆಯನ್ನು ನೇರವಾಗಿ ವೀಕ್ಷಿಸಿದ್ದಾರೆ. ಉಡ್ಡಯನದ ಒಂದು ಹಂತ ವಿಫಲವಾದರೆ, ಎರಡನೇ ಹಂತ ಯಶಸ್ವಿಯಾಯಿತು.
ಸ್ಪೇಸ್ಎಕ್ಸ್ ಉಡ್ಡಯನದ ಉದ್ದೇಶವೇನು?: ಸ್ಪೇಸ್‌ಎಕ್ಸ್ ಮಂಗಳವಾರ (ಯುಎಸ್ ಕಾಲಮಾನ) ಟೆಕ್ಸಾಸ್‌ನಲ್ಲಿ ಸುಮಾರು 400 ಅಡಿ ಎತ್ತರದ ಬೃಹತ್ ರಾಕೆಟ್ ಉಡಾಯಿಸಿತು. ಈ ರಾಕೆಟ್ ಅನ್ನು ಚಂದ್ರನ ಮೇಲೆ ಗಗನಯಾತ್ರಿಗಳನ್ನು ಸಾಗಿಸಲು ಮತ್ತು ಮಂಗಳ ಗ್ರಹಕ್ಕೆ ಫೆರ್ರಿ ಕ್ರೂಸ್ ಸಾಗಿಸಲು ಅನುವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಬೂಸ್ಟರ್ ಯೋಜಿಸಿದಂತೆ ಭೂಮಿಗೆ ಹಿಂತಿರುಗಿದರೆ, ಲಾಂಚ್‌ಪ್ಯಾಡ್‌ನಲ್ಲಿರುವ ಮೆಕ್ಯಾನಿಕಲ್ ಆರ್ಮಸ್ ಅದನ್ನು ಹಿಡಿಯಬೇಕು. ಆದರೆ, ಇತ್ತೀಚಿನ ಪ್ರಯೋಗದಲ್ಲಿ ಈ ಹಂತ ವಿಫಲವಾಗಿದೆ.
With data and flight learnings as our primary payload, Starship’s sixth flight test once again delivered → https://t.co/oIFc3u9laE pic.twitter.com/O6ZKThQRr6
— SpaceX (@SpaceX) November 20, 2024
ಉಡಾವಣೆಯಾದ ನಾಲ್ಕು ನಿಮಿಷಗಳ ನಂತರ ತಾಂತ್ರಿಕ ಸಮಸ್ಯೆಯಿಂದ 'ಬೂಸ್ಟರ್ ಕ್ಯಾಚ್' ಪ್ರಕ್ರಿಯೆಯನ್ನು ನಿಲ್ಲಿಸಲಾಯಿತು. ಮತ್ತೊಂದು ಬೂಸ್ಟರ್ ಮೂರು ನಿಮಿಷಗಳ ನಂತರ, ಗಲ್ಫ್ ಆಫ್ ಮೆಕ್ಸಿಕೋದ ನೀರಿನಲ್ಲಿ ಇಳಿಯಿತು. ಪರೀಕ್ಷೆಗೆ ಬಳಸಲಾದ ಖಾಲಿ ಸ್ಟಾರ್‌ಶಿಪ್ ಕ್ಯಾರಿಯರ್ ಸುಮಾರು 90 ನಿಮಿಷಗಳ ಕಾಲ ಭೂಮಿಯನ್ನು ಸುತ್ತಿ ಹಿಂದೂ ಮಹಾಸಾಗರದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಇದಕ್ಕೆ ಸಂಬಂಧಿಸಿದ ದೃಶ್ಯಗಳನ್ನು ಸ್ಪೇಸ್ ಎಕ್ಸ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಉಡಾವಣೆಗೂ ಮುನ್ನ ಸ್ಪೇಸ್‌ಎಕ್ಸ್ ರಾಕೆಟ್ ಉಡಾವಣೆಯನ್ನು ವೀಕ್ಷಿಸಲಿದ್ದೇನೆ ಎಂದು ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು. "ನಾನು ಟೆಕ್ಸಾಸ್‌ನ ಗ್ರೇಟ್ ಸ್ಟೇಟ್ನಲ್ಲಿ SpaceXನಿಂದ ರಾಕೆಟ್ ಉಡಾವಣೆಯನ್ನು ನೋಡಲಿದ್ದೇನೆ. ಮಸ್ಕ್‌ಗೆ ಶುಭಾಶಯಗಳು" ಎಂದು ಬರೆದುಕೊಂಡಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಪುತ್ರ ಸೇರಿದಂತೆ ಹಲವಾರು ರಿಪಬ್ಲಿಕನ್ ನಾಯಕರು ಕೂಡಾ ಉಡಾವಣೆಗೆ ಸಾಕ್ಷಿಯಾದರು.
Successful ocean landing of Starship!
— Elon Musk (@elonmusk) November 20, 2024
We will do one more ocean landing of the ship. If that goes well, then SpaceX will attempt to catch the ship with the tower. https://t.co/osFud7XXPo
ಕಳೆದ ತಿಂಗಳು ಸ್ಪೇಸ್‌ಎಕ್ಸ್ ಬೃಹತ್ ಸ್ಟಾರ್‌ಶಿಪ್ ರಾಕೆಟ್ ಬೂಸ್ಟರ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. ಸ್ಟಾರ್‌ಶಿಪ್ ಬಾಹ್ಯಾಕಾಶಕ್ಕೆ ತೆರಳಿ ಲಾಂಚ್ ಪ್ಯಾಡ್ನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಇದೊಂದು ಇಂಜಿನಿಯರಿಂಗ್ ವಿಸ್ಮಯವಾಗಿದ್ದು, ವಿಶ್ವದಾದ್ಯಂತ ಪ್ರಶಂಸೆ ಗಳಿಸಿದೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವಿನಲ್ಲಿ ಎಲೋನ್ ಮಸ್ಕ್ ಪ್ರಮುಖ ಪಾತ್ರ ವಹಿಸಿದ್ದರು. ಟ್ರಂಪ್ ಗೆಲುವಿಗಾಗಿ ದೊಡ್ಡ ಪ್ರಮಾಣದ ದೇಣಿಗೆ ನೀಡಿ ಬೆಂಬಲಿಸಿದ್ದರು. ಚುನಾವಣಾ ಪ್ರಚಾರದಲ್ಲೂ ಭಾಗವಹಿಸಿದ್ದರು. ಗೆಲುವಿನ ನಂತರ ಟ್ರಂಪ್ ತಮ್ಮ ಸರ್ಕಾರದಲ್ಲಿ ಮಸ್ಕ್‌ಗೆ ಪ್ರಮುಖ ಜವಾಬ್ದಾರಿಗಳನ್ನು ವಹಿಸಿದ್ದಾರೆ. ಮಸ್ಕ್ ಮತ್ತು ವಿವೇಕ್ ರಾಮಸ್ವಾಮಿ ಅವರನ್ನು ಸರ್ಕಾರದ ದಕ್ಷತೆಯ ವಿಭಾಗದ (ಡೋಸ್) ಜಂಟಿ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ.
ಇದನ್ನೂ ಓದಿ: ಮೆಟ್ರೋ, ಬಸ್ ಎಲ್ಲಿ ಬೇಕಾದ್ರೂ ಬಳಸಿ ಇ-ಕಿಕ್ ಸ್ಕೂಟರ್: ಮಡಚಿ ಬ್ಯಾಗ್ನಲ್ಲೂ ಇಡಬಹುದು!