2025ರ ಕುಂಭಮೇಳವು ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿದ್ದು, ವಿವಿಧ ಕ್ಷೇತ್ರಗಳ ಗಣ್ಯರೂ ಸೇರಿದಂತೆ ಕೋಟ್ಯಂತರ ಭಕ್ತರು ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾ ಸೆಲೆಬ್ರಿಟಿಗಳೂ ಸೇರಿದಂತೆ ಕೋಟ್ಯಂತರ ಭಕ್ತರು ಪವಿತ್ರ ಕ್ಷಣದಲ್ಲಿ ಮಿಂದೆದ್ದಿದ್ದಾರೆ. ಇದೀಗ ರಾಜ್ ಬಿ ಶೆಟ್ಟಿ, ಅನುಶ್ರೀ ಸೇರಿ ಕೆಲ ಕನ್ನಡ ಸಿನಿ ಗಣ್ಯರು ಮಹಾಕುಂಭದಲ್ಲಿ ಭಾಗಿಯಾಗಿದ್ದಾರೆ.
ಅನುಶ್ರೀ ಪೋಸ್ಟ್ : ''ಸಂಗಮದಲ್ಲಿ ಮಿಂದು, ಕಣ್ಣುಗಳು ನೆಂದು, ಭಗವಂತ ನೀನೆ ನಮಗೆಲ್ಲ ಅಂದು ಇಂದು ಇನ್ನೆಂದೆಂದು ಎಂದು ಬಂದು ಕೂತಾಗ ಮನಸ್ಸಿಗೆ ಸಿಕ್ಕ ನೆಮ್ಮದಿ ಸಿಗದು ಎಂದೆಂದು! ಕೋಟಿ ಜನ ಸೇರೋ ಜಾಗ, ಸಿಕ್ಕಾಪಟ್ಟೆ ಕಷ್ಟ ಯಾಕೆ ಬೇಕು ನಮಗೆ ಅಂತ ಮನೆಯಲ್ಲಿ ಕೂತಿದ್ರೆ ಈ ದೈವಿಕ ಅನುಭವ ಸಿಗ್ತಿರ್ಲಿಲ್ಲ! 29/01/2025 ಮೌನಿ ಅಮಾವಾಸ್ಯೆ, ಹರ ಹರ ಮಹದೇವ್!'' ಎಂದು ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ನಿರೂಪಕಿ ಅನುಶ್ರೀ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಇಲ್ಲಿ ಕನ್ನಡ ಸಿನಿಗಣ್ಯರನ್ನು ಜೊತೆಯಾಗಿ ಕಾಣಬಹುದು.
ರಾಜ್ ಬಿ ಶೆಟ್ಟಿ ಪೋಸ್ಟ್ : ಕುಂಭಮೇಳದಲ್ಲಿ ಭಾಗಿಯಾದ ಮೂರು ಫೋಟೋಗಳನ್ನು ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ ರಾಜ್ ಬಿ ಶೆಟ್ಟಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ, ಮಹಾ ಕುಂಭ ಮತ್ತು ಭಾಗವಹಿಸಿದವರು ಎಂಬ ಕ್ಯಾಪ್ಷನ್ ನೀಡಿದ್ದಾರೆ.
ಕಿರಣ್ ರಾಜ್ ಪೋಸ್ಟ್ : ನಿರ್ದೆಶಕ ಕಿರಣ್ ರಾಜ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಫೋಟೋಗಳನ್ನು ಹಂಚಿಕೊಂಡು, ಮೌನಿ ಅಮವಾಸ್ಯೆಯಂದು ಸಂಗಮದಲ್ಲಿ ಮಿಂದೆದ್ದಾಗ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕ್ಯಾನ್ಸರ್ ಗೆದ್ದು ಬಾಸ್ನಂತೆ ಕಿರುತೆರೆಯಲ್ಲಿ ಕಾಣಿಸಿಕೊಂಡ ಶಿವಣ್ಣ; 'ಮಹಾ ಮನರಂಜನೆ'ಗೆ ನೀವು ರೆಡಿಯಾಗಿ!
ಆನ್ಲೈನ್ನಲ್ಲಿ ಈ ಪೋಸ್ಟ್ ಸಖತ್ ಸದ್ದು ಮಾಡುತ್ತಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ''ನೀವು ಈ ದೈವಿಕ ಕ್ಷಣವನ್ನು ಅನುಭವಿಸಿದ್ದಕ್ಕೆ ನನಗೆ ತುಂಬಾನೇ ಸಂತೋಷವಾಗಿದೆ'' ಎಂದು ಓರ್ವರು ತಿಳಿಸಿದ್ದಾರೆ. 'ಹೆಮ್ಮೆಯ ಕ್ಷಣ' ಎಂದು ಅಭಿಮಾನಿಯೋರ್ವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ರಾಜ್ ಬಿ ಶೆಟ್ಟಿ ವ್ಯಕ್ತಿತ್ವವನ್ನು ಗುಣಗಾನ ಮಾಡಿದ ಅಭಿಮಾನಿಯೋರ್ವರು, 'ನಗೆಯಲ್ಲಿ ಸರಳತೆ, ತೂಕದ ವ್ಯಕ್ತಿತ್ವ' ಎಂದು ತಿಳಿಸಿದ್ದಾರೆ. 'ಶಿವ ಪರಮ ಶಿವನನ್ನು ಭೇಟಿಯಾದ ಕ್ಷಣ' ಎಂದು ಓರ್ವರು ತಿಳಿಸಿದ್ದಾರೆ. ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಇವರ ಪೋಸ್ಟ್ಗೆ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಇದನ್ನೂ ಓದಿ: ಕುಂಭಮೇಳದಲ್ಲಿ ಪ್ರಕಾಶ್ ರಾಜ್ ಪವಿತ್ರ ಸ್ನಾನದ ನಕಲಿ ಫೋಟೋ: ಹರಿಬಿಟ್ಟವರ ವಿರುದ್ಧ ದೂರು ದಾಖಲು
ಮಹಾ ಕುಂಭಮೇಳಕ್ಕೆ ಸಂಬಂಧಿಸಿದಂತೆ ಕೆಲ ನೆಟ್ಟಿಗರು AI ಮೂಲಕ ಪುಣ್ಯ ಸ್ನಾನ ಮಾಡುತ್ತಿರುವ ಜನಪ್ರಿಯರ ಫೇಕ್ ಫೋಟೋ ರಚಿಸಿ ಅದನ್ನು ವೈರಲ್ ಮಾಡುತ್ತಿದ್ದಾರೆ. ಇತ್ತೀಚೆಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ನಕಲಿ ಫೋಟೋ ವೈರಲ್ ಆಗಿತ್ತು. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು ದೂರು ದಾಖಲಿಸಿದ್ದಾರೆ.