ETV Bharat / state

ಏರ್ಪೋರ್ಟ್‌ನಲ್ಲಿ ಕಳೆದುಹೋದ ಚಿನ್ನದ ಸರ ಚಾಲಕನ ಕೈಗೆ: ಮರಳಿ ವಾರಸುದಾರರಿಗೆ ತಲುಪಿಸಿದ CISF ಸಿಬ್ಬಂದಿ - LOST GOLD CHAIN RETURNED TO OWNER

ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದು ಹೋಗಿದ್ದ ಬಾಲಕನ ಚಿನ್ನದ ಸರವನ್ನು ಸಿಐಎಸ್‌ಎಫ್ ಸಿಬ್ಬಂದಿ ತನಿಖೆ ಮಾಡಿ ಅದೇ ದಿನ ಹುಡುಕಿ ಕೊಟ್ಟಿದ್ದಾರೆ.

GOLD CHAIN LOST AT THE AIRPORT  MANGALURU  DAKSHINA KANNADA  CISF PERSONNEL LOST GOLD CHAIN RETURNED TO OWNER
ಏರ್ಪೋರ್ಟ್‌ನಲ್ಲಿ ಕಳೆದುಹೋಗಿದ್ದ ಮಗುವಿನ ಚಿನ್ನದ ಸರವನ್ನು ಮರಳಿ ವಾರಸುದಾರರಿಗೆ ತಲುಪಿಸಿದ ಸಿಐಎಸ್‌ಎಫ್ ಸಿಬ್ಬಂದಿ (ETV Bharat)
author img

By ETV Bharat Karnataka Team

Published : Jan 29, 2025, 11:17 AM IST

ಮಂಗಳೂರು: ನಗರದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಇಂಡಿಗೋ ವಿಮಾನದಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರ ಮಗುವಿನ ಕಳೆದು ಹೋಗಿದ್ದ ಚಿನ್ನದ ಸರವನ್ನು ಸಿಐಎಸ್‌ಎಫ್ ಸಿಬ್ಬಂದಿ ವಾಪಸ್‌ ದೊರಕಿಸಿಕೊಟ್ಟಿದ್ದಾರೆ.

ಜ.26ರಂದು ಬೆಳಗ್ಗೆ 8.30ಕ್ಕೆ ರಚನಾ ಮಾರ್ಲ ಎಂಬ ಮಹಿಳೆ ತಮ್ಮ ಮಗುವಿನೊಂದಿಗೆ ವಿಮಾನ ನಿಲ್ದಾಣದಲ್ಲಿ ಚೆಕ್ಕಿಂಗ್ ಆಗಿ ವಿಮಾನದ ಬಳಿ ಬರುತ್ತಿದ್ದರು. ಈ ವೇಳೆ ಮಗುವಿನ ಕತ್ತಿನಲ್ಲಿ ಸರ ಇಲ್ಲದಿರುವುದು ಗಮನಕ್ಕೆ ಬಂದಿದೆ. ಆದರೆ ಹೊರಗೆ ಬಂದು ಸರ ಬಿದ್ದು ಹೋಗಿದೆಯೇ ಎಂದು ಪರಿಶೀಲನೆ ಮಾಡುವಷ್ಟು ಸಮಯವೂ ಇರಲಿಲ್ಲ. ಆದ್ದರಿಂದ ಅವರು ಏರ್ಪೋರ್ಟ್ ಸಿಐಎಸ್‌ಎಫ್‌ ಭದ್ರತಾ ಸಿಬ್ಬಂದಿಗೆ ಸರ ಬಿದ್ದುಹೋಗಿರುವ ಬಗ್ಗೆ ದೂರು ಕೊಟ್ಟು ಬೆಂಗಳೂರಿಗೆ ತೆರಳಿದ್ದರು.

ಸಿಐಎಸ್‌ಎಫ್ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ. ಆಗ ಏರ್ಪೋರ್ಟ್ ಮೇಲಂತಸ್ತಿನಲ್ಲಿ ಕಾರಿನಿಂದ ಇಳಿದು ಒಳಗೆ ಬರುವಾಗಲೇ ಮಗುವಿನ ಸರ ಬಿದ್ದು ಹೋಗಿರುವುದು ತಿಳಿದು ಬಂದಿದೆ. ಅಲ್ಲದೆ, ಆ ಸರ ವಾಹನವೊಂದರ ಚಾಲಕನಿಗೆ ಸಿಕ್ಕಿದ್ದು, ಆತ ಅದನ್ನು ತೆಗೆದುಕೊಂಡು ಹೋದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆದ್ದರಿಂದ ಆ ವಾಹನದ ನಂಬರ್ ಮೂಲಕ ಚಾಲಕನ ಪತ್ತೆ ಮಾಡಿ ಪೊಲೀಸರು ಕರೆ ಮಾಡಿದ್ದರು. ಈ ವೇಳೆ, ಸರ ಬಿದ್ದು ಸಿಕ್ಕಿರುವುದನ್ನು ಒಪ್ಪಿಕೊಂಡ ಚಾಲಕ, ಅದನ್ನು ವಾರಸುದಾರರಿಗೆ ನೀಡುತ್ತೇನೆ ಎಂದು ಹೇಳಿದ್ದಾನೆ.

ಸಿಐಎಸ್‌ಎಫ್‌ ಸಿಬ್ಬಂದಿ ಈ ಬಗ್ಗೆ ಆ ಮಹಿಳೆಗೆ ಫೋನ್ ಕರೆ ಮಾಡಿ ವಿಷಯ ತಿಳಿಸಿದ್ದರು. ತನಗೆ ಸರ ಸಿಕ್ಕಿದರಾಯ್ತು. ದೂರು ಕೊಡುವ ಆಸಕ್ತಿಯಿಲ್ಲ ಎಂದು ಆಕೆ ಹೇಳಿದ್ದಾರೆ. ಅದರಂತೆ, ಸಿಐಎಸ್‌ಎಫ್‌ ಅಧಿಕಾರಿಗಳು ಚಾಲಕನನ್ನು ಕರೆಸಿ ವಿಮಾನ ನಿಲ್ದಾಣದ ಕಚೇರಿಯಲ್ಲಿ ತಪ್ಪೊಪ್ಪಿಗೆ ಪತ್ರ ಬರೆಸಿ ಚಿನ್ನದ ಸರ ಪಡೆದು ಬಿಟ್ಟು ಕಳಿಸಿದ್ದಾರೆ.

ಮಹಿಳೆಯ ಕುಟುಂಬಸ್ಥರು ಬಳಿಕ ಏರ್ಪೋರ್ಟ್‌ಗೆ ಆಗಮಿಸಿ ಚಿನ್ನದ ಸರ ಪಡೆದು ತೆರಳಿದ್ದಾರೆ. ಈ ಬಗ್ಗೆ ಸ್ವತಃ ರಚನಾ ಅವರೇ ವಿಡಿಯೋ ಮಾಡಿ "ಮಂಗಳೂರು ವಿಮಾನ ನಿಲ್ದಾಣದಲ್ಲಿ CISF ತಂಡ ಮಾಡಿದ ಶ್ಲಾಘನೀಯ ಕೆಲಸಕ್ಕೆ ನಾನು ಸಾಕ್ಷಿಯಾಗಲು ಬಯಸುತ್ತೇನೆ. ಅವರಿಗೆ ಹ್ಯಾಟ್ಸ್ ಆಫ್. ನಾನು ಮಂಗಳೂರಿನಿಂದ ಬೆಂಗಳೂರಿಗೆ ವಿಮಾನ ಹತ್ತುತ್ತಿದ್ದೆ, ಅದು ಇಂಡಿಗೊದ ವಿಮಾನ. ನಾನು ಬೆಳಿಗ್ಗೆ 8.30ಕ್ಕೆ ವಿಮಾನ ನಿಲ್ದಾಣದಲ್ಲಿ ಇಳಿದಿದ್ದೆ, ಮತ್ತು 30 ನಿಮಿಷಗಳ ಅವಧಿಯಲ್ಲಿ, ಸರ ಕಾಣೆಯಾಗಿದೆ ಎಂದು ನಮಗೆ ಅರಿವಾಯಿತು. ಆಗ ನಾನು ನನ್ನ ಮಗನನ್ನು ತಪಾಸಣೆ ಮಾಡುತ್ತಿದ್ದ CISF ಸಿಬ್ಬಂದಿಗೆ ದೂರು ನೀಡಿದ್ದೆ. ಬೆಳಿಗ್ಗೆ 9 ಗಂಟೆ ಸುಮಾರಿಗೆ ನಾನು ದೂರು ನೀಡಿದ್ದೆ ಮತ್ತು ಸಂಜೆ 7 ಗಂಟೆಯ ಹೊತ್ತಿಗೆ, ಅವರು ಸರ ತೆಗೆದುಕೊಂಡ ವ್ಯಕ್ತಿಯನ್ನು ಪತ್ತೆಹಚ್ಚಿದರು ಮತ್ತು ಅದೇ ದಿನ ನನ್ನ ಕುಟುಂಬ ಸದಸ್ಯರಿಗೆ ಸರವನ್ನು ಹಸ್ತಾಂತರಿಸಲಾಯಿತು. ಇಂದು ನಾನು ತುಂಬಾ ಭಾವುಕನಾಗಿದ್ದೆ, ಆದರೆ ಇದು ಒಂದು ಪವಾಡದಂತೆ ನಡೆದಿದೆ. ಇಂದು ಈ ಶೋಧ ಕಾರ್ಯಾಚರಣೆಯಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬ ವ್ಯಕ್ತಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ತುಂಬಾ ಧನ್ಯವಾದಗಳು. ಭಾರತವು ಇಂತಹ ತಂಡದೊಂದಿಗೆ ಉತ್ತಮ ಕೈಯಲ್ಲಿದೆ ಎಂದು ನಾನು ಹೇಳಬಲ್ಲೆ" ಎಂದಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆ ವೈದ್ಯನ​ ಅಪಹರಣ ಪ್ರಕರಣ: 7 ಮಂದಿ ಬಂಧನ, ಓರ್ವನಿಗೆ ಗುಂಡೇಟು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.